ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಲು ಸಾಲು ಚಿತ್ರಗಳಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi | Cricket | Mungaru Male)
ಸುದ್ದಿ/ಗಾಸಿಪ್
Bookmark and Share Feedback Print
 
WD
ಪೂಜಾ ಗಾಂಧಿ ಹೆಸರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಕನ್ನಡದ ನಂ.1 ಪಟ್ಟದವರೆಗೂ ಏರಿದ ಈ ಉತ್ತರ ಭಾರತದ ಬೆಡಗಿಯ ಅದೃಷ್ಟವೋ ಅಥವಾ ಮಳೆಯ ಪ್ರಭಾವವೋ ಗೊತ್ತಿಲ್ಲ. ಇತ್ತೀಚೆಗೆ ಸಾಲು ಸಾಲು ಚಿತ್ರಗಳು ತೋಪಾದರೂ, ಒಂದರ ಮೇಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ.

ಈಗ ಪೂಜಾ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರವನ್ನು ತೆಲುಗು ನಿರ್ದೇಶಕ ಸಂಜೀವ್ ಕುಮಾರ್ ಅವರು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಚಿತ್ರ ಬರುವ ಜೂನ್ ಕೊನೆ ವಾರದಲ್ಲಿ ಪ್ರಾರಂಭವಾಗಲಿದೆ. ಆದರೆ ಚಿತ್ರಕ್ಕಿನ್ನು ಹೆಸರು ನಿಕ್ಕಿಯಾಗಿಲ್ಲ. ಚಿತ್ರದ ನಿರ್ಮಾಪಕರೂ ಕೂಡ ತೆಲುಗು ಮೂಲದ ತೇಜಸ್ ಬಾಬು. ನಾಯಕನ ಆಯ್ಕೆಯೂ ನಡೆದಿಲ್ಲ.

ಮತ್ತೊಂದು ವಿಷಯ. ಸದ್ಯಕ್ಕೆ ಪೂಜಾ ಕ್ರಿಕೆಟ್ಟಿನ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅಂಗವಿಕಲರ ಕ್ರಿಕೆಟ್ ಟೂರ್ನಿಗೆ ಈಕೆಯೇ ರಾಯಭಾರಿ. ಅಂಗವಿಕಲರ ಪ್ರತಿಭೆ ಕಂಡು ಮನಸೋತು ಪೂಜಾ ಅಂಗವಿಕಲರ ಕ್ರಿಕೆಟಿಗಾಗಿ ಹುರ್ರೇ ಎನ್ನಲಿದ್ದಾರಂತೆ. ಅಂತೂ ಪೂಜಾರ ಲಕ್ಕೋ ಲಕ್ಕು ಬಿಡಿ. ಚಿತ್ರಗಳು ಸಾಲು ಸಾಲು ತೋಪೆದ್ದರೂ ಅವಕಾಶಕ್ಕೇನೂ ಬರವಿಲ್ಲ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಕ್ರಿಕೆಟ್, ಮುಂಗಾರು ಮಳೆ