ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಹೇಂದ್ರ ಸಿಂಹ ಎಂಬ ಛಾಯಾ ಮೇಕರ್ (Mahendra Sinha | Cinematographer | Kannada Film News | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಚಿತ್ರ ರಂಗದ ಮಟ್ಟಿಗೆ ಹೇಳುವುದಾದರೆ, ತಮ್ಮ ಸಾಧನೆಗೆ ಬೇರೊಬ್ಬರು ಕಾರಣ ಎಂದು ಯಾರಾದರೂ ಇದುವರೆಗೆ ಹೇಳಿಕೊಂಡಿದ್ದರೆ ಅವರಲ್ಲಿ ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರ ಹೆಸರು ಖಂಡಿತಾ ಇರುತ್ತದೆ.

ಇಂದು ಯಾರದ್ದೋ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುವವರೇ ಚಿತ್ರರಂಗದಲ್ಲಿ ತುಂಬಿದ್ದು, ಕನ್ನಡವೂ ಇದರಿಂದ ಹೊರತಾಗಿಲ್ಲ. ಯಾರದ್ದೋ ಕೆಲಸ, ಇನ್ಯಾರಿಗೋ ಕ್ರೆಡಿಟ್. ಆದರೆ ಮಹೇಂದ್ರ ಸಿಂಹ ಅಂಥವರಲ್ಲ. ತಾವು ತೆಗೆದ ಉತ್ತಮ ಸ್ಟಿಲ್‌ನಲ್ಲಿ ಇರುವ ನಟರ ಪಾತ್ರವೇ ಶೇ.70ರಷ್ಟು. ಅವರ ಕಾರಣದಿಂದ ಆ ಚಿತ್ರ ಉತ್ತಮವಾಗಿ ಮೂಡಿ ಬರುತ್ತದೆ. ನಾನೊಂದು ನೆಪ ಮಾತ್ರ ಅನ್ನುತ್ತಾರೆ.

ಇಂಥವರೊಬ್ಬರು ಎಲ್ಲಾದರೂ ಸಿಗಲು ಸಾಧ್ಯವೇ? ಆದರೆ ಮಹೇಂದ್ರ ಸಿಕ್ಕಿದ್ದಾರೆ. ನೀವೊಮ್ಮೆ ಶಿವರಾಜ್ ಕುಮಾರ್ ಅವರ ಮೈಲಾರಿ ಚಿತ್ರದ ಸ್ಟಿಲ್ ನೋಡಿ ಬಿಡಿ, ಜತೆಗೆ ವೀರಪರಂಪರೆಯ ಸುದೀಪ್‌ರನ್ನು ವೀಕ್ಷಿಸಿ. ಆಗ ಇವರ ಕೈಚಳಕ ಅರಿವಾಗುತ್ತದೆ. ಶಿವರಾಜ್ ಕುಮಾರ್‌ಗೆ ಚಿತ್ರ ಏನಾದರೂ ಕೈ ಹಿಡಿದರೆ, ಅದರಲ್ಲಿ ಬಹುಪಾಲು ಯಶಸ್ಸು ಇವರಿಗೆ ಸಿಗಬೇಕು. ಅವರ ಅಭಿಮಾನಿಗಳು ಶಿವಣ್ಣನ ಒಂದು ವಿಭಿನ್ನ ಪೋಸ್‌ಗಳನ್ನು ಈ ಚಿತ್ರದ ಮೂಲಕ ಪಡೆದಿದ್ದಾರೆ.

ಥ್ಯಾಂಕ್ಸ್ ಟು ಮಹೇಂದ್ರ ಸಿಂಹ. ಈ ಮಾತನ್ನು ನಾವು ಆಡಿದ್ದು ಅಲ್ಲ, ಕನ್ನಡದ ಜನಪ್ರಿಯ ನಟರಾದ ಶಿವರಾಜ್ ಕುಮಾರ್, ಪ್ರೇಮ್, ಅಜಯ್ ಸೇರಿದಂತೆ ನಾಯಕ ನಟರು ಆಡಿದ್ದಾರೆ. ತಮಗೊಂದು ಹೊಸ ಇಮೇಜ್ ಕೊಡುವ ಚಿತ್ರವನ್ನು ಇವರು ತೆಗೆದಿದ್ದಾರೆ ಎನ್ನುವ ಮಾತನ್ನು ಮೂವರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕನ್ನಡದಲ್ಲಿ ಸಾಕಷ್ಟು ಉತ್ತಮ ಮುಖಗಳಿವೆ. ಅವನ್ನು ವಿಭಿನ್ನವಾಗಿ ತೋರಿಸುವ ಕಾರ್ಯ ಎಲ್ಲೂ ಆಗುತ್ತಿಲ್ಲ. ನಾನು ಶಕ್ತಿ ಮೀರಿ ಕನ್ನಡವರ ಎಕ್ಸ್‌ಪೋಸರ್‌ಗೆ ಪ್ರಯತ್ನಿಸುತ್ತೇನೆ. ಯಾವುದೇ ಸಿದ್ಧತೆ ಇಲ್ಲದೇ ತಕ್ಷಣ ಹೊರಡಿ ಅಂದರೆ ಅವರು ಬರುವುದಿಲ್ಲವಂತೆ. ಕಾರಣ ಇದು ವೃತ್ತಿಪರತೆಗೆ ಬಗೆಯುವ ಅನ್ಯಾಯ ಅನ್ನುವುದು ಅವರ ಅಭಿಪ್ರಾಯ.

ವಿಷಯ ತಿಳಿದು ಅದರ ಬಗ್ಗೆ ಒಂದಿಷ್ಟು ಯೋಚನೆ, ಯೋಜನೆ ಮಾಡಿಕೊಂಡೇ ಹೊರಡುತ್ತಾರೆ. ಇಂಥ ಒಬ್ಬ ಯಶಸ್ವಿ ಛಾಯಾಗ್ರಾಹಕನಿಂದ ಕನ್ನಡದ ಕೆಲ ನಾಯಕ ನಟರು ಉತ್ತಮ ಹೆಸರು ಗಳಿಸಲು ಸಾಧ್ಯವಾಗಿದೆ. ಬಹುತೇಕ ಎಲ್ಲಾ ನಾಯಕರಿಗೂ ಇವರ ಸೇವೆಯ ಲಾಭ ಸಿಗುವಂತಾಗಲಿ ಎಂಬುದೇ ಆಶಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಹೇಂದ್ರ ಸಿಂಹ, ಸಿನಿಮಾಟೋಗ್ರಾಫರ್, ಛಾಯಾಗ್ರಾಹಕ, ಕನ್ನಡ ಚಿತ್ರ, ಕನ್ನಡ ಸಿನಿಮಾ