ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಗಳು ತೆಲುಗಿಗೆ, ಈಗ ಜಯಮಾಲಾ ಚಿತ್ರ ನಿರ್ದೇಶನದತ್ತ (Jayamala | Soundarya | Mr.Premikudu | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
WD
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಹೊರ ಬಂದ ಬಳಿಕ ಡಾ. ಜಯಮಾಲಾ ಈಗೇನು ಮಾಡುತ್ತಿದ್ದಾರೆ? ತಮ್ಮ ಪುತ್ರಿ ಸೌಂದರ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಮೊದಲ ಕಾರ್ಯವನ್ನಂತೂ ಮೊದಲು ಮಾಡಿದ್ದಾರೆ. ಸೌಂದರ್ಯ ತೆಲುಗಿನ ಮಿ. ಪ್ರೇಮಿಕುಡು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಚಿತ್ರದಲ್ಲಿ ಮತ್ತೊಬ್ಬ ಕನ್ನಡಿಗ ಉಲ್ಲಾಸಂಗ ಉತ್ಸಾಹಂಗ ಖ್ಯಾತಿಯ ಯಶೋಸಾಗರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತಕ್ಕೂ ಜಯಮಾಲಾ ದಂಪತಿ ಹಾಜರಾಗಿ ಬೆಂಗಳೂರಿಗೆ ಮರಳಿದ್ದಾರೆ.

ಈ ಚಿತ್ರದ ನಿರ್ದೇಶಕರು ಮನೋ ಅಭಿನವ್. ತನಗೆ ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ದ್ಕಕೆ ಸಂತಸವಾಗುತ್ತಿದೆ. ತೆಲುಗು ಪ್ರೇಕ್ಷಕರು ನನ್ನನ್ನು ಆಶೀರ್ವದಿಸಲಿದ್ದಾರೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಸೌಂದರ್ಯಾ ಈ ಸಂದರ್ಭ ನುಡಿದರು. ಈ ಹಿಂದೆ ಸೌಂದರ್ಯಾ ಯೋಹರಾಜ ಭಟ್ಟರ ಲಗೋರಿ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದ್ದರೂ ಕೊನೆಗೆ ಅದು ಠುಸ್ಸಾಗಿತ್ತು.

ನಿರ್ದೇಶನದತ್ತ ಜಯಮಾಲಾ: ಇದೀಗ ಜಯಮಾಲಾ ನಿರ್ದೇಶನದತ್ತ ಚಿತ್ತ ಹೊರಳಿದ್ದಾರಂತೆ. ಈವರೆಗೆ ನಟಿ, ನಿರ್ಮಾಪಕಿಯಾಗಿದ್ದ ಜಯಮಾಲಾ ಅವರು ನಿರ್ದೇಶನ ಮಾಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಎಲ್ಲ ಒತ್ತಡಗಳನ್ನು ಬದಿಗಿಟ್ಟು ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬುದು ಅವರ ಕನಸಂತೆ. ಹಾಗಂತ ಪ್ರಶಸ್ತಿಗಾಗಿ ಚಿತ್ರ ನಿರ್ದೇಶನಕ್ಕಿಳಿಯುತ್ತಿಲ್ಲ ಎಂಬುದನ್ನೂ ಅವರು ಹೇಳುತ್ತಾರೆ.

ಇದನ್ನು ಕಾರ್ಯಗತಗೊಳಿಸಲು ತುಂಬಾ ಸಮಯ ಹಿಡಿಯಬಹುದು ಕಾರಣ, ಇವರಿಂದ ನಿರ್ದೇಶನ ಮಾಡುವುದು ಸಾಧ್ಯವೆ ಎಂಬ ಅನುಮಾನಗಳನ್ನು ನಿವಾರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಾಗ ಸ್ವಲ್ಪ ಸಮಯ ಹಿಡಿಯಬಹುದಂತೆ. ಇದಕ್ಕೆ ತಕ್ಕುದಾದ ತಂತ್ರಜ್ಞರು, ಕಥೆ ಎಲ್ಲವೂ ಸಿದ್ಧಪಡಿಸಬೇಕು. ಈ ನಿಟ್ಟಿನಲ್ಲಿ ಜಯಮಾಲಾ ನಿರ್ದೇಶನಕ್ಕೆ ಕಾಲಿಡಲು ಇನ್ನೂ ಕಾಲ ಕೂಡಿ ಬರಬೇಕಿದೆ.

ಅದೇನೇ ಇರಲಿ. ಇನ್ನೊಂದು ವಿಷಯ, ಇತ್ತೀಚೆಗೆ ನಡೆದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾಗ ಹಣದ ಕೊರತೆ ಎದುರಾಯಿತಂತೆ. ಈ ಸಂದರ್ಭದಲ್ಲಿ ಜಯಮಾಲಾ ಸ್ವತಃ ತಮ್ಮ ಅಕೌಂಟಿನಿಂದ 25 ಲಕ್ಷ ಸುರಿದಿದ್ದರಂತೆ. ಅದಕ್ಕೆ ಅವರು ಹೇಳುವುದಿಷ್ಟೇ. ಇಲ್ಲವಾದರೆ ಅಮೃತ ಮಹೋತ್ಸವದಂದು 75 ಪುಸ್ತಕಗಳು ಹೊರಬರುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಯಮಾಲಾ, ಸೌಂದರ್ಯಾ, ಮಿಪ್ರೇಮಿಕುಡು, ಕನ್ನಡ ಸಿನಿಮಾ