ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡದಲ್ಲಿ ಇಷ್ಟೊಳ್ಳೆಯ ಕಥೆಗಳೂ ಇವೆಯಾ?: ಮಮ್ಮುಟ್ಟಿ (Mamootty | Shikari | Kannada Cinema | K.Manju)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಗುಬ್ಬಚ್ಚಿಗಳು ಎಂಬ ತನ್ನ ಪ್ರಥಮ ಚಿತ್ರಕ್ಕೇ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಅಭಯ್ ಸಿಂಹ ಅವರಎರಡನೇ ಚಿತ್ರ ಶಿಕಾರಿ ಆರಂಭಕ್ಕೆ ಕೊನೆಗೂ ಮುಹೂರ್ತ ಬಂದಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಆ ಮೂಲಕ ಮಲಯಾಳಂನ ಮೆಗಾಸ್ಟಾರ್ ಮಮ್ಮುಟ್ಟಿ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಇಲ್ಲೊಂದು ಇಂಟರೆಸ್ಟಿಂಗ್ ವಿಚಾರವೆಂದರೆ, ಮಮ್ಮುಟ್ಟಿ ಕನ್ನಡಕ್ಕೆ ಬಂದಿದ್ದು, ಚಿತ್ರದ ಕಥೆಯಿಂದ ಇಂಪ್ರೆಸ್ ಆಗಿ. ಕನ್ನಡದಲ್ಲೂ ಇಂಥ ಕಥೆಗಳಿವೆಯೇ ಎಂದು ಆಶ್ಚರ್ಯಪಟ್ಟು ಮಮ್ಮುಟ್ಟಿ ಕನ್ನಡಕ್ಕೆ ಬಂದಿದ್ದಾರಂತೆ!

ಹೌದು. ಅಭಯ್ ಸಿಂಹ ಈಗಷ್ಟೇ ಚಿಗುರೊಡೆದಿರುವ ಪ್ರತಿಭೆ. ಜೊತೆಗೆ ಗಿರೀಶ್ ಕಾಸರವಳ್ಳಿಯಂಥ ದಿಗ್ಗಜರು ಓದಿದ ಪುಣೆಯ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಓದಿದ ಗರಿಮೆಯೂ ಇದೆ. ಇಂತಿಪ್ಪ ಅಭಯ ಸಿಂಹ ಅವರಿಂದ ಕಥೆಯನ್ನು ಇಮೈಲ್ ಮೂಲಕ ತರಿಸಿಕೊಂಡು ಓದಿದಾಗ ಮಮ್ಮುಟ್ಟಿಗೆ ದಿಗ್ಭ್ರಮೆಯಾಗಿತ್ತಂತೆ. ಇಂಥಾ ಅತ್ಯುತ್ತಮ ಕಥೆಯೂ ಕನ್ನಡದಲ್ಲಿವೆಯಾ ಎನ್ನುತ್ತಾ, ಹಿಂದು ಮುಂದು ನೋಡದೆ ಚಿತ್ರಕ್ಕೆ ಒಕೆ ಅಂದಿದ್ದಾರೆ. ಇತ್ತೀಚೆಗೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಬಿಚ್ಚಿಟ್ಟರು ಮಮ್ಮುಟ್ಟಿ.
MOKSHA


ಕಲೆಗೆ ಭಾಷೆಯ ಗಡಿ ಇಲ್ಲ. ನಿಜವಾದ ಕಲಾವಿದನಿಗೂ ಸಹ. ಕನ್ನಡದಲ್ಲಿ ಇದುವರೆಗೆ ನಟಿಸದಿದ್ದರೂ, ಡಾ. ರಾಜ್, ಡಾ. ವಿಷ್ಣುವರ್ಧನ್, ಅಂಬರೀಷ್ ಅವರು ನನಗೆ ಆಪ್ತರು. ಇವರೆಲ್ಲಾ ಚಿತ್ರ ನೋಡುತ್ತಾ ನಾನು ಕನ್ನಡದ ಜತೆ ಇದ್ದೇನೆ ಅನಿಸಿತ್ತು. ಆದರೆ, ಈಗ ಶಿಕಾರಿ ಮೂಲಕ ಅಧಿಕೃತವಾಗಿ ಕನ್ನಡಕ್ಕೆ ಬಂದಿದ್ದೇನೆ ಎನ್ನುತ್ತಾರೆ ಮಮ್ಮುಟ್ಟಿ.

ಇದೇ ವೇಳೆ ಕನ್ನಡದ ನಾಯಕರ ಬಗ್ಗೆ ಅಭಿಮಾನದಿಂದ ಮಾತನಾಡಿದ ಮಮ್ಮುಟ್ಟಿ, ಕೇರಳ ಮತ್ತು ಕರ್ನಾಟಕದ ನಡುವೆ ಬಹಳ ಅನ್ಯೋನ್ಯತೆ ಇದೆ. ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹೋಗಿ ಬರುತ್ತಿರುವುದು ಸಾಮಾನ್ಯ. ಮಲಯಾಳಂ ಕೂಡ ಕನ್ನಡ ಚಿತ್ರರಂಗದಷ್ಟೇ ಚಿಕ್ಕದಾದದ್ದು. ಆದರೆ ಈಗ ಕನ್ನಡದಲ್ಲಿ ಮಾರುಕಟ್ಟೆ ವಿಸ್ತರಿಸಿದೆ. ಹೊಸ ತಲೆಮಾರಿನ ನಿರ್ದೇಶಕರು ತಂತ್ರಜ್ಞರು ಬರುತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತಮ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಾನು ಯಾವತ್ತೂ ಮುಂದು. ಮುಂದೆ ಕನ್ನಡದಲ್ಲಿ ಒಳ್ಳೆ ಕಥೆ ಸಿಕ್ಕರೆ ಮತ್ತೆ ಬರುತ್ತೇನೆ ಎಂಬುದನ್ನು ಹೇಳಲು ಮಾತ್ರ ಮಮ್ಮುಟ್ಟಿ ಮರೆಯಲಿಲ್ಲ.

ಅಂದಹಾಗೆ, ಶಿಕಾರಿ ಚಿತ್ರೀಕರಣ ಮೇ 21ರಂದು ಆರಂಭಗೊಂಡಿದ್ದು, ಕೆ.ಮಂಜು ನಿರ್ಮಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಮ್ಮುಟ್ಟಿ, ಶಿಕಾರಿ, ಅಭಯಸಿಂಹ, ಕನ್ನಡ ಸಿನಿಮಾ