ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಮ್ಮುಟ್ಟಿಯನ್ನು ಕನ್ನಡಕ್ಕೆ ತರಿಸಿದ್ದು ಎಸ್ಎಂಎಸ್ ಕಥೆ (SMS | Shikari | Abhay Simha | Mammootty | Kannada Cinema | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
WD
ಮಲಯಾಳಂನ ಜನಪ್ರಿಯ ನಟ ಮುಮ್ಮಟ್ಟಿ ಕನ್ನಡಕ್ಕೆ ಬರುವ ಸುದ್ದಿ ಕೇಳಿ ಸಂತಸಗೊಂಡ ಅದೆಷ್ಟೋ ಮಂದಿ ಈಗ ಈ ವಿಷಯ ಕೇಳಿದ್ರೆ ಮತ್ತಷ್ಟು ಕುತೂಹಲಗೊಂಡಾರು. ಬರೇ ಎರಡು ಸಾಲಿನ ಕಥೆಯನ್ನು ಮೊಬೈಲ್ ಎಸ್ಎಂಎಸ್ ಮೂಲಕ ಓದಿದ ತಕ್ಷಣ ಮಮ್ಮುಟ್ಟಿ ಒಪ್ಪಿಕೊಂಡುಬಿಟ್ಟರಂತೆ!

ಹೌದು, ಶಿಕಾರಿ ಚಿತ್ರ ತಂಡ ಮೊನ್ನೆ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಇದನ್ನು ಹೇಳಿದ್ದು ಚಿತ್ರದ ನಿರ್ದೇಶಕ ಅಭಯ್ ಸಿಂಹ. ಚಿತ್ರದ ಕಥೆ ಬಗ್ಗೆ ಮಾತನಾಡಿದ ಅಭಯ್ ಸಿಂಹ, ಇದು ನಮ್ಮೊಳಗಿರುವ ಶಿಕಾರಿ. ಇರುವುದನ್ನು ಬಿಟ್ಟು ಇರದುದರೆಡೆಗೆ ಹುಡುಕುತ್ತಾ ಸಾಗುವುದೇ ಚಿತ್ರದ ಸಾರಾಂಶ. ಎಸ್ಎಂಎಸ್ ಓದಿ ಒಪ್ಪಿಕೊಂಡ ಮುಮ್ಮಟ್ಟಿಗೆ ನಾನು ಆಭಾರಿ ಎಂದಿದ್ದಾರವರು.

ಈ ಕಾರ್ಯಕ್ರಮದಲ್ಲಿ ಸನ್ಮಾನವನ್ನೂ ಸ್ವೀಕರಿಸಿ ಮಾತನಾಡಿದ ಈ ಬಹುಭಾಷಾ ಪ್ರತಿಭೆ ಮಮ್ಮುಟ್ಟಿ, 'ಕಲೆ ಹಾಗೂ ಕಲಾವಿದರಿಗೆ ಭಾಷೆಯ ಮಿತಿ ಇಲ್ಲ. ಅಭಿನಯಕ್ಕೆ ಸ್ಥಳ ವಿಶೇಷದ ಸೀಮಿತತೆ ಇಲ್ಲ. ಅಭಿನಯಕ್ಕೆ ಭಾಷೆಯ ಗಡಿಯಿಲ್ಲ. ನಮಗೆ ಅಭಿನಯ ಮುಖ್ಯ. ಅದನ್ನೇ ಮಾಡಲು ಕನ್ನಡದ ನೆಲಕ್ಕೆ ಬಂದಿದ್ದೇನೆ. ನನಗೆ ಕನ್ನಡ ಅಂದರೆ ಅತ್ಯಂತ ಪ್ರೀತಿ. ಬಹು ಸಮಯದಿಂದ ಬರುವ ಆಸೆ ಇತ್ತು. ಅವಕಾಶ ಸಿಕ್ಕಿರಲಿಲ್ಲ. ಅಭಯ್ ಹೇಳಿದ ಕಥೆ ಹಿಡಿಸಿತು. ಇಷ್ಟ ಆಯಿತು ಬಂದಿದ್ದೇನೆ. ನಿಜಕ್ಕೂ ಇದು ಕನ್ನಡದಲ್ಲಿ ಹೊಸ ಸಾಧನೆ ಮಾಡುವ ಚಿತ್ರವಾಗಲಿದೆ' ಎಂದರು.

ಚಿತ್ರದಲ್ಲಿ ಮೋಹನ್ ಹಾಗೂ ಆದಿತ್ಯ ಇದ್ದು, ನಟಿ ತಾರಾ ಸಹ ಅಭಿನಯಿಸುತ್ತಿದ್ದಾರೆ. ಕೆ. ಮಂಜು ನಿರ್ಮಾಣದ ಈ ಚಿತ್ರವನ್ನು ಅಭಯ್ ಸಿಂಹ ನಿರ್ದೇಶಿಸುತ್ತಿದ್ದಾರೆ.

ಚಿತ್ರದಲ್ಲಿ ಮುಮ್ಮಟ್ಟಿ ಜತೆ ಅಭಿನಯಿಸುತ್ತಿರುವುದಕ್ಕೆ ಮೋಹನ್ ಮತ್ತು ಆದಿತ್ಯಗೆ ತುಂಬಾ ಸಂತಸ ಇದೆಯಂತೆ. ಮೋಹನ್ ಮೊದಲ ದಿನ ಶೂಟಿಂಗ್‌ಗೆ ಬಂದಾಗಲಂತೂ ಮುಮ್ಮಟ್ಟಿ ಎದುರು ನಿಲ್ಲಲು ಮೋಹನ್‌ಗೆ ಭಯವಾಯಿತಂತೆ. ಆದರೆ ಅವರ ನಡವಳಿಕೆ ನೋಡಿ ಆತ್ಮೀಯತೆ ಹೆಚ್ಚಿತಂತೆ. ಇನ್ನು ಆದಿತ್ಯ ಪ್ರಕಾರ, ಇವರ ಜತೆ ಒಂದು ಸೀನ್ ಅಲ್ಲ, ಶಾಟ್ ಸಿಕ್ಕರೂ ಒಪ್ಪಿಕೊಳ್ಳುತ್ತಿದ್ದೆ. ಬಹುಭಾಷೆಯ ಜನಪ್ರಿಯ ನಟನ ಜತೆ ನಿಲ್ಲುವುದೇ ಒಂದು ಸಾಧನೆ. ಮೋಹನ್‌ಲಾಲ್ ಅವರೊಂದಿಗೆ ನಟಿಸಿದ್ದೆ. ಈಗ ಮುಮ್ಮುಟ್ಟಿ ಜತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ನನ್ನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ ಅನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ಎಂಎಸ್, ಶಿಕಾರಿ, ಅಭಯ್ ಸಿಂಹ, ಮಮ್ಮುಟ್ಟಿ, ಕನ್ನಡ ಸಿನಿಮಾ, ಕನ್ನಡ ಚಿತ್ರ