ಪ್ರಕಾಶ್ ರೈ ತನ್ನ ಪತ್ನಿ ಲಲಿತಾ ಕುಮಾರಿಗೆ ವಿಚ್ಛೇದನ ನೀಡಿದ್ದಾಗಿದೆ. ಇದೀಗ ಪ್ರಕಾಶ್ ರೈ ಸದ್ಯದಲ್ಲೇ ಬಾಲಿವುಡ್ಡಿನ ಖ್ಯಾತ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳುತ್ತಿರುವುದು ಗೊತ್ತು. ಆದರೆ ಈವರೆಗೆ ಮೌನವಾಗಿದ್ದ ಮಾಜಿ ಪತ್ನಿ ಲಲಿತಾ ಕುಮಾರಿ ಇದೀಗ ಮೌನ ಮುರಿದು ತನ್ನ ಮಾಜಿ ಗಂಡನ ಬಾಳು ಹಸನಾಗಲಿ ಎಂದಿದ್ದಾರೆ. ಮುಂದಿನ ವೈವಾಹಿಕ ಜೀವನಕ್ಕೆ ಶುಭ ಹಾರೈಸಿರುವ ಲಲಿತಾ, ನನಗೆ ನನ್ನ ಮಕ್ಕಳೇ ಇನ್ನು ಸರ್ವಸ್ವ ಎಂದಿದ್ದಾರೆ.
ಕಳೆದೆರಡು ವರ್ಷಗಳಿಂದ ಪೋನಿ ವರ್ಮಾರನ್ನು ಪ್ರಕಾಶ್ ರೈ ಪ್ರೀತಿಸುತ್ತಿದ್ದರು. ಇದೇ ವೇಳ ಪ್ರಕಾಶ್ ರೈ ದಾಂಪತ್ಯ ಜೀವನದಲ್ಲೂ ಬಿರುಕು ಮೂಡಲು ಆರಂಭವಾಗಿತ್ತು. ಆಧರೆ ಮೂಲಗಳ ಪ್ರಕಾರ, ಪೋನಿ ವರ್ಮಾ ಜೊತೆಗಿನ ಸಲುಗೆಯೂ ದಾಂಪತ್ಯ ಒಡೆಯಲು ಮೂಲ ಕಾರಣ ಎನ್ನಲಾಗುತ್ತಿದೆ.
ಅದೇನೇ ಇರಲಿ. ಇದೀಗ ಪ್ರಕಾಶ್ ರೈ ವಿಚ್ಛೇದನ ಪಡೆಯಲಿದ್ದಾರೆ. ಮರು ಮದುವೆಯನ್ನೂ ಶೀಘ್ರದಲ್ಲೇ ಆಗಲಿದ್ದಾರೆ. ವೃತ್ತಿ ಜೀವನದಲ್ಲೂ ಸಾಕಷ್ಟು ಉತ್ತುಂಗಕ್ಕೇರುತ್ತಿದ್ದಾರೆ. ಅತ್ತ ಮಾಜಿ ಪತ್ನಿ ಲಲಿತಾ ಕುಮಾರಿ, ಪೋನಿ ವರ್ಮಾರನ್ನು ಮದುವೆಯಾಗುತ್ತಿರುವ ಪ್ರಕಾಶ್ ಬಾಳು ಹಸನಾಗಲಿ. ಪೋನಿ ವರ್ಮಾ ಜೊತೆಗಿನ ದಾಂಪತ್ಯ ಜೀವನ ಸುಗಮ ವಾಗಲಿ. ಆದರೆ ನನ್ನ ಬದುಕಿನಲ್ಲಿ ಇನ್ನು ಮುಂದೆ ನನ್ನ ಮಕ್ಕಳೇ ನನಗೆ ಎಲ್ಲವೂ. ಅವರೇ ನನ್ನ ಸರ್ವಸ್ವ ಎಂದಿದ್ದಾರೆ. ವಿಚ್ಛೇದನ ಬಳಿಕ ಮಕ್ಕಳ ಜವಾಬ್ದಾರಿಯನ್ನು ತಾಯಿ ಲಲಿತಾ ಕುಮಾರಿಗೆ ಒಪ್ಪಿಸಲಾಗಿತ್ತು. ಇದೇ ಸಂದರ್ಭ ಚಿತ್ರರಂಗಕ್ಕೂ ಮತ್ತೆ ಪಾದಾರ್ಪಣೆ ಮಾಡಿರುವ ಲಲಿತಾ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಹಿಂದೆ ನಟಿಸಿದ ಅನುಭವವೂ ಇದೆ.