ಚಿತ್ರವಿಲ್ಲದೇ ಖಾಲಿ ಹೊಡೆದ್ರೂ, ಸುದ್ದಿಯಾಗುತ್ತಿರುವ ಶರ್ಮಿಳೆ
MOKSHA
ನಟಿ ಶರ್ಮಿಳಾ ಮಾಂಡ್ರೆ, ಸದ್ಯ ಯಾವ ಚಿತ್ರದಲ್ಲೂ ಅಭಿನಯಿಸುತ್ತಿಲ್ಲ. ಆದರೂ ಶ್ಯಾನೆ ಬ್ಯುಸಿ ಆಗಿದ್ದಾರೆ. ಕೈಲಿ ಚಿತ್ರವೇ ಇಲ್ಲದಿದ್ದರೂ, ಸಾಕಷ್ಟು ಸುದ್ದಿಯಲ್ಲಿರುವ ಕನ್ನಡದ ಏಕೈಕ ನಟಿ ಈಕೆ. ಯಾವತ್ತು ಈಕೆ ಕನ್ನಡದ ನೆಲದಲ್ಲಿ ಇರುತ್ತಾಳೆ, ಯಾವಾಗ ಬೇರೆ ರಾಜ್ಯ, ದೇಶಕ್ಕೆ ತೆರಳುತ್ತಾಳೆ ಎನ್ನುವುದೇ ಅರಿವಾಗುವುದಿಲ್ಲ.
ಇವರು ಸದಾ ಪ್ರವಾಸ ಪ್ರಿಯೆ. ಒಂದಲ್ಲಾ ಒಂದೆಡೆ ತೆರಳುವುದು ಇವರ ಹವ್ಯಾಸ. ಇದಕ್ಕೆ ರಾಜ್ಯ ದೇಶಗಳ ಬೇಧವಿಲ್ಲ. ಹೋದಾಗ ಅಲ್ಲಿ ಮಸ್ತ್ ಮಜಾ ಮಾಡಿ ಜೊತೆಗೆ ಒಂದಿಷ್ಟು ಶಾಪಿಂಗು ಗೀಪಿಂಗು ಎಲ್ಲಾ ಮಾಡಿ ಮರಳಿ ಬರುತ್ತಾರೆ. ಒಟ್ಟಾರೆ ಏನೂ ಮಾಡದೇ ಇದ್ದರೂ, ಸುದ್ದಿಯಾಗುವ ಕಲೆ ಶರ್ಮಿಳಾಗೆ ಗೊತ್ತು. ಚಿತ್ರವಿಲ್ಲದೇ ಎಲ್ಲೂ ಕಾಣಿಸಿಕೊಳ್ಳದೇ ಮರೆಯಾಗಿ ಹೋಗುವ ಬದಲು ಹೀಗಾದರೂ ಪತ್ರಿಕೆಗಳ ಕಾಲಂಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ ಶರ್ಮಿಳಾ. ಭೇಷ್ ಅನ್ನದೇ ವಿಧಿಯಿಲ್ಲ.
ಅಂದಹಾಗೆ, ಸದ್ಯ ಶರ್ಮಿಳಾಗೆ ಮುಂಬೈ ಗೀಳು ಹತ್ತಿದೆಯಂತೆ. ಇದಕ್ಕಾಗಿ ಹೊಸದಾಗಿ ಫೋಟೋ ಶೂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರಂತೆ. ಧೂಮ್ ಮಾದರಿಯ ಚಿತ್ರದಲ್ಲಿ ಸಹ ತಾವು ಪಾಲ್ಗೊಳ್ಳುತ್ತೇನೆ ಎನ್ನುವ ಮೂಲಕ ಬಿಕಿನಿ ಧರಿಸಲು ಸಿದ್ಧರಾಗಿದ್ದಾರೆ. ಅಲ್ಲಿಗೆ ಕನ್ನಡದ ಪಡ್ಡೆ ಹೈಕಳು ದಯವಿಟ್ಟು ಹಿಂದಿಯಲ್ಲಿ ಅಭಿನಯಿಸಿ ಅಂತ ದುಂಬಾಲು ಬಿದ್ದಿದ್ದಾರೆ ಅಂತ ಸುದ್ದಿ. ಗಾಳಿ ಸುದ್ದಿ ಅಂತ ಕೆಲವರು ಆಡಿಕೊಂಡರು, ಅವರು ಮುಂಬೈಗೆ ಹೋಗಲಿ ಬಿಡಿ ಅನ್ನುತ್ತಿದ್ದಾರೆ ಗಾಂಧಿನಗರದ ಜನ.