ಕನ್ನಡ ಚಿತ್ರರಸಿಕರಿಗೆ ಮತ್ತಷ್ಟು ಆಪ್ತವಾಗಲು ಹೊರಟ ಪೂಜಾಗಾಂಧಿ
MOKSHA
ಆಪ್ತಮಿತ್ರ ಹಾಗೂ ಆಪ್ತರಕ್ಷಕ ನೋಡಿ ಪುಳಕಿತರಾಗಿದ್ದ ನಿಮಗೆಲ್ಲಾ ಶೀಘ್ರವೇ ಆಪ್ತಪೂಜಾ ನೋಡುವ ಅವಕಾಶ ಒದಗಿ ಬರಲಿದೆ. ಆಶ್ಚರ್ಯಚಕಿತರಾಗಬೇಡಿ. ಹೌದು. ಸದ್ಯ ಕನ್ನಡದ ಮಳೆಹುಡುಗಿ ಪೂಜಾ ಗಾಂಧಿಯೀಗ ಜನರಿಗೆ ಇನ್ನಷ್ಟು 'ಆಪ್ತ'ವಾಗಲು ಒಂದು ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಹೆಸರೇ ಆಪ್ತ.
ಚಿತ್ರವನ್ನು ಸಂಜೀವ್ ಕುಮಾರ್ ಮೇಗೋಟಿ ನಿರ್ದೇಶಿಸಲಿದ್ದಾರೆ. ಇವರು ಈ ಹಿಂದೆ ಅನು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಪೂಜಾ ಗಾಂಧಿ ನೀಡಿದ ಅದ್ಬುತ ಅಭಿನಯ ಇವರನ್ನು ಸೆಳೆದಿದೆಯಂತೆ. ಅದಕ್ಕಾಗಿ ಇವರೇ ಇರಲಿ ಅಂತ ಹೇಳಿ ಆಯ್ಕೆಮಾಡಿಕೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ತೆಲುಗಿನಲ್ಲಿ ಕೊಂಚ ಬ್ಯುಸಿ ಆಗಿದ್ದ ಇವರು. ಅಲ್ಲಿನ ನಿರ್ದೇಶಕ ಪೌರುಷಂ ಜತೆ ಕೆಲಸ ಮಾಡಿಕೊಂಡಿದ್ದರು. ಅಲ್ಲಿ ಮೂರು ಚಿತ್ರ ಕೊಟ್ಟು ಯಶಸ್ವಿಯಾಗಿದ್ದಾರೆ. ಇದೀಗ ಅವರೇ ಕನ್ನಡ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.
ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಜಿ.ವಿ.ರಾಜೇಂದ್ರ ಸಂಭಾಷಣೆ ಬರೆದಿದ್ದಾರೆ. ಪಿ.ಎಸ್.ಬಾಬು ಛಾಯಾಗ್ರಹಣವಿದ್ದು, ಎಸ್ಕರ್ ಮಾರಿಯೋ ಸಂಗೀತ ನೀಡಿದ್ದಾರೆ. ಅನು ಮಾದರಿಯಲ್ಲೇ ಇದು ಸಹ ನಾಯಕಿ ಪ್ರಧಾನ ಚಿತ್ರವಾಗಿದೆ. ಇದಕ್ಕಾಗಿಯೇ ಪೂಜಾ ಗಾಂಧಿ ಆಯ್ಕೆಯಾಗಿದ್ದಾರೆ ಎಂಬುದು ಸತ್ಯ.
ಸದ್ಯ ನಿನಗಾಗಿ ಕಾದಿರುವೆ, ಹುಚ್ಚಿ, ಮಿನುಗು ಮೊದಲಾದ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡು ತೋಪೆದ್ದಿರುವ ಪೂಜಾ ಈ ಮೂಲಕವಾದರೂ ಮಣ್ಣಿಂದ ಮೇಲೆದ್ದು ಬರಲಿ ಎಂಬುದೇ ಆಶಯ.