ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೋಲರಿಯದ ನಟ ಪುನೀತ್ 'ಜಾಕಿ'ಯಲ್ಲಿ ಬ್ಯುಸಿ (Jackey | Soori | Duniya | Puneeth Rajkumar | Bhavana Menon)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪುನೀತ್ ರಾಜ್ ಕುಮಾರ್ ಅದೃಷ್ಟ ನಿಜಕ್ಕೂ ಚೆನ್ನಾಗಿದೆ. ಅಭಿನಯದಲ್ಲಿಯೂ ಹೆಸರು ಮಾಡಿರುವ ಈ ಪ್ರತಿಭೆ, ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ ಕಾಣುತ್ತಿರುವ ಏಕೈಕ ಯಶಸ್ವಿ ನಟ. ಇವರ ಅಭಿನಯದ ರಾಜ್ ಚಿತ್ರ ಈಗಲೂ ಓಡುತ್ತಿದ್ದು, ರಾಮ್ ಕೂಡಾ ಪೈಪೋಟಿಯಲ್ಲಿದೆ. ಇದೇ ವೇಳೆ, ಪ್ರಥ್ವಿಯೂ ಸಾಕಷ್ಟು ಹೆಸರು ತಂದುಕೊಡುತ್ತಿದೆ. ಪ್ರತಿ ಚಿತ್ರವೂ ಶತದಿನ ಪೂರೈಸಿ ಯಶಸ್ವಿಯಾಗುತ್ತಿದ್ದು, ವಿಪರೀತ ಬೇಡಿಕೆಯಲ್ಲಿರುವ ನಟರಾಗಿ, ಸೋಲರಿಯದ ಸಾಹಸಿಯಾಗಿ ಕಂಗೊಳಿಸುತ್ತಿದ್ದಾರೆ.

ಇವರ ಅಭಿನಯದ ಹೊಸ ಚಿತ್ರ 'ಜಾಕಿ' ಇದೀಗ ಎಲ್ಲೆಡೆ ಭರದ ಚಿತ್ರೀಕರಣದಲ್ಲಿ ತೊಡಗಿದೆ. ದುನಿಯಾ ಖ್ಯಾತಿಯ ಸೂರಿ ನಿರ್ದೇಶನ ಹೊಂದಿರುವ ಈ ಜಾಕಿ ಚಿತ್ರ ತಂಡ ವಿಪರೀತ ಶ್ರಮವಹಿಸಿ ಶೂಟಿಂಗಿನಲ್ಲಿ ತೊಡಗಿದೆ. ಇದರ ಭರಾಟೆ ನೋಡಿದರೆ ಮತ್ತೊಮ್ಮೆ ಯಶಸ್ವಿ ನಟ ಎಂಬುದನ್ನು ಈ ಚಿತ್ರದ ಮೂಲಕವೂ ಪುನೀತ್ ಸಾಧಿಸಿ ತೋರಿಸಲಿದ್ದಾರೆ ಎಂಬುದು ನಿಶ್ಚಿತವಾಗುತ್ತಿದೆ.

ನಗರದಲ್ಲಿ ಭರದಿಂದ ಸಾಗಿರುವ ಜಾಕಿ ಚಿತ್ರದ ಚಿತ್ರೀಕರಣದಲ್ಲಿ ಪುನಿತ್ ಹಾಗೂ ನಾಯಕಿ ಭಾವನಾ ಮೆನನ್ ತೊಡಗಿದ್ದಾರೆ. ಬಹುದಿನದ ನಂತರ ಪಾರ್ವತಮ್ಮ ಮತ್ತೆ ನಿರ್ಮಾಣಕ್ಕೆ ಇಳಿದಿದ್ದು, ಮಗನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ತಾಂತ್ರಿಕ ವರ್ಗದಲ್ಲಿ ಸಬಲರ ದಂಡೇ ಕಾಣಿಸುತ್ತಿದೆ. ಸತ್ಯ ಹೆಗಡೆ ಛಾಯಾಗ್ರಹಣ ಇದ್ದರೆ, ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ ಲಭಿಸಿದೆ. ಒಟ್ಟಾರೆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಚಿತ್ರ ಶೀಘ್ರವೇ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕಿ, ಸೂರಿ, ದುನಿಯಾ, ಪುನೀತ್ ರಾಜ್ ಕುಮಾರ್, ಭಾವನಾ ಮೆನನ್