ತ್ರಿಕೋಣ ಪ್ರೇಮಕಥೆಯ ಮೂಲಕ ಧ್ರುವ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವಿಕಲಚೇತನರಾಗಿ 'ಸ್ನೇಹಾಂಜಲಿ' ಚಿತ್ರದ ಮೂಲಕ ಗಮನ ಸೆಳೆದಿದ್ದ ಈತ ಈಗ ಬಣ್ಣ ಹಚ್ಚುತ್ತಿರುವುದು 'ಡಯಾನಾ'ಗಾಗಿ.
ಹೌದು. ಮಾತು ಹಾಗೂ ಶ್ರವಣ ಶಕ್ತಿ ಕಳೆದುಕೊಂಡಿದ್ದರೂ ನಿರ್ದೇಶಕರು ಹೇಳುವುದನ್ನು ಅರ್ಥೈಸಿಕೊಂಡು ಮುಕ್ತವಾಗಿ ನಟಿಸುವ ಮೂಲಕ ಆಶ್ಚರ್ಯ ಮೂಡಿಸಿದ್ದ ಈ ನಟ ಈಗ ತಮ್ಮ ಎರಡನೇ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಓಲಂಪಿಕ್‌ನಲ್ಲಿ ಗೆಲುವು ಸಾಧಿಸಬೇಕು ಎಂಬ ಛಲದಲ್ಲಿರುತ್ತಾನೆ. ಆಗ ಅವನಿಗೆ ಡಯಾನಾ ಎಂಬ ಹುಡುಗಿ ಸಿಗುತ್ತಾಳೆ. ಗಂಡ ಹೆಂಡತಿ ಮಧ್ಯೆ ಇನ್ನೊಬ್ಬರು ಬಂದರೆ ಏನಾಗಬಹುದು ಎಂದು ಎಲ್ಲರೂ ಊಹಿಸಬಹುದು. ಅದೇ ಈ ಚಿತ್ರದಲ್ಲೂ ಆಗಲಿದೆಯಂತೆ.
ಕವಿ ರಾಜೇಶ್ ನಿರ್ದೇಶಕರು. ನಿರ್ಮಾಣವೂ ಅವರದ್ದೇ ಅಂತೆ. ಡಯಾನಾ ಎಂಬ ಟೆನಿಸ್ ಆಟಗಾರ್ತಿಯ ಪಾತ್ರದಲ್ಲಿ ಸನಾತನಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅವರದ್ದು ಮಾಡರ್ನ್ ಹುಡುಗಿಯ ಪಾತ್ರವಂತೆ. ಸಂಗೀತಾ ಶೆಟ್ಟಿ ಮನೆ ಮಡದಿಯ ಪಾತ್ರ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಮುಹೂರ್ತ ನಡೆದಿದೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.