ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಯಿಂದ ಮತ್ತೊಂದು ಚಿತ್ರ (Golden Star | Ganesh | Shilpa | Maleyali Jotheyali)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮಳೆಯಲಿ ಜೊತೆಯಲಿ ಚಿತ್ರದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಹಾಗೂ ಮಡದಿ ಶಿಲ್ಪಾ ಗಣೇಶ್ ನಿರ್ಮಾಣದ ಎರಡನೇ ಚಿತ್ರಕ್ಕೆ ಸಿದ್ಧತೆ ಆರಂಭವಾಗಿದೆ. ಗೋಲ್ಡನ್ ಮೂವೀಸ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಚಿತ್ರವನ್ನು ಜೂನ್ 21ರಂದು ಮುಹೂರ್ತ ನಡೆಸಲು ತೀರ್ಮಾನಿಸಿದ್ದಾರೆ ಶಿಲ್ಪಾ ಗಣೇಶ್.

ಚಿತ್ರದ ಚಿತ್ರೀಕರಣವನ್ನು ಗಣೇಶ್ ಹುಟ್ಟುಹಬ್ಬವಾದ ಜುಲೈ 12ರಿಂದ ಪ್ರಾರಂಭಿಸಲು ಯೋಜಿಸಿದ್ದಾರೆ. ಏನೋ ಒಂಥರಾ ನಿರ್ದೇಶಕ ಮಹೇಶ್ ಎರಡನೇ ಬಾರಿಗೆ ಗಣೇಶ್ ಜೊತೆಯಾಗಿದ್ದು ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ರಜನೀಕಾಂತ್, ಐಶ್ವರ್ಯ ರೈ ಅಭಿನಯನದ ರೋಬೋ ಚಿತ್ರದ ಛಾಯಾಗ್ರಾಹಕ ರತ್ನವೇಲು ಅವರನ್ನು ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಮಾಡಲಾಗಿದೆ.

ಪೆಡಾಲ ಶಿವಸುಬ್ರಮಣ್ಯ ಅವರು ಚಿತ್ರಕ್ಕೆ ಕಥೆ ಬರೆದಿದ್ದಾರೆ. ಇವರು ತೆಲುಗು ಚಿತ್ರರಂಗದ ಯಶಸ್ವಿ ಕಥೆಗಾರ. ಚಿತ್ರಕ್ಕಿನ್ನು ನಾಯಕಿಯ ಆಯ್ಕೆಯಾಗಿಲ್ಲ. ಈ ಬಾರಿ ಅಂದದ ಅರಗಿಣಿಗಿಂತಲೂ ಅಭಿನಯ ಚತುರೆಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ ಗಣೇಶ್.

ಮುಂಗಾರು ಮಳೆಯಲ್ಲಿ ಮಳೆ ಹುಡುಗನಾಗಿ ಜನಪ್ರಿಯರಾದ ಗಣೇಶ್ ತನ್ನದೇ ಹೋ ಬ್ಯಾನರಿನಲ್ಲೂ ಮಳೆಯನ್ನು ಬಿಡದೆ ಮಳೆಯಲಿ ಜೊತೆಯಲಿ ಚಿತ್ರ ನಿರ್ಮಿಸಿದ್ದರು. ಇದೀಗ ಈ ಚಿತ್ರದ ಮೇಲೆ ಮಳೆಯ ಪ್ರಭಾವವಿದೆಯೋ ಗೊತ್ತಿಲ್ಲ. ಆದರೂ ಚಿತ್ರ ಜುಲೈನಲ್ಲಿ ಸೆಟ್ಟೇರುವ ಲಕ್ಷಣ ಕಾಣುತ್ತಿರುವುದರಿಂದ ಮಳೆಯ ಛಾಯೆ ಇದ್ದರೂ ಇರಬಹುದು. ಎಲ್ಲವಕ್ಕೂ ಕಾಯಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಲ್ಡನ್ ಸ್ಟಾರ್, ಗಣೇಶ್, ಶಿಲ್ಪಾ, ಮಳೆಯಲಿ ಜೊತೆಯಲಿ