ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಂಸಲೇಖ ಚಿತ್ರ ಮಾಡ್ತಿದ್ದಾರೆ (Hamsalekha | Kum. Veerabhadrappa | Desi | Bhagavati Kadu | Kannada Cinema News)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡದ ಜಾನಪದ ಪ್ರಕಾರವನ್ನು ಚಿತ್ರದ ಹಾಗೂ ತೆರೆದ ವೇದಿಕೆಯ ಕಾರ್ಯಕ್ರಮ ಮೂಲಕ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಸಂಗೀತ ನಿರ್ದೇಶಕ ಹಂಸಲೇಖ ಈ ಕಾರ್ಯವನ್ನು ಚಿತ್ರರಂಗದಲ್ಲಿ ಇನ್ನಷ್ಟು ವಿಸ್ತರಿಸಲು ಮುಂದಾಗಿದ್ದಾರೆ.

ಸಾಹಸಿ ಸಂಗೀತ ನಿರ್ದೇಶಕ ಹಂಸಲೇಖ ಈಗ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದು ಕಾದಂಬರಿ ಆಧಾರಿತ ಚಿತ್ರ. ಕುಂ.ವೀರಭದ್ರಪ್ಪನವರ 'ಭಗವತಿ ಕಾಡು' ಇವರ ಕೈಗೆ ಸಿಕ್ಕಿದ್ದು, ಚಿತ್ರವಾಗಿ ತೆರೆಗೆ ಬರಲಿದೆ.

'ದೇಸೀ' ತಂಡ ಕಟ್ಟಿ ಯಶ ಕಾಣುತ್ತಿರುವ ಇವರು ಇದರ ಜತೆಜತೆಗೆ ಚಿತ್ರರಂಗಕ್ಕೆ ತಮ್ಮ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಾ ಬಂದಿದ್ದಾರೆ. ದೇಸೀ ಕಾಲೇಜುಗಳ ಮೂಲಕ ಸಿನಿಮಾಗೆ ಸಂಬಂಧಿಸಿದ ಹತ್ತು ಹಲವು ವಿಷಯಗಳ ತರಬೇತಿ ನಿರಂತರವಾಗಿ ನಡೆದುಕೊಂಡು ಬಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿರುವ ಉತ್ತಮ ಪ್ರತಿಭೆಗಳನ್ನು ಹುಡುಕಿ ಚಿತ್ರರಂಗಕ್ಕೆ ಎಳೆತರುವುದು, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಯಶಸ್ಸು ತಂದುಕೊಡುವ ಹರ ಸಾಹಸ ಇವರದ್ದು. ಸದ್ಯ ಇವರು ದೇಸಿ ಕಾಲೇಜಿನ ವಿದ್ಯಾರ್ಥಿಗಳ ಪ್ರಾಯೋಗಿಕ ಅನುಭವಕ್ಕಾಗಿ ಈ ಚಿತ್ರ ನಿರ್ಮಿಸುತ್ತಿದ್ದಾರಂತೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿ, ಜನರಿಗೆ ಒಂದು ಚಿತ್ರ ಈ ರೀತಿ ಸಿದ್ಧವಾಗುತ್ತಿದೆ.

ನಿರ್ದೇಶನದ ಜವಾಬ್ದಾರಿಯನ್ನು ಶಿವರುದ್ರಯ್ಯನವರಿಗೆ ವಹಿಸಿದ್ದಾರೆ. ಈ ಹಿಂದೆ 'ದಾಟು' ಚಿತ್ರದ ಮೂಲಕ ಜನಪ್ರಿಯರಾಗಿದ್ದ ಶಿವರುದ್ರಯ್ಯ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ. ಈ ಚಿತ್ರಕ್ಕೆ ಕೈಹಾಕಲು ಅವರೇ ಪ್ರೇರಣೆ ಎನ್ನುತ್ತಾರೆ ಹಂಸಲೇಖ.

ನಮ್ಮ ಸಂಸ್ಥೆಯ 38 ವಿದ್ಯಾರ್ಥಿಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇನೆ. ಒಬ್ಬೊಬ್ಬರಿಗೆ ಒಂದೊಂದು ವಿಭಾಗವನ್ನು ವಹಿಸಲಿದ್ದೇವೆ. ಚಿತ್ರ ಈ ಹಂತಕ್ಕೆ ಬರಲು ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಸಲಹೆಯೂ ಕಾರಣ' ಎನ್ನುತ್ತಾರೆ.

ಚಿತ್ರದ ಸಂಭಾಷಣೆಯನ್ನು ಲಕ್ಷ್ಮಿಪತಿ ಕೋಲಾರ ಬರೆದಿದ್ದಾರೆ. ಕೆ.ವಿ.ನಾರಾಯಣ ಸ್ವಾಮಿಯವರ ಸಾಹಿತ್ಯವಿದೆ. ಎಸ್. ರಾಮಚಂದ್ರ ಛಾಯಾಗ್ರಹಣವಿದ್ದು, 25 ದಿನಗಳಲ್ಲಿ ಚಿತ್ರೀಕರಣ ಪೂರೈಸುವ ಪ್ಲ್ಯಾನ್ ಮಾಡಿದ್ದಾರೆ. ಸಂಗೀತ ಹಂಸಲೇಖ ಅವರದ್ದೇ. ಒಟ್ಟು ನಾಲ್ಕು ಹಾಡುಗಳಿವೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಂಸಲೇಖ, ಕುವೀರಭದ್ರಪ್ಪ, ಭಗವತಿ ಕಾಡು, ಕನ್ನಡ ಸಿನಿಮಾ, ಕನ್ನಡ ಚಿತ್ರ