ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೂರಿಯ 'ಜಾಕಿ': ಬೈಕ್‌ನಿಂದ ಬಿದ್ದ ಪುನೀತ್, ಭಾವನಾ (Soori | Punith Rajkumar | Jackie | Bhavana Menon)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಜಾಕಿ' ಚಿತ್ರದ ಚಿತ್ರೀಕರಣದ ವೇಳೆ ಬೈಕ್‌ನಿಂದ ಕೆಳಗುರುಳಿ ಗಾಯಗೊಂಡಿದ್ದಾರೆ. ಪುನೀತ್ ಜೊತೆಗೆ ನಾಯಕಿ ಭಾವನಾ ಮೆನನ್ ಕೂಡಾ ಬಿದ್ದು ಸಿಕ್ಕಾಪಟ್ಟೆ ಗಾಯ ಮಾಡಿಕೊಂಡು ಸದ್ಯಕ್ಕೆ ಒಂದು ವಾರದ ರೆಸ್ಟ್ ತೆಗೆದುಕೊಂಡಿದ್ದಾರಂತೆ!

ಹೌದು. ಅದು ಜಾಕಿ ಚಿತ್ರದ ಚಿತ್ರೀಕರಣ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಭಾವನಾ ಮೆನನ್ ಸೇರಿದಂತೆ ಚಿತ್ರತಂಡ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಚಿತ್ರೀಕರಣ ನಡೆಸುತ್ತಿತ್ತು. ನಾಯಕಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಧೂಂಮಚಾಲೇ ಅಂತ ಜೋರಾಗಿ ಬೈಕ್ ಓಡಿಸುವ ಸನ್ನಿವೇಶವದು. ಕಬ್ಬು ಹೇರಿಕೊಂಡು ಹೋಗುತ್ತಿದ್ದ ಲಾರಿಯಿಂದ ಕಬ್ಬಿನ ಜಲ್ಲೆಯನ್ನು ಕಿತ್ತುಕೊಳ್ಳಲು ನಾಯಕಿ ಕೈ ಹಾಕಬೇಕಿತ್ತು. ಅಂತೆಯೇ ಬೈಕ್ ಓಡಿಸುತ್ತಿರುವಾಗ ನಾಯಕಿ ಪಕ್ಕದ ಲಾರಿಯಿಂದ ಕಬ್ಬಿನ ಜಲ್ಲೆಯನ್ನು ಎಳೆಯುತ್ತಾರೆ. ಆದರೆ ಪುನೀತ್ ಮಾತ್ರ ಇದ್ನನು ಬ್ಯಾಲೆನ್ಸ್ ಮಾಡಿಕೊಳ್ಳಲಾಗದೆ ಧಡಾರನೆ ಬೈಕ್ ಸಮೇತ ನೆಲಕ್ಕೆ ಬಿದ್ದರಂತೆ. ಜೊತೆಗೆ ನಾಯಕಿ ಭಾವನಾ ಕೂಡಾ.

ದುನಿಯಾ ಖ್ಯಾತಿಯ ಸೂರಿ ನಿರ್ದೇಶಿಸುತ್ತಿರುವ ಚಿತ್ರ ಈ 'ಜಾಕಿ'. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದೆ. ಪುನೀತ್‍‌ಗೆ ಜೋಡಿಯಾಗಿ ಮೊದಲ ಬಾರಿಗೆ ಮಳಯಾಳಿ ಸುಂದರಿ ಭಾವನಾ ಮೆನನ್ ಕನ್ನಡಕ್ಕೆ ಲಗ್ಗೆಯಿಟ್ಟಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಅಂದಹಾಗೆ, ಬೈಕ್‌ನಿಂದ ಬಿದ್ದ ಪುನೀತ್‌ಗೆ ಹೇಳಿಕೊಳ್ಳುವ ಗಾಯಗಳೇನೂ ಆಗಿರದಿದ್ದರೂ, ಅಲ್ಲಲ್ಲಿ ಕೊಂಚ ತರಚಿದೆ ಅಷ್ಟೇ. ಆದರೆ ಭಾವನಾ ಕೊಂಚ ಹೆಚ್ಚೇ ಗಾಯಗಳಾಗಿವೆಯಂತೆ. ಹಾಗಾಗಿ ಒಂದು ವಾರ ರೆಸ್ಟ್ ತೆಗೊಳ್ಳಿ ಮೇಡಂ ಅಂತ ವೈದ್ಯರು ಭಾವನಾಗೆ ಸೂಚಿಸಿದ್ದಾರಂತೆ. ಹಾಗಾಗಿ ಜಾಕಿ ಚಿತ್ರದ ಶೂಟಿಂಗಿಗೆ ಒಂದು ವಾರ ಬಿಡುವು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರಿ, ಪುನೀತ್, ಭಾನವಾ ಮೆನನ್, ದುನಿಯಾ, ಜಾಕಿ