ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಲನ್ ಆಗಿ ಗೆದ್ದ ಜಾನ್ ಕೊಕೇನ್ (Villain | John Cocain | Kannada Film News | Kannada Cinema | Prithvi)
ಸುದ್ದಿ/ಗಾಸಿಪ್
Bookmark and Share Feedback Print
 
ವಿಲನ್ ಅಂದರೆ ಅದ್ಯಾಕೋ ಜನರಿಗೆ ಅಷ್ಟಾಗಿ ಅಗಿ ಬರಲ್ಲ. ಆದರೆ ಕೆಲ ಯುವಕರು ಇಂದು ವಿಲನ್ ಪಾತ್ರವನ್ನೇ ಬಯಸಿ ಗಾಂಧಿನಗರದ ಗಲ್ಲಿ ಗಲ್ಲಿಯನ್ನು ಅಲೆಯುತ್ತಾರೆ. ಛಾನ್ಸ್ ಗಿಟ್ಟಿದರೆ ಸ್ವರ್ಗವೇ ಸಿಕ್ಕಂತೆ ಕುಣಿದಾಡುತ್ತಾರೆ. ಇಂಥವರಲ್ಲಿ ಒಬ್ಬರು ಜಾನ್ ಕೊಕೇನ್.

ಒಬ್ಬ ವಿಲನ್ ಹೇಗಿರಬೇಕು ಎನ್ನುವುದಕ್ಕೆ ಇವರು ಸೂಕ್ತ ಹಾಗೂ ತಾಜಾ ಉದಾಹರಣೆ. ಉರಿವ ಕಂಗಳು, 6.2 ಅಡಿ ಎತ್ತರದ ನೀಳಕಾಯ, ಒಂದು ಗಂಭೀರ ಮುಖಮುದ್ರೆಯೊಂದಿಗೆ ನಡೆದು ಬರುತ್ತಿದ್ದರೆ, ಅಬ್ಬಾ ಎದೆ ಧಸಕ್ ಎನ್ನುತ್ತದೆ. ಅಂತ ವಿಲನ್ ಛಾಪು ಅವರಲ್ಲಿದೆ. ಎಂಥವರಾದರೂ ಇವರನ್ನೊಮ್ಮೆ ನೋಡಿದರೆ ಖಳನಾಯಕ ಅಂತ ಒಪ್ಪಿಕೊಳ್ಳಲೇ ಬೇಕು.

ಇವರು ಅಭಿನಯಿಸಿರುವ ಕನ್ನಡದ ಮೊದಲ ಚಿತ್ರ ಪೃಥ್ವಿ. ಇಂದು ಕನ್ನಡದಲ್ಲಿ ಓಡುತ್ತಿರುವ ಯಶಸ್ವಿ ಚಿತ್ರಗಳಲ್ಲಿ ಒಂದು. ಹೆಸರಿನ ಜತೆ ಕೊಕೇನ್ ಸೇರಿರುವುದು ಇವರಿಗೆ ಕೊಂಚ ಇರಿಸು ಮುರುಸಂತೆ. ಆದರೂ ತಮ್ಮ ಹೆಸರು ಕೊಂಚ ಭಿನ್ನವಾಗಿದೆ ಅಂತ ಅಂದುಕೊಂಡು ತೃಪ್ತಿ ಪಡುತ್ತಾರೆ.

ಇವರು ಮೂಲತಃ ಕೇರಳದವರಾಗಿದ್ದು, ಮುಮ್ಮಟ್ಟಿ, ಮೋಹನ್‌ಲಾಲ್, ರವಿತೇಜ ಅವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪೃಥ್ವಿ ಚಿತ್ರದ ಬಗ್ಗೆ ನೆನಪು ಮಾಡಿಕೊಳ್ಳುವ ಅವರು ತಾವು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ, ಪುನೀತ್‌ರನ್ನು ಕೆಣಕಿ, ಪಂಥಾಹ್ವಾನ ನೀಡಿ ಹೊಡೆದಾಡುವ ದೃಶ್ಯ ನಿಜಕ್ಕೂ ಸದಾ ನೆನಪಿನಲ್ಲಿ ಉಳಿಯುತ್ತದೆ. ಈ ದೃಶ್ಯವನ್ನು ಚಿತ್ರದಲ್ಲಿ ಅದ್ಭುತವಾಗಿ ನಿರೂಪಿಸಲಾಗಿದೆ ಎನ್ನುತ್ತಾರೆ.

ಚಿತ್ರಕ್ಕೆ ಒಂದಿಷ್ಟು ತಾಜಾತನ ತುಂಬಲು ನಾನು ಸಾಕಷ್ಟು ಬದಲಾಯಿಸಿಕೊಂಡಿದ್ದೇನೆ. ಬಳ್ಳಾರಿಯ ಬಿಸಿಲಲ್ಲಿ ನಿಂತು ಮೈ ಕಪ್ಪಾಗಿಸಿಕೊಂಡಿದ್ದೆ. ಬಳ್ಳಾರಿ ಗಣಿಗಳಲ್ಲಿ ಇರುವವರ ಬಣ್ಣವನ್ನೇ ನಾನು ಹೊಂದಬೇಕಿತ್ತು. ಅದಕ್ಕಾಗಿ ಹಾಗೆ ಮಾಡಿದೆ ಎನ್ನುತ್ತಾರೆ.

ಒಟ್ಟಾರೆ ಕನ್ನಡಕ್ಕೊಬ್ಬ ಉತ್ತಮ ನಾಯಕನ ಕೊರತೆ ಹೇಗೆ ಇದೆಯೋ, ಅದೇ ರೀತಿ ಖಳನಟರ ಕೊರತೆಯೂ ಇದೆ. ಅದನ್ನು ಕೆಲ ಚಿತ್ರಗಳಿಂದಾದರೂ ಜಾನ್ ತುಂಬುತ್ತಾರೆ ಎನ್ನುವ ಆಶಯ ಇದೆ. ಸದ್ಯ ಅವರೀಗ ಶಿವರಾಜ್ ಕುಮಾರ್ ಅಭಿನಯದ ಮೈಲಾರಿ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದಲ್ಲಿ ಇವರು ನಾಯಕಿ ಸದಾ ಅವರ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಲನ್, ಖಳನಟ, ಪೃಥ್ವಿ, ಜಾನ್ ಕೊಕೇನ್, ಕನ್ನಡ ಸಿನಿಮಾ ಸುದ್ದಿ, ಕನ್ನಡ ಚಿತ್ರ