ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಮ್ಮೊಮ್ಮೆ ನಂತರ ನಾಗಣ್ಣ ಬಿಳಿಯ (Ommomme | Biliya | Nagashekhar | Kannada Film | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
ಒಮ್ಮೊಮ್ಮೆ ಹೀಗೂ ಆಗುವುದು ಅನ್ನುವ ಮಾತಿಗೆ ನಮ್ಮ 'ಒಮ್ಮೊಮ್ಮೆ' ಚಿತ್ರದ ನಾಯಕ ನಾಗಶೇಖರ್ ಸಾಕ್ಷಿಯಾಗಿದ್ದಾರೆ. ಮೊದಲ ಚಿತ್ರ ಮೊನ್ನೆ ತಾನೆ ಸೆಟ್ಟೇರಿದೆ, ಈ ನಡುವೆ ಇನ್ನೊಂದು ಚಿತ್ರದ ಆಫರ್ ಲೆಟರ್ ಅವರ ಕೈ ಸೇರಿದೆ.

ಅದೃಷ್ಟ ಅಂದರೆ ಇದು ನೋಡಿ. ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ನಾಗಶೇಖರ್ 'ಒಮ್ಮೊಮ್ಮೆ' ಚಿತ್ರದ ಮೂಲಕ ರಾತ್ರಿ ಬೆಳಗಾಗುವುದರೊಳಗೆ ನಾಯಕ ಪಟ್ಟ ಅಲಂಕರಿಸಿದ್ದಾರೆ. ಇದಾಗಿ ಕೆಲವೇ ದಿನ ಕಳೆದಿದೆ. ಅವರೀಗ ಇನ್ನೊಂದು ಚಿತ್ರಕ್ಕೂ ನಾಯಕ.

ಚಿತ್ರದ ಹೆಸರು 'ಬಿಳಿಯ'. ಇದೇನು ಕರಿಯ, ಕೆಂಪ, ಕೆಂಚ ಕೇಳಿದ್ದೆವು, ಈಗ ಬಿಳಿಯನೂ ಬಂದನಾ ಅಂತ ಅಂದುಕೊಂಡಿರಾ? ಹೌದು ನಾಗಶೇಖರ್ ಎಂಬ ಕರಿಯ ಇದರ ನಾಯಕ ನಟ. ಚಿತ್ರಕ್ಕೊಂದು ಟ್ಯಾಗ್ ಲೈನ್ ಇದೆ 'ಎ ಲವ್ ಸ್ಟೋರಿ ಆಫ್ ಎ ಬ್ಲ್ಯಾಕ್ ಬಾಯ್' ಅಂತ ಇದು. ನಿಜಕ್ಕೂ ಇದೊಂದು ಅತ್ಯುತ್ತಮ ಚಿತ್ರವಾಗಲಿದೆ ಎಂಬುದು ನಾಗಶೇಖರ್ ಅಭಿಪ್ರಾಯ.

ಅವರೇ ಮಾತಿಗಿಳಿದಾಗ ಹೇಳಿದ್ದಿಷ್ಟು, 'ಒಬ್ಬ ನಿರ್ದೇಶಕನಾಗಿ ಇಂಥದ್ದೊಂದು ಕತೆ ನನಗೆ ಹೊಳೆಯಲಿಲ್ಲವಲ್ಲಾ ಅಂತ ಹೊಟ್ಟೆಕಿಚ್ಚಾಗುತ್ತದೆ. ಇದೊಂದು ಉತ್ತಮ ಕತೆ, ತೆರೆಯ ಮೇಲೆ ಜನ ಇದನ್ನು ಉತ್ತಮವಾಗಿ ಸ್ವೀಕರಿಸುತ್ತಾರೆ. ಒಂದು ಚಿತ್ರ ಸೆಟ್ಟೇರುತ್ತಿದ್ದಂತೆ ಇನ್ನೊಂದು ಸಿಕ್ಕಿದ್ದು, ನನ್ನ ಅದೃಷ್ಟ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಒಮ್ಮೊಮ್ಮೆ ಚಿತ್ರವೂ ಮೇ 16ಕ್ಕೆ ಸೆಟ್ಟೇರಿದೆ. ಇದಕ್ಕೆ ನಾಯಕಿಯನ್ನು ಹುಡುಕುವ ಕಾರ್ಯ ಭರದಿಂದ ಸಾಗಿದ್ದು, ರಾಗಿಣಿ ಹಾಗೂ ಜೆನ್ನಿಫರ್ ಕೊತ್ವಾಲ್ ಜತೆ ಮಾತುಕತೆ ನಡೆದಿದೆ. ಕನ್ನಡಿಗರಿಗೆ ಪ್ರಾಶಸ್ತ್ಯ ನೀಡುವುದು ತಂಡದ ಉದ್ದೇಶ. ಸಿಗದಿದ್ದರೆ ಪರಭಾಷಾ ನಟಿಯಾದರೂ ಓಕೆ ಅನ್ನುತ್ತಿದ್ದಾರಂತೆ ಹಿರಿಯರು.

ಏನೇ ಇರಲಿ, ನಾಗಣ್ಣನ ಅದೃಷ್ಟ ಚೆನ್ನಾಗಿದೆ. ಚಿತ್ರದ ಮೇಲೆ ಚಿತ್ರ ಸಿಗುತ್ತಿದೆ. ಆಲ್ ದಿ ಬೆಸ್ಟ್ ನಾಗಶೇಖರ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಒಮ್ಮೊಮ್ಮೆ, ನಾಗಶೇಖರ್, ಬಿಳಿಯ, ಕನ್ನಡ ಚಿತ್ರ, ಕನ್ನಡ ಸಿನಿಮಾ ಒಮ್ಮೊಮ್ಮೆ ನಂತರ ನಾಗಣ್ಣ ಬಿಳಿಯ