ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೆರೆಯ ಹೀರೋ ಸೃಷ್ಟಿಸುವ ಮರೆಯ ಹೀರೋ (Prakash | Cinema Editing | Kannada Film News | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ನಿಮಗೆ ಪ್ರಕಾಶ್ ಅನ್ನುವ ಹೆಸರು ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಏಕೆಂದರೆ ಇವರು ತೆರೆಯ ಮೇಲೆ ಹೀರೋ ಅಲ್ಲ. ತೆರೆಯ ಹಿಂದಿನ ಹೀರೋ. ಒಬ್ಬ ಸಂಕಲನಕಾರರಾಗಿ ಇವರ ಸಾಧನೆ ಮೆಚ್ಚುವಂಥದ್ದು.

ತಮ್ಮ ಚಿಕ್ಕಪ್ಪನ ಜತೆ ಟೈಂಪಾಸ್‌ಗೆಂದು ಸಿನಿಮಾ ಎಡಿಟಿಂಗ್ ಸ್ಟುಡಿಯೋಗೆ ಬರುತ್ತಿದ್ದ ಇವರು ಇದನ್ನೇ ಈಗ ಪೂರ್ಣ ಪ್ರಮಾಣದ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಇದರ ಫಲವೇ ಹುಡುಗಾಟ ಚಿತ್ರದಿಂದ ಆರಂಭವಾದ ಇವರ ಕೆಲಸ 42 ಹೆಜ್ಜೆ ದಾಟಿವೆ.

ಪಿಯುಸಿ ಓದಿದ ನಂತರ ಚಿತ್ರರಂಗದತ್ತ ಹೆಜ್ಜೆ ಹಾಕಿದ ಇವರು, ಓದಿಗೆ ಎಂದೋ ಕೊನೆ ಹಾಡಿದ್ದಾರೆ. ವೃತ್ತಿಯ ನಡುವೆ ವಿದ್ಯಾಭ್ಯಾಸ ಪಿಯುಸಿಗೆ ನಿಂತಿದೆ. ತುರುವೇಕೆರೆಯಲ್ಲಿ ಪಿಯುಸಿ ಮುಗಿಸಿ ರಜೆ ಕಳೆಯಲು ಚಿಕ್ಕಪ್ಪನ ಮನೆಗೆ ಬಂದ ಇವರಿಗೆ ಚಿಕ್ಕಪ್ಪ ಕೆ.ಎಂ. ಶಂಕರ್ ಕೆಲಸ ತುಂಬಾ ಹಿಡಿಸಿತಂತೆ. ತಾವೂ ಸಂಕಲನಕ್ಕೆ ಮುಂದಾದರು. ಇಂದು ಈ ಹಂತ ತಲುಪಿದ್ದಾರೆ.

ಎಡಿಟಿಂಗ್ ಕೆಲಸ ಸಹ ಕ್ರಿಯಾಶೀಲವಾದುದು, ಇದು ಕೇವಲ ತಾಂತ್ರಿಕ ಕೆಲಸವಲ್ಲ. ಇದು ನನಗೆ ಮೆಚ್ಚುಗೆ ಆಯಿತು. ಇಂದು ಸಂಕಲನಕಾರರಾಗಿ ಗುರುತಿಸಿಕೊಂಡವರು ತೀರಾ ಕಡಿಮೆ. ನಾನು ಇಲ್ಲಿ ಛಾಪೊತ್ತಬಯಸುತ್ತೇನೆ. ವೃತ್ತಿಯ ಆರಂಭ ತುಂಬಾ ಕಷ್ಟಕರವಾಗಿತ್ತು. ಅಣ್ಣ, ಅತ್ತಿಗೆ ಸಹಕಾರದಿಂದ ಹೇಗೋ ಸಾಗಿದೆ. 70 ಚಿತ್ರಗಳಿಗೆ ಸಹಾಯಕ ಸಂಕಲನಕಾರನಾಗಿ ಕೆಲಸ ಮಾಡಿದ ಅನುಭವ ಇಂದು ಸ್ವಂತ ಕೆಲಸಕ್ಕೆ ಸಹಾಯ ಮಾಡುತ್ತಿದೆ. ಈಗ ಪತ್ನಿ ತ್ರಿವೇಣಿ ಸಹ ಕೆಲಸಕ್ಕೆ ಪ್ರೋತ್ಸಾಹವಾಗಿ ನಿಂತಿದ್ದಾಳೆ ಅಂತ ಹೆಮ್ಮೆಯಿಂದ ಸಹಕರಿಸಿದವರನ್ನು ನೆನೆಯುತ್ತಾರೆ ಅವರು.

ಸದ್ಯ ಕೃಷ್ಣನ್ ಲವ್ ಸ್ಟೋರಿ, ಸಂಚಾರಿ, ಸಾರಥಿ, ಮೈಲಾರಿ, ಮತ್ತೆ ಮುಂಗಾರು ಮತ್ತಿತರ ಚಿತ್ರಗಳ ಸಂಕಲನ ಕಾರ್ಯದಲ್ಲಿ ಬ್ಯುಸಿ ಆಗಿರುವ ಇವರಿಗೆ ನಮ್ಮದೊಂದು ಶುಭಾಶಯ ಸಲ್ಲಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್, ಸಂಕಲನ, ಕನ್ನಡ ಚಿತ್ರ, ಕನ್ನಡ ಸಿನಿಮಾ