ನಮ್ಮ ದುನಿಯಾ ವಿಜಯ್ ಅಭಿನಯಿಸುತ್ತಿರುವ ಕಂಠೀರವ ಚಿತ್ರತಂಡವಿದೀಗ ಹೊರ ರಾಜ್ಯಕ್ಕೆ ಪಯಣ ಬೆಳೆಸಿದೆ. ರಾಮು ನಿರ್ಮಿಸುತ್ತಿರುವ ಈ ಚಿತ್ರ ಕೇರಳದ ರಾಜಧಾನಿ ತ್ರಿವೇಂದ್ರಂನಲ್ಲಿ ತಮ್ಮ ಚಿತ್ರತಂಡದೊಂದಿಗೆ ಚಿತ್ರೀಕರಣದಲ್ಲಿ ತೊಡಗಿದ್ದು, ಶೂಟಿಂಗ್ ಭರದಿಂದ ಸಾಗಿದೆ.
ಚಿತ್ರೀಕರಣದಲ್ಲಿ ನಟ ವಿಜಯ್, ನಟಿ ಯಮುನಾ, ಮಹೇಶ್ ಮುಂತಾದವರು ಭಾಗವಹಿಸಿದ್ದು, ಹಸಿರು ಸಿರಿಯ ನಡುವೆ ಹೃದಯಯಸ್ಪರ್ಷಿ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಕೇವಲ ಹೃದಯಕ್ಕೆ ಹತ್ತಿರವಾಗುವ ಸನ್ನಿವೇಶ ಮಾತ್ರವಲ್ಲ ವಿಜಯ್ ಮತ್ತು ರಾಹುಲ್ ದೇವ್ ನಡುವೆ ನಡೆಯುವ ಹೊಡೆದಾಟದ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಚಿತ್ರೀಕರಣದಲ್ಲಿ ಸಾವಿರಾರು ಮಂದಿ ಸಹ ಕಲಾವಿದರು, ಐದಾರು ಆನೆಗಳು, ಯಕ್ಷಗಾನ ಕಲಾವಿದರು, ಡೊಳ್ಳುಕುಣಿತಗಾರರು ಸೇರಿದಂತೆ ಹಲವು ವಿಧದ ಜಾನಪದ ಕಲಾವಿದರು ಪಾಲ್ಗೊಂಡು ಚಿತ್ರೀಕರಣ ಯಶಸ್ವಿಗೊಳಿಸುತ್ತಿದ್ದಾರೆ.
ಬಹುವಿಶೇಷ ಮುಂಜಾಗ್ರತೆಯೊಂದಿಗೆ ಚಿತ್ರದ ಚಿತ್ರೀಕರಣ ಸಾಗಿದ್ದು, ಥ್ರಿಲ್ಲರ್ ಮಂಜು ಸಾಹಸ ಹಾಗೂ ದಾಸರೀ ಸೀನು ಅವರ ಛಾಯಾಗ್ರಹಣ ಕೈಚಳಕ ಮೆರೆಯುತ್ತಿದೆ. ಕೇರಳದ ನಾನಾ ಭಾಗದ ಪ್ರಕೃತಿ ಸಿರಿಯ ಸೊಬಗು ಸವಿಯುವ ಅವಕಾಶವೂ ಈ ಚಿತ್ರದಿಂದ ಒದಗಿ ಬರಲಿದೆ.
ಒಟ್ಟಾರೆ ಈ ವಾರ ಶಂಕರ್ ಐಪಿಎಸ್ ಬಿಡುಗಡೆಯಾಗಿದ್ದು, ಅದನ್ನು ಕಾತುರವಾಗಿ ನಿರೀಕ್ಷಿಸಿರುವ ವಿಜಯ್‌ಗೆ ಕಂಠೀರವನೂ ಯಶಸ್ಸು ತಂದುಕೊಡಲಿ ಎಂದು ಹಾರೈಸೋಣ.