ಒಮ್ಮೊಮ್ಮೆ ಚಿತ್ರದ ಮುಹೂರ್ತ ಮೊನ್ನೆ ಬಸವ ಜಯಂತಿಯಂದು ಆಗಿದೆ. ನಾಯಕರಾಗಿ ಮೊದಲ ಹೆಜ್ಜೆ ಇರಿಸುತ್ತಿರುವ ನಿರ್ದೇಶಕ ನಾಗಶೇಖರ್ ಚಿತ್ರದಲ್ಲಿ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಒಂದೆಡೆ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದೆಡೆ ನಗರದ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ದ್ವನಿ ಮುದ್ರಣವೂ ನಡೆಯುತ್ತಿದೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಒಟ್ಟಾರೆ ಒಂದು ವಿಭಿನ್ನ ಚಿತ್ರಕ್ಕೆ ವಿಶಿಷ್ಟ ಸಂಗೀತ ಸಂಯೋಜಿಸುವ ಕಾರ್ಯ ಭರದಿಂದ ಸಾಗಿದೆ. ಮೊದಲ ಬಾರಿಗೆ ನಾಯಕರಾಗುತ್ತಿರುವ ನಾಗಶೇಖರ್‌ಗೆ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಮಾದರಿಯ ಪಾತ್ರವಂತೆ. ಎಲ್ಲರನ್ನೂ ನಗಿಸಿ ತಾನು ಅಳುವ ಪಾತ್ರ ನಾಯಕನದ್ದಂತೆ.
ಚಿತ್ರಕ್ಕೆ ಮೂವರು ನಾಯಕರಿಯರು. ಇವರಲ್ಲಿ ಜೆನ್ನಿಫರ್ ಕೊತ್ವಾಲ್ ಹಾಗೂ ರಾಗಿಣಿ ಆಯ್ಕೆಯಾಗಿದ್ದಾರೆ. ಇನ್ನೊಂದು ನಾಯಕಿಯ ಆಯ್ಕೆ ಕಾರ್ಯ ನಡೆಯುತ್ತಿದೆ.