ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪರಭಾಷಾ ಚಿತ್ರ ಹಾವಳಿ ತಡೆಗೆ ಕ್ರಮ: ಬಸಂತ್ ಕುಮಾರ್ (Karnataka Film Chamber of Commerce | Kannada Cinema | Basanth Kumar)
ಸುದ್ದಿ/ಗಾಸಿಪ್
Bookmark and Share Feedback Print
 
ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಹಾವಳಿ ತಡೆಯಲು ಇನ್ನೆರಡು ತಿಂಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ ತಿಳಿಸಿದ್ದಾರೆ.

ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರೋದ್ಯಮಕ್ಕೆ ಆಗುತ್ತಿರುವ ಹಾನಿ ತಪ್ಪಿಸಲು ಇಂಥ ಕ್ರಮ ಅನಿವಾರ್ಯ. ಮಂಡಳಿಯಿಂದ ಷರತ್ತುಬದ್ಧ ನಿಯಮಗಳ ಪ್ರಕಾರ ಅನುಮತಿ ಪಡೆದ ನಂತರವಷ್ಟೇ ನಿರ್ದಿಷ್ಟ ಚಲನಚಿತ್ರ ಮಂದಿರಗಳಲ್ಲಿ ಪರಭಾಷೆ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ನಾಯಕ ನಟ ಹೃತಿಕ್ ರೋಷನ್ ಅಭಿನಯದ ಕೈಟ್ಸ್ ಚಿತ್ರ ಬಿಡುಗಡೆಗೂ ಷರತ್ತು ವಿಧಿಸಲಾಗುವುದು. ಬೆಂಗಳೂರಿನ 17 ಹಾಗೂ ಇನ್ನುಳಿದೆಡೆ 17 ಚಿತ್ರಮಂದಿರಗಳಲ್ಲಿ ಮೇ 21ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ವಿತರಕರಾದ ರಿಲಾಯನ್ಸ್ ಸಂಸ್ಥೆಯವರು ಸಿದ್ಧತೆ ನಡೆಸಿದ್ದಾರೆ. ಚಿತ್ರ ಬಿಡುಗಡೆಗೆ ಮಂಡಳಿ ಸೂಚಿಸಿದ್ದ ಎಲ್ಲ ಪ್ರಾದೇಶಿಕ ನಿಯಮಗಳನ್ನು ಪಾಲಿಸುವುದಾಗಿ ವಿತರಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಅಶ್ಲೀಲ ಚಲನಚಿತ್ರಗಳ ಪ್ರದರ್ಶನ ಹಾಗೂ ಅಸಹ್ಯಕರ ಪೋಸ್ಟರ್ಗಳನ್ನು ಅಂಟಿಸದಂತೆ ತಡೆಯಲಾಗುವುದು. ಇತ್ತೀಚೆಗೆ ಚಿತ್ರರಂಗಕ್ಕೆ ಬಂದ ಶೇ. 90ರಷ್ಟು ಹೊಸ ನಿರ್ಮಾಪಕರು ಅಪಾರ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ನಷ್ಟ ತಡೆಯಲು ಈಗಾಗಲೇ ಕೆಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಕಲಿ ಸಿಡಿ ಬಗ್ಗೆ ಪ್ರಸ್ತಾಪಿಸಿದ ಅವರು ನಕಲಿ ಸಿಡಿ ಹಾಗೂ ಡಿವಿಡಿಗಳ ಹಾವಳಿ ತಡೆಗಟ್ಟಲು ರಾಜ್ಯ ಸರಕಾರ ಗೂಂಡಾ ಕಾಯಿದೆ ಜಾರಿಗೆ ತರುತ್ತಿದೆ. ಕಾಯಿದೆ ಜಾರಿಗೆ ಬರುವವರೆಗೆ ಮಂಡಳಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪರಭಾಷಾ ಚಿತ್ರ, ಬಸಂತ್ ಕುಮಾರ್, ಕೈಟ್ಸ್, ಚಲನಚಿತ್ರ ವಾಣಿಜ್ಯ ಮಂಡಳಿ