ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಲಿಯನ್ ಡಾಲರ್ ಬೇಬಿ ಶ್ರೀಯಾ ಸಾಧನೆ (Billion Dollar Baby | Shriya Dinakaran | Kannada Film News | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
14 ವರ್ಷದ ಪ್ರತಿಭೆ ಶ್ರೀಯಾ ದಿನಕರನ್ ಮಾಡಿದ ಸಾಧನೆಗಳನ್ನು ವರ್ಣಿಸುವುದು ಕಷ್ಟ. ಹತ್ತು ಹಲವು ಸಾಧನೆಗಳ ಜತೆ ಇದೀಗ ಚಿತ್ರರಂಗಕ್ಕೂ ಈಕೆ ಪದಾರ್ಪಣೆ ಮಾಡಿದ್ದಾಳೆ.

ಹೌದು, ಶ್ರೀಯಾ ದಿನಕರನ್ ತನ್ನ ಸರ್ವ ರೀತಿಯ ಪ್ರತಿಭೆಯನ್ನು ಮೆರೆಯುವ ಜತೆಗೆ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಜಾಗತಿಕ ತಾಪಮಾನದ ಹೆಚ್ಚಳ ಹಾಗೂ ಸಂಚಾರ ದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇಕ್ಷಕರ ಎದುರು ಬರಲಿದೆ. ಚಿತ್ರಕ್ಕೆ ಕಮರ್ಶಿಯಲ್ ಟಚ್ ನೀಡಲಾಗಿದೆ. ಒಟ್ಟಾರೆ ಈಕೆ ನಿರ್ದೇಶಿಸುತ್ತಿರುವ 'ಬಿಲಿಯನ್ ಡಾಲರ್ ಬೇಬಿ' ಚಿತ್ರರಂಗದಲ್ಲಿ ಒಂದು ಛಾಪು ಮೂಡಿಸುವಲ್ಲಿ ಸಂಶಯವಿಲ್ಲ. ಏಕೆಂದರೆ ಈ ಚಿತ್ರದ ಮೂಲಕ ಹಲವು ಪ್ರಥಮಗಳ ಸೃಷ್ಟಿ ಆಗಲಿದೆಯಂತೆ.

ನಾಸಾದಲ್ಲಿ ನಡೆಯುವ ಮಕ್ಕಳ ಬುದ್ಧಿಶಕ್ತಿ ಪರೀಕ್ಷೆ, ಗಗನಯಾತ್ರಿಗಳಿಗೆ ನೀಡುವ ತರಬೇತಿ, ಸಮುದ್ರ ತಳದಲ್ಲಿ ನಡೆದಾಟ, ಪ್ಯಾರಾ ಮೋಟಾರ್, ಸಬ್‌ಮರೀನ್ ಹಾಗೂ ಇನ್ನಿತರವುಗಳು ಚಿತ್ರದುದ್ದಕ್ಕೂ ಬರುತ್ತಿರುತ್ತವೆ. 'ವಂದೇ ಮಾತರಂ' ಹಾಡಿನಲ್ಲಿ ದೇಶದ ಏಳು ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಕಥಕ್, ಕಥಕ್ಕಳಿ, ಮಣಿಪುರಿ ಮುಂತಾದವುಗಳ ಪ್ರದರ್ಶನ ಇರಲಿದೆ.

ಚಿತ್ರ 29 ರಾಷ್ಟ್ರಗಳಲ್ಲಿ ಚಿತ್ರೀಕರಣಗೊಂಡಿದೆ. ಒಟ್ಟು 9 ಹಾಡುಗಳು ಚಿತ್ರದಲ್ಲಿವೆ. ಒಟ್ಟಾರೆ ಇದು ಶ್ರೀಯಾರ ನಿಜಜೀವನದ ಕಥೆ ಆಧರಿಸಿದ ಚಿತ್ರ ಎನ್ನುತ್ತಾರೆ, ಚಿತ್ರದ ನಿರ್ಮಾಪಕ ಹಾಗೂ ಶ್ರೀಯಾರ ತಂದೆ ದಿನಕರನ್. ಚಿತ್ರದಿಂದ ಬರುವ ಆದಾಯವನ್ನು ಡಾ. ಅಬ್ದುಲ್ ಕಲಾಂ ಟ್ರಸ್ಟ್‌ಗೆ ನೀಡುತ್ತೇನೆ ಎನ್ನುತ್ತಾರೆ.

ವಿಜಯ್ ಶ್ರೀನಿವಾಸನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುರೇಶ್ ಹೆಬ್ಳೀಕರ್, ಶಿವಧ್ವಜ್ ಮತ್ತಿತರ ಜನಪ್ರಿಯ ಕಲಾವಿದರನ್ನು ಒಳಗೊಂಡು ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.

ಇದುವರೆಗೂ ನೃತ್ಯ ಹಾಗೂ ಸಾಹಸಗಳ ಮೂಲಕ ಹೆಸರಾಗಿದ್ದ ಶ್ರೀಯಾ ಚಿತ್ರ ನಿರ್ಮಾಣಕ್ಕೂ ಮುಂದಾಗಿರುವುದು ಉತ್ತಮ ಬೆಳವಣಿಗೆ. ಅವರಿಗೆ ಯಶ ಸಿಗಲಿ. ಹಾ, ಚಿತ್ರದ ದ್ವನಿ ಸುರುಳಿ ಇತ್ತೀಚೆಗೆ ಇಸ್ಕಾನ್‌ನಲ್ಲಿ ಬಿಡುಗಡೆ ಆಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಲಿಯನ್ ಡಾಲರ್ ಬೇಬಿ, ಶ್ರೀಯಾ ದಿನಕರನ್, ಕನ್ನಡ ಸಿನಿಮಾ ಸುದ್ದಿ, ಕನ್ನಡ ಚಿತ್ರ