ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೊದಲ ಹೆಜ್ಜೆಯನ್ನೇ ದಿಟ್ಟವಾಗಿ ಇಟ್ಟ ಬಸಂತ್ (Basanth Kumar Patil | Kites | Karnataka Film Chamber of Commerce)
ಸುದ್ದಿ/ಗಾಸಿಪ್
Bookmark and Share Feedback Print
 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಬಸಂತ್ ಕುಮಾರ್ ಪಾಟೀಲ್, ಮೊದಲ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಎದುರಾದ ಪರೀಕ್ಷೆಯಲ್ಲಿ ಜಯಗಳಿಸಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಕೈಟ್ಸ್ ವಿವಾದ. ಮಂಡಳಿ ನಿಯಮಗಳಂತೆ ಕರ್ನಾಟಕದಲ್ಲಿ ಗರಿಷ್ಠ 21 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಅವಕಾಶ ಇದೆ. ಆದರೆ ಕೈಟ್ಸ್ ಚಿತ್ರ ನಿಗದಿಗಿಂತ ಹೆಚ್ಚು ಪ್ರಿಂಟ್‌ಗಳನ್ನು ಮಾಡಿ ಬಿಡುಗಡೆಗೊಳಿಸಿತ್ತು. ಇದು ನಿಯಮಗಳಿಗೆ ವಿರೋಧವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರ ನಿರ್ಮಾಪಕರು, ಚಿತ್ರ ಬಿಡುಗಡೆಯ ಮುನ್ನಾದಿನವೇ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು. ತಕ್ಷಣ ಕೈಟ್ಸ್ ವಿತರಕರನ್ನು ಮಾತುಕತೆ ಬಸಂತ್ ಕುಮಾರ್ ಆಹ್ವಾನಿಸಿದರು. ಆದರೆ ಯಾರೂ ಬರಲಿಲ್ಲ.

ಈ ಹಿನ್ನೆಲೆಯಲ್ಲಿ ಬಸಂತ್ ಕುಮಾರ್ ಕೈಟ್ಸ್ ಜಾಹಿರಾತುಗಳನ್ನು ಪ್ರಕಟಿಸದಂತೆ ಪತ್ರಿಕೆಗಳಿಗೆ ಸಂದೇಶ ರವಾನಿಸಿದರು. ಅಷ್ಟೇ ಅಲ್ಲ, ಪ್ರದರ್ಶನಕ್ಕೆ ಕೂಡ ತಡೆಯೊಡ್ಡಿದರು. ಕೊನೆಗೆ ಸಮಸ್ಯೆ ಪರಿಹಾರಕ್ಕಾಗಿ ಸ್ವತಃ ಕೈಟ್ಸ್ ನಿರ್ಮಾಪಕ ರಾಕೇಶ್ ರೋಶನ್ ದೂರವಾಣಿ ಮೂಲಕ ಮಾತನಾಡಿದರು. ಆದರೆ ಅದಕ್ಕೂ ಪಾಟೀಲ್ ಒಪ್ಪಲಿಲ್ಲ. ಬಸಂತ್ ಕುಮಾರ್ ಅವರೇ ತಂಡ ಕಟ್ಟಿಕೊಂಡು ಬೀದಿಗಿಳಿದು, ಪ್ರದರ್ಶನ ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದರು. ಇವರೆಲ್ಲಾ ಬಂಧನಕ್ಕೊಳಗಾದರೂ, ಚಿತ್ರ ಪ್ರದರ್ಶನವೂ ನಿಂತಿತು.

ಇದೆಲ್ಲವುದರ ಪರಿಣಾಮ ಕೈಟ್ಸ್ ವಿತರಕರು ಸಂಧಾನಕ್ಕೆ ಮುಂದೆ ಬಂದು, ನಿಯಮಗಳ ಪ್ರಕಾರವೇ ಮುಂದುವರೆಯುವುದಾಗಿ ತಿಳಿಸಿದರು. ಅಂತೂ ಬಸಂತ್ ಗೆಲುವು ಸಾಧಿಸಿಯೇ ಬಿಟ್ಟರು. ಇದು ಹೋರಾಟಕ್ಕೆ ಸಿಕ್ಕ ಜಯ. ಅಧ್ಯಕ್ಷರು ಇಷ್ಟು ದೊಡ್ಡ ವಿಷಯ ಮಾಡುವುದರ ಅಗತ್ಯವಿಲ್ಲ ಎಂದು ಕೆಲವರು ಅಪಸ್ವರ ನುಡಿದರೂ, ಮಂಡಳಿ ಮೇಲೆ ನಿರ್ಮಾಪಕರಿಗೆ, ಚಿತ್ರರಂಗಕ್ಕೆ ವಿಶ್ವಾಸ ಮೂಡಿದ್ದಂತೂ ಸತ್ಯ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಸಂತ್ ಕುಮಾರ್ ಪಾಟೀಲ್, ಕೈಟ್ಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ