ಇತ್ತೀಚೆಗೆ ಒಂದು ಘನಘೋರ ಸೋಲನ್ನು ಅನುಭವಿಸಿ ಪಾಠ ಕಲಿತಿರುವ ಮುಸ್ಸಂಜೆ ಮಹೇಶ್, ಗಣೇಶ್ ಅವರನ್ನು ಹಾಕಿಕೊಂಡು ಹೊಸ ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಹೆಸರು ಏನೋ ಒಂಥರಾ. ಈ ಚಿತ್ರವನ್ನು ರಿಮೇಕ್ ಎಂದು ಒಪ್ಪಿಕೊಳ್ಳದ ಅವರು ಚಿತ್ರವೊಂದರ ಎಳೆಯನ್ನು ಬಳಸಿಕೊಂಡು ಹೆಣೆದ ಸ್ವಮೇಕ್ ಚಿತ್ರ ಅನ್ನುತ್ತಿದ್ದಾರೆ.
ಏನೋ ಒಂಥರಾ ಚಿತ್ರ 12 ವರ್ಷ ಹಿಂದೆ ಬಂದ ಖುಷಿ ಚಿತ್ರವನ್ನು ಹೋಲುತ್ತದೆಯಂತೆ. ನಾಯಕ ಹಾಗೂ ನಾಯಕಿ ತಾವೇ ಮೇಲು ಎಂದು ಹೇಳಿಕೊಳ್ಳಲು ಹೋದಾಗ ಆದುವ ಸ್ಥಿತಿಯೇ ಚಿತ್ರದ ಕಥೆಯಂತೆ. ಇನಿಯ ಚಿತ್ರ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಇಲ್ಲದೇ ಚಿತ್ರ ಮಾಡಬಾರದು ಎಂದು ಮಹೇಶ್ ನಿರ್ಧರಿಸಿದ್ದಾರಂತೆ. ಅದಕ್ಕಾಗಿ ಈ ಚಿತ್ರಕ್ಕೆ ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಹೇಗೋ ಮಾಡಿದರಾಯಿತು ಅನ್ನುವ ಭಾವನೆ ಅವರಿಗಿಲ್ಲ.
WD
ಗಣೇಶ್ ನಾಯಕರಾಗಿದ್ದರೆ, ನಾಯಕಿಯಾಗಿ ರಾಮ್ ಚಿತ್ರದ ಖ್ಯಾತಿಯ ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ. ಮಾತನ್ನೇ ಬಂಡವಾಳ ಮಾಡಿಕೊಂಡಿರುವ ಗಣೇಶ್‌ಗೆ ಇಲ್ಲಿ ಹೊಟ್ಟೆ ತುಂಬುವಷ್ಟು ಡೈಲಾಗುಗಳಿವೆಯಂತೆ. ಹಾಗಾಗಿ ಗಣೇಶ್ ಅಭಿಮಾನಿಗಳಿಗೆ ಮತ್ತೆ ಸುಗ್ಗಿ. 'ಸಂಭಾಷಣೆ ಮುದ್ದಾಗಿದೆ. ಕೆಲವಂತೂ ನಗಿಸುತ್ತಲೇ ಕಣ್ಣು ಒದ್ದೆ ಮಾಡುತ್ತವೆ. ಮಹೇಶ್ ಅವರ ಮುಸ್ಸಂಜೆ ಮಾತು ಚಿತ್ರ ತುಂಬಾ ಇಷ್ಟವಾಗಿತ್ತು' ಎನ್ನುತ್ತಾರೆ ಗಣೇಶ್.
ದೆಹಲಿ, ಮೈಸೂರು, ಚಿಕ್ಕಮಗಳೂರು ಹಾಗೂ ಕೇರಳ ಸುತ್ತಮುತ್ತ ಚಿತ್ರೀಕರಣಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಹಾಗೂ ಪಿಕೆಎಚ್ ದಾಸ್ ಛಾಯಾಗ್ರಹಣ ಲಭಿಸಿದೆ. ನಿರ್ಮಾಪಕ ಚಂದ್ರಶೇಖರ್ ವ್ಯವಸ್ಥಿತವಾಗಿ ಸಹಕರಿಸಲಿದ್ದಾರೆ. ಜುಲೈನಲ್ಲಿ ಚಿತ್ರ ಬಿಡುಗಡೆಯೂ ಆಗಲಿದೆಯಂತೆ.