ಶಿವಣ್ಣ ಟಗರಿನ ಜತೆ ಸೆಣೆಸುವ ಚಿತ್ರದ ದೃಶ್ಯ ಸೆರೆಹಿಡಿಯುವುದನ್ನು ಕೇಳಿದ್ದೆವು. ಆದರೆ ಮೈಲಾರಿ ಚಿತ್ರದಲ್ಲಿ ಇದೇಕೆ ಬರುತ್ತೆ ಅನ್ನುವ ಕುತೂಹಲ ಹಲವರಿಗೆ ಇತ್ತು. ಅದಕ್ಕೇ ಈ ಸ್ಟೋರಿ.
ಶಿವಣ್ಣ ಹರಕೆಗೆ ಬಲಿಯಾಗಬೇಕಿದ್ದ ಕುರಿಯ ಜೊತೆ ಸೆಣಸಿ, ಅದನ್ನು ಸೋಲಿಸಿ ತಾನು ಗೆಲ್ಲುವ ಮೂಲಕ ಟಗರನ್ನು ಸಾವಿನ ದವಡೆಯಿಂದ ಆಚೆ ತರುತ್ತಾರೆ. ಚಿತ್ರದಲ್ಲಿ ಈ ದೃಶ್ಯ ತುರುಕುವ ಮೂಲಕ ಸಾಂಪ್ರದಾಯಿಕ ಆಚರಣೆಗೆ ಒಂದು ವಿರೋಧದ ಕೆನ್ನಾಲಿಗೆ ಹಚ್ಚುವ ಕಾರ್ಯವನ್ನು ಚಿತ್ರತಂಡ ಮಾಡಿದೆ.
ಈಗಾಗಲೇ ಸಾಕಷ್ಟು ಚಿತ್ರಗಳು ನಮ್ಮ ಮೂಢನಂಬಿಕೆ ಹಾಗೂ ಅಸಂಬದ್ಧ ಆಚರಣೆಗೆ ಕಡಿವಾಣ ಹಾಕಲು ಯತ್ನಿಸುತ್ತಿವೆ. ಚಿತ್ರದ ಮೂಲಕ ಇದು ತಪ್ಪೆಂದು ಸಾರುತ್ತಿವೆ. ಇಂತಹ ಮೂಢನಂಬಿಕೆಗಳ ಆಚರಣೆಗೂ ಅಂತಿಮ ಹಾಡಲು ಮೈಲಾರಿ ಚಿತ್ರ ಯತ್ನಿಸುತ್ತಿದೆ. ಅದರ ಯತ್ನಕ್ಕೆ ಜಯವಾಗಲಿ.
ಶಿವಣ್ಣನದ್ದು ಹಳ್ಳಿ ಹೈದನ ಪತ್ರ. ಇದರಲ್ಲಿ ಆತನ ಕಣ್ಮಣಿಯಾಗಿ ಸದಾ ಅಭಿನಯಿಸುತ್ತಿದ್ದಾರೆ. ಇವಳದ್ದು ಸಹ ಹಳ್ಳಿ ಹುಡುಗಿ ಗೆಟಪ್ಪೇ! ಸಂಪೂರ್ಣ ಗ್ರಾಮೀಣ ಸೊಗಡನ್ನು ಈ ಚಿತ್ರ ಕಟ್ಟಿ ಕೊಡುತ್ತದೆ. ಹಾಗಂತ ಚಿತ್ರದಲ್ಲಿ ಪಟ್ಟಣ ಇರೊಲ್ವೇ? ಅಂತ ಕೇಳುವವರಿಗೆ ಇದೆ ಸ್ವಾಮೀ. ಶಿವಣ್ಣ ಈ ಚಿತ್ರದಲ್ಲಿ 5 ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ.
ಚಿತ್ರ ಶೇ.75ರಷ್ಟು ಪೂರ್ಣಗೊಂಡಿದೆ. ಒಟ್ಟು ಆರು ಗಮನ ಸೆಳೆಯುವ ಹಾಡುಗಳಿವೆ. ಒಟ್ಟಾರೆ ಚಿತ್ರ ಅಂದುಕೊಂಡ ಹಾಗೆಯೇ ಮೂಡಿಬರುತ್ತಿದೆಯಂತೆ. ಈ ಚಿತ್ರದಿಂದಾಗಿ ಶಿವಣ್ಣನ ವರ್ಚಸ್ಸು ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಅಂದಹಗೆ ಚಿತ್ರದ ನಿರ್ದೇಶಕ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಅದೇ ತಾಜ್ ಮಹಲ್ ಚಿತ್ರ ನೀಡಿದ ಚಂದ್ರು.