ನಾಗತಿಹಳ್ಳಿ ಚಂದ್ರಶೇಖರ್ ಅವರ ನೂರು ಜನ್ಮಕೂ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೇ ಮೇ 21ರಂದು ನೂರು ಜನ್ಮಕೂ ತೆರೆಗೆ ಲಗ್ಗೆಯಿಡಲಿದೆ. ಆದರೆ ಮೇಷ್ಟ್ರು ಖ್ಯಾತಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಐಂದ್ರಿತಾ ರೇ ನಡುವಿನ ವಿರಸ ಮಾತ್ರ ಕಡಿಮೆಯಾದಂತಿಲ್ಲ. ನೂರು ಜನ್ಮಕೂ ಪತ್ರಿಕಾಗೋಷ್ಠಿಯಲ್ಲಿ ಐಂದ್ರಿತಾ ಎಲ್ಲೂ ಕಾಣಸಿಗಲಿಲ್ಲ. ವಿಚಿತ್ರವೆಂದರೆ ಐಂದ್ರಿತಾಗೆ ನಾಗತಿಹಳ್ಳಿ ಆಮಂತ್ರಣವನ್ನೇ ನೀಡಿಲ್ಲ. ಹಾಗಾಗಿ ಐಂದ್ರಿತಾಗೆ ಪತ್ರಿಕಾಗೋಷ್ಠಿ ನಡೆದ್ದದು ಗೊತ್ತೇ ಇರಲಿಲ್ಲ!
ನಾಗತಿಹಳ್ಳಿ ಮೇಷ್ಟ್ರು ನನ್ನ ಕಪಾಳಕ್ಕೆ ಬಾರಿಸಿದ್ದಾರೆಂದು ಸುದ್ದಿ ಮಾಡಿದ್ದ ಐಂದ್ರಿತಾ ಸ್ಯಾಂಡಲ್‌ವುಡ್ಡಿನಲ್ಲಿ ಧೈರ್ಯವಾಗಿ ತನ್ನ ಆಪಾದನೆಯನ್ನು ಸಮರ್ಥಿಸಿಕೊಂಡು. ಪರಿಣಾಮವಾಗಿ ಮೇಷ್ಟ್ರ ಚಿತ್ರ ಜೀವನದ ಶಾಶ್ವತ ಕಪ್ಪು ಚುಕ್ಕೆಯಾಯ್ತು. ಆಮೇಲೆ ಇಬ್ಬರಲ್ಲೂ ರಾಜಿಯಾದ್ರೂ, ನಾಗತಿಹಳ್ಳಿ ಮತ್ತೆ ಯಾವತ್ತೂ ಐಂದ್ರಿತಾ ಮುಖ ನೋಡೋ ಗೋಜಿಗೆ ಹೋಗಿಲ್ಲ. ಆದರೆ ಐಂದ್ರಿತಾ ಈ ಚಿತ್ರ ಒಪ್ಪಿಕೊಂಡ ಕಾರಣಕ್ಕೆ ಚಿತ್ರಕ್ಕೆ ಎಲ್ಲೂ ಅನ್ಯಾಯವಾಗದಂತೆ ಮುಗಿಸಿಕೊಡುತ್ತೇನಾದರೂ ಮುಂದೆಂದೂ ಮೇಷ್ಟ್ರ ಚಿತ್ರದಲ್ಲಿ ನಟಿಸಲ್ಲ ಅಂದರು. ಅದಾಗಿ ತಿಂಗಳುಗಳೇ ಕಳೆದಿವೆ. ಆದರೂ ಈ ಕೋಪ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ.
ಐಂದ್ರಿತಾ ಯಾಕೆ ಪತ್ರಿಕಾಗೋಷ್ಠಿಗೆ ಬಂದಿಲ್ಲ ಎಂದರೆ ಬರೋ ಉತ್ತರ ಆಕೆ ವೀರ ಪರಂಪರೆ ಚಿತ್ರದಲ್ಲಿ ಬ್ಯುಸಿ. ಆದರೆ ಅಸಲಿಗೆ ವಿಷಯ ಹಾಗಲ್ಲ. ಐಂದ್ರಿತಾಗೆ ಆಹ್ವಾನವೇ ಹೋಗಿಲ್ಲ. ಐಂದ್ರಿತಾ ಬಳಿ ನಿಜ ವಿಷಯ ಏನೆಂದು ಕೇಳಿದರೆ ಆಕೆ, ನನಗೆ ಚಿತ್ರದ ಪತ್ರಿಕಾಗೋಷ್ಠಿಗೇ ಕರೆದಿಲ್ಲ. ಪತ್ರಿಕೆ ಓದಿದ ಮೇಲಷ್ಟೆ ನನಗೆ ಪತ್ರಿಕಾಗೋಷ್ಠಿ ನಡೆದದ್ದು ಗೊತ್ತಾಯ್ತು. ಅವರು ಕರೆದಿದ್ದರೆ ನಾನು ಖಂಡಿತಾ ಹೋಗ್ತಿದ್ದೆ ಎನ್ನುತ್ತಾರೆ!