ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐಂದ್ರಿತಾಗೆ ಈ ವಾರ ಅವಳಿ ಪ್ರಸವ (Aindritha Ray | Nooru Janmaku | Nannavanu | Kannada Film | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
NRB
ನಿಮಗೊಂದು ವಿಚಿತ್ರ, ವಿಶಿಷ್ಟ ಹಾಗೂ ವಿಪರ್ಯಾಸದ ಸುದ್ದಿ ಇದೆ.

ಒಬ್ಬ ನಟ ಅಥವಾ ನಟಿ ತನ್ನದೊಂದು ಚಿತ್ರ ಸಿದ್ಧವಾಗಿ ಹೊರಬರಬೇಕೆಂದರೆ ಅದನ್ನು ಪ್ರಸವದ ರೀತಿ ಅನುಭವಿಸುತ್ತಾರೆ. ಪ್ರತಿ ಚಿತ್ರವೂ ಅವನಿಗೆ ಅಥವಾ ಅವಳಿಗೆ ಹೊಸ ಅನುಭವವನ್ನು ತಂದುಕೊಡುತ್ತದೆ. ಆದರೆ ಅದೃಷ್ಟವೋ, ದುರದೃಷ್ಟವೋ ಐಂದ್ರಿತಾ ರೇಗೆ ಈ ವಾರ ಎರಡು ಪ್ರಸವ ಒಟ್ಟಿಗೆ ಆಗುತ್ತಿದೆ.

ಇದ್ಯಾವಾಗ ಮದುವೆ ಆದಳು, ಮಕ್ಕಳೇ ಆಗಿ ಬಿಟ್ಟರಾ ಅಂತ ಪಡ್ಡೆ ಹೈಕಳು ಹುಬ್ಬೇರಿಸುವುದು ಬೇಡ. ಇದು ಚಿತ್ರ ಬಿಡುಗಡೆ ಪ್ರಸವ ವೇದನೆ ಅಷ್ಟೆ. ಇವರ ಅಭಿನಯದ ಎರಡು ವಿವಾದಿತ ಚಿತ್ರ 'ನೂರು ಜನ್ಮಕು' ಹಾಗೂ 'ನನ್ನವನು' ಇದೇ ಶುಕ್ರವಾರ ತೆರೆ ಕಾಣುತ್ತಿವೆ.

ಎರಡೂ ದೊಡ್ಡ ಬ್ಯಾನರ್ ಮೂಲಕ ಹೊರ ಬರುತ್ತಿರುವ ಚಿತ್ರಗಳು. ಎರಡೂ ಚಿತ್ರದಿಂದ ಇವಳ ಇಮೇಜ್ ಸಹ ಬದಲಾಗಬಹುದು ಎನ್ನಲಾಗುತ್ತಿದೆ. ಆದರೆ ಐಂದ್ರಿತಾ ಮಾತ್ರ ಅವಮಾನ, ಅವಮಾನ ಅಂತ ಹೇಳುತ್ತಾ, ಚಿತ್ರದ ಪ್ರಚಾರಕ್ಕೇ ಬರುತ್ತಿಲ್ಲ. ವಿಚಾರಿಸಿದರೆ ಇಷ್ಟ ಇಲ್ಲ ಅಂತಾರೆ.

ಇದಕ್ಕೂ ಕಾರಣ ಇದೆ. ಶೂಟಿಂಗ್ ನಡುವೆ ಸಂ-ಭಾವನೆ ವಿಷಯಕ್ಕೆ ನಾಗತಿಹಳ್ಳಿ ಚಿತ್ರದಿಂದ ಆಚೆ ಬಂದರು. ಇದೇ ರೀತಿ ಸಂಭಾವನೆ ವಿಷಯದಲ್ಲಿ ಕಿರಿಕ್ ಆಗಿ ನನ್ನವನು ತಂಡದಿಂದ ಆಚೆ ಬಂದರು. ಒಟ್ಟಾರೆ ಇತ್ತೀಚೆಗೆ ಐಂದ್ರಿತಾಗೆ ಎಲ್ಲವೂ ಸರಿಯಾಗಿ ಕೂಡಿ ಬರುತ್ತಿಲ್ಲ.

ನಾಗತಿಹಳ್ಳಿ ಎಲ್ಲಿಯೂ ಈಕೆಯ ಹೆಸರು ಪ್ರಸ್ತಾಪಿಸುತ್ತಿಲ್ಲ. ಅದೇ ರೀತಿ ನನ್ನವನು ಚಿತ್ರ ನಿರ್ದೇಶಕ ಶ್ರೀನಿವಾಸ ರಾಜು ಏನೂ ಮಾತನಾಡುತ್ತಿಲ್ಲ. ಒಟ್ಟಾರೆ ಎರಡು ಚಿತ್ರ ಬಿಡುಗಡೆ ಆಗುತ್ತಿದ್ದರೂ, ಐಂದ್ರಿತಾ ಮಾತ್ರ ಅತಂತ್ರ. ಇದೇ ಸ್ಥಿತಿಯನ್ನು ವರ್ಷದ ಹಿಂದೆ ನಮ್ಮ ದುನಿಯಾ ವಿಜಯ್ ಅನುಭವಿಸಿದ್ದರು. ಇವರ ಅಭಿನಯದ ಎರಡು ಚಿತ್ರಗಳು ಬಿಡುಗಡೆ ಆಗಿದ್ದವು. ಎರಡೂ ತೋಪೆದ್ದು ಹೋದವು. ಅದು ಬೇರೆ ಪ್ರಶ್ನೆ. ಆದರೆ ಈಗ ಐಂದ್ರಿತಾಗೆ ಈ ಸ್ಥಿತಿ ಬರದಿರಲಿ ಅಂತ ಆಶಿಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಂದ್ರಿತಾ ರೇ, ನೂರು ಜನ್ಮಕು, ನನ್ನವನು, ಕನ್ನಡ ಚಿತ್ರ, ಕನ್ನಡ ಸಿನಿಮಾ