ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್ ಜೊತೆಗೆ 'ಪ್ಯಾಟೆ ಹುಡುಗೀರ್ ಹಳ್ಳಿ ಲೈಫು'! (Sudeep | Pyate Hudgeer Halli Laifu | Kannada Cinema | Suvarna TV | Reality Show)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಟಿವಿ ವಾಹಿನಿಯೊಂದು ಹಳ್ಳಿ ಹುಡುಗಿಯರ ಬದುಕನ್ನು ನಗರ ಹುಡುಗಿಯರಿಗೆ ಕಲಿಸಲು ಮುಂದಾಗಿದೆ. ಹೌದು. ಇದೊಂದು ಪಕ್ಕಾ ಕಮರ್ಶಿಯಲ್ ಕಾರ್ಯಕ್ರಮ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಳ್ಳಿಯಲ್ಲಿ ಹುಡುಗಿಯರು ಪಡುವ ಬವಣೆಯನ್ನು ತೋರಿಸುವುದು ಹಾಗೂ ಇದರಲ್ಲಿ ಗೆದ್ದವರು ಏನಾಗುತ್ತಾರೆ ಎನ್ನುವುದನ್ನು ತೋರಿಸುವುದು ಈ ಕಾರ್ಯಕ್ರಮದ ಉದ್ದೇಶವಂತೆ.

ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಪ್ರಸಾರ ಆಗುತ್ತಿದೆ. ಸುದೀಪ್ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿ ಪೇಟೆ ಹುಡುಗಿಯರು ಬೆಳಗ್ಗೆ ಐದಕ್ಕೆಲ್ಲಾ ಎದ್ದು ಮನೆ ಮುಂದೆ ರಂಗೋಲಿ ಹಾಕುವುದು, ಹೊಲ ಗದ್ದೆಗೆ ತೆರಳಿ ಬೇಸಾಯ ಮಾಡುವುದು, ಪಾತ್ರೆ ತೊಳೆಯುವುದು, ಕಸ ಗುಡಿಸುವುದು ಹಾಗೂ ಇತ್ಯಾದಿ ಕೆಲಸ ಮಾಡುವುದು ಅನಿವಾರ್ಯ. ಹಳ್ಳಿಗರು ಮಾಡುವ ಎಲ್ಲಾ ಕೆಲಸವನ್ನೂ ಇವರು ಮಾಡಬೇಕು. ಹೇಗಿದೆ ನೋಡಿ ಈ ಕಾರ್ಯಕ್ರಮದ ಮೋಜು.

ಇಂಥವರನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ನಟ ಸುದೀಪ್. ಎಲ್ಲ ಸೇರಿ ಎರಡು ತಿಂಗಳು ಕೆಲಸ ಮಾಡಬೇಕು. ಇದರಲ್ಲಿ ಅಂತಿಮವಾಗಿ ಗೆದ್ದವರಿಗೆ ಪ್ರಶಸ್ತಿಯೂ ಉಂಟು. ಈ ಒಂದು ರಿಯಾಲಿಟಿ ಶೋ ಈಗ ಕನ್ನಡದ ಎಲ್ಲಾ ಮನೆಯ ಮಾತಾಗಿ ಜನಪ್ರಿಯವಾಗಿದೆ.

ಇದು ಸುವರ್ಣವಾಹಿನಿಯಲ್ಲಿ ಪ್ರತಿ ರಾತ್ರಿ 7ಕ್ಕೆ ಪ್ರಸಾರವಾಗುತ್ತಿದೆ. ರಕ್ಷಿತಾರ ನೇತೃತ್ವದಲ್ಲಿ ಸ್ವಯಂವರ ನಡೆಸಿ ಮದುವೆಯನ್ನೂ ಮಾಡಿಸಲು ಹೊರಟ ಸುವರ್ಣ ವಾಹಿನಿ ಇದೀಗ ಮತ್ತೊಂದು ಡಿಫರೆಂಟ್ ರಿಯಾಲಿಟಿ ಶೋ ಮೂಲಕ ಜನರನ್ನು ಮನರಂಜಿಸಲು ಹೊರಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುದೀಪ್, ಪ್ಯಾಟೆ ಹುಡುಗೀರ್ ಹಳ್ಳಿ ಲೈಫು, ಕನ್ನಡ ಸಿನಿಮಾ