ಈ ಹಿಂದೆ ನಾವು ವಿದೇಶಿ ನಟಿಯೊಬ್ಬಳು ಕನ್ನಡ ಚಿತ್ರದಲ್ಲಿ ಅಭಿನಯಿಸುವ ವಿಷಯ ತಿಳಿದಿದ್ದೆವು. ಹೌದು, ಮಂಗಳೂರಿನ ಪ್ರೀತಂ ನಾಯಕನಾಗಿ, ಮಾಜಿ ಮಿಸ್ ಇಂಡಿಯಾ ನಿಹಾರಿಕಾ ನಾಯಕಿಯಾಗಿ ನಟಿಸುವ ಚಿತ್ರವನ್ನು ಗಣೇಶ್ ಶೆಟ್ಟಿ ನಿರ್ಮಿಸುತ್ತಿದ್ದಾರೆ ಅಂತಲೂ ಕೇಳಿದ್ದವು.
ಚಿತ್ರದ ಹೆಸರು ಪ್ರೈವೇಟ್ ನಂ. ಅಂತಲೂ ಗೊತ್ತಿತ್ತು. ನಿರ್ದೇಶಕ ಮುಂಬೈನ ಆನಂದ್ ಕುಮಾರ್ ಅನ್ನುವುದನ್ನೂ ಕೇಳಿಸಿಕೊಂಡಿದ್ದೆವು. ಇದೀಗ ಆ ಚಿತ್ರದ ಕೆಲ ತಾಜಾ ಸುದ್ದಿ ಸಿಕ್ಕಿದೆ. ಕೇಳಿಸಿಕೊಳ್ಳಿ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿದ್ದು, ಚಿತ್ರ ಕನ್ನಡ ಹಾಗೂ ಹಿಂದಿಯಲ್ಲೂ ಮೂಡಿಬರಲಿದೆಯಂತೆ. ಹಿಂದಿಯಲ್ಲಿ ನಟ ಅಕ್ಷಯ್ ಕುಮಾರ್ ಡೇಟ್ ಸದ್ಯ ಸಿಗದೇ ಇರುವ ಕಾರಣಕ್ಕೆ ಕನ್ನಡದಲ್ಲಿ ಚಿತ್ರ ಮುಗಿಸಿದ ನಂತರ ಅತ್ತ ತೆರಳಲು ಚಿತ್ರದ ತಾಂತ್ರಿಕ ತಂಡ ನಿರ್ಧರಿಸಿದೆ.
ಮಂಗಳೂರು ಮೂಲಕ ನಾಯಕ ನಟ ಪ್ರೀತಂ ಚಿತ್ರಕ್ಕಾಗಿ ವಿಶೇಷ ರೀತಿಯಲ್ಲಿ ತಯಾರಿ ಪಡೆದುಬಂದಿದ್ದಾರೆ. ಫೈಟರ್ ಚೀತಾ ಯಜ್ಞೇಶ್ ಶೆಟ್ಟಿ ಅವರ ಕೈ ಕೆಳಗೆ ಒಂದಷ್ಟು ಪಳಗಿಬಂದಿದ್ದಾರೆ ಅನ್ನುವ ಮಾತು ಕೇಳಿ ಬರುತ್ತಿದೆ. ಇದೇ ಚಿತ್ರದ ಮುಹೂರ್ತ ಮೊನ್ನೆ ಅಕ್ಷಯ ತೃತೀಯದಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದಿದ್ದು, ಜೋರಾಗಿ ಶೂಟಿಂಗ್ ಕಾರ್ಯ ನಡೆದಿದೆ.