ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಾಟ್ ಬಿಕಿನಿ ಬಿಚ್ಚಮ್ಮ ಕ್ಲಾಡಿಯಾ ಸೀಸ್ಲಾ ಕನ್ನಡಕ್ಕೆ! (Claudia Ceisla | Karma | Bikini | German Model | Private Number | Hot and Sexy)
ಜರ್ಮನ್ ರೂಪದರ್ಶಿ, ಅಪ್ರತಿಮ ಸುಂದರಿ ಕ್ಲಾಡಿಯಾ ಸೀಸ್ಲಾ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. ತೆಳ್ಳನೆಯ ನಡು ಹೊಂದಿರುವ ಕ್ಲಾಡಿಯಾಗೆ ಭಾರತಕ್ಕೆ ಬರುವವರೆಗೂ ಬಿಕಿನಿ ಧರಿಸೋದು ಬಿಟ್ಟರೆ ಬೇರೆ ಬಟ್ಟೆ ಧರಿಸಿಯೇ ಗೊತ್ತಿರಲಿಲ್ಲ ಎಂದರೂ ಆಶ್ಚರ್ಯವಿಲ್ಲ. ಯಾಕೆಂದರೆ ಈಕೆ ಜರ್ಮನ್ ಮಾಡೆಲ್ ಆಗಿ ಮಾಡಿದ ಮಹತ್ಕಾರ್ಯವೂ ಅದೇ. ಬಿಕಿನಿ ತೊಡುವುದು, ಬಿಚ್ಚುವುದು ಅಷ್ಟೇ.
ಅದೆಲ್ಲಾ ಹಾಗಿರಲಿ. ಇಂಥ ಬಿಚ್ಚಮ್ಮಳನ್ನು ಕನ್ನಡಕ್ಕೆ ಕರೆತರುವ ಸಾಹಸ ಯಾರಪ್ಪಾ ಮಾಡುತ್ತಿದ್ದಾರೆ ಅಂತೆಲ್ಲಾ ಕುತೂಹಲ ನಿಮಗೆ ಸಹಜವೇ. ಕೆ.ಗಣೇಶ್ ಶೆಟ್ಟಿ ಅವರು ಎಂ.ಕೆ.ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವೊಂದರಲ್ಲಿ ಕ್ಲಾಡಿಯಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮುಂಬೈಯವರೇ ಆದರ ಆನಂದ್ ಕುಮಾರ್ ಇದರ ನಿರ್ದೇಶಕರು. ಹೊಸಬ ಪ್ರೀತಂ ಎಂಬಾತ ಈ ಚಿತ್ರದ ನಾಯಕನಾದರೆ, ಮಾಜಿ ಮಿಸ್ ಇಂಡಿಯಾ ನಿಹಾರಿಕಾ ಸಿಂಗ್ ನಾಯಕಿ ಪಟ್ಟ ಅಲಂಕರಿಸಿದ್ದಾರೆ. ಹಾಗಾಗಿ ಸಂಶಯ ಬೇಡ. ಬಿಕಿನಿ ಖ್ಯಾತಿಯ ಕ್ಲಾಡಿಯಾ ನಾಯಕಿಯಂತೂ ಅಲ್ಲ, ಕೇವಲ ಹೀಗೆ ಬಂದು ಹಾಗೆ ಹೋಗುವ ಅತಿಥಿ ಪಾತ್ರದಲ್ಲಿ!
ಅಂದ ಹಾಗೆ ಚಿತ್ರದ ಹೆಸರು ಪ್ರೈವೇಟ್ ನಂಬರ್. ಅಕ್ಷಯ ತದಿಗೆಯಂದು ಈ ಚಿತ್ರ ಸೆಟ್ಟೇರಿದೆ. ಈಗಾಗಲೇ ಬಾಲಿವುಡ್‌ನ ಕರ್ಮ ಎಂಬ ಚಿತ್ರದಲ್ಲಿ ನಟಿಸಿದ್ದ ಕ್ಲಾಡಿಯಾ ಸದ್ಯ ಭಾರತದಲ್ಲೇ ಸೆಟ್ಲ್ ಆಗುವ ಯೋಚನೆ ಮಾಡುತ್ತಿದ್ದಾರೆ. ಭಾರತೀಯ ಉಡುಗೆ ಸೀರೆಯನ್ನೂ ಮೆಚ್ಚುವ ಕ್ಲಾಡಿಯಾ ಇತ್ತೀಚೆಗಿನ ದಿನಗಳಲ್ಲಿ ಸೀರೆಯಲ್ಲಿ ಕಂಗೊಳಿಸಿದ್ದೂ ಇದೆ!