ತಾಜಮಹಲ್ ಚಿತ್ರದ ಮೂಲಕ ಹೆಸರು ಮಾಡಿರುವ ಚಂದ್ರು ಈಗ ಮೈಲಾರಿ ನಿರ್ಮಿಸುತ್ತಿರುವುದು ಗೊತ್ತಿರುವ ವಿಷಯ. ಹೊಸ ಸುದ್ದಿ ಅಂದರೆ ಮೈಲಾರಿ ಶೇ.90ರಷ್ಟು ಸಿದ್ಧಗೊಂಡು ಇನ್ನೇನು ಹಿರಿತೆರೆಗೆ ಬರುವ ಸಾಧ್ಯತೆಯನ್ನು ತೋರಿಸುತ್ತಿದ್ದಾನೆ.
ಕೆಲ ದಿನ ಹಿಂದೆ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಅರಮನೆ ಮೈದಾನದಲ್ಲಿ ಚಿತ್ರೀಕರಿಸಲಾಗಿದೆ. ಕೈದಿ ಬಟ್ಟೆ ಧರಿಸಿದ್ದ ಶಿವಣ್ಣ, ಜತೆ ಪೊಲೀಸ್ ಸಮವಸ್ತ್ತ್ರದಲ್ಲಿ ರವಿಕಾಳೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಂದು ಅಲ್ಲಿ ಮಾತಿಗೆ ಸಿಕ್ಕ ಶಿವಣ್ಣ ಚಿತ್ರದ ಬಗ್ಗೆ ಮಾತನಾಡಿದ್ದು ಹೀಗೆ. 'ಈ ಚಿತ್ರದಲ್ಲಿ ಆಕ್ಷನ್ ಇದೆ. ಸೆಂಟಿಮೆಂಟ್ ಸೇರಿಕೊಂಡಿದೆ. ಕಮರ್ಷಿಯಲ್ ಅಂಶಗಳೆಲ್ಲ ಸೇರಿಕೊಂಡಿವೆ. ನಾನು ಈ ಚಿತ್ರಕ್ಕೆ ಮಾರುಹೋಗಿದ್ದೇನೆ' ಎಂದರು.
IFM
ಈ ಚಿತ್ರ ನನಗೆ ಸಾಕಷ್ಟು ಪಾಠ ಕಲಿಸಿಕೊಟ್ಟಿದೆ. ಹಳ್ಳಿ ಹುಡುಗಿಯ ಬದುಕು ನಿಜಕ್ಕೂ ಹೇಗಿರುತ್ತದೆ ಎಂಬುದು ಕೆಲ ದಿನದ ಅಭಿನಯದಿಂದ ತಿಳಿದುಕೊಂಡಿದ್ದೇನೆ. ನಿಜಕ್ಕೂ ಇದೊಂದು ಅತ್ಯುತ್ತಮ ಪಾತ್ರ. ನನಗೆ ಸಿಕ್ಕಿದ್ದು ಅದೃಷ್ಟ ಎಂದು ಚಿತ್ರದ ನಾಯಕಿ ಸದಾ ತುಂಬು ಹೃದಯದಿಂದ ಹೇಳಿಕೊಂಡರು. ಈ ಚಿತ್ರದಲ್ಲಿ ಗಂಡಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನಾ ಸಹ ಇದ್ದು, ಅವಳದ್ದು ಪತ್ರಕರ್ತೆಯ ಪಾತ್ರವಂತೆ.
ಅವರನ್ನು ಮಾತಿಗೆ ಎಳೆದಾಗ ಶಿವಣ್ಣನ ಜತೆ ಇದು ಎರಡನೇ ಚಿತ್ರ. ಮೊದಲು ಮಾದೇಶ ಮಾಡಿದ್ದೆ. ಈಗ ಈ ಚಿತ್ರ. ಎರಡೂ ಅನುಭವ ಉತ್ತಮವಾಗಿದೆ. ಕನ್ನಡದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ. ಒಟ್ಟಾರೆ ಎಲ್ಲರ ಅಭಿಮಾನಕ್ಕೆ ಪಾತ್ರವಾಗಿರುವ ಶಿವಣ್ಣನ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದೆ. ಯಶ ಕಾಣಲಿ ಎಂದು ಆಶಿಸೋಣ.