ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಹೇಂದರ್ ಎರಡನೇ ಇನ್ನಿಂಗ್ಸ್ (Mahendar | Shruti | Kalgejje | Kannada Cinema | Veera Bahu)
ಸುದ್ದಿ/ಗಾಸಿಪ್
Bookmark and Share Feedback Print
 
ನಟಿ ಶ್ರುತಿಯನ್ನು ಪ್ರೀತಿಸಿ ವಿವಾಹವಾಗಿ ನಂತರ ಸಣ್ಣಪುಟ್ಟ ಕಾರಣಗಳಿಂದ ಬಿಟ್ಟು
NRB
ಹೋದ ಪತ್ನಿಗಾಗಿ ಪರಿತಪಿಸಿದ ನಿರ್ದೇಶಕ ಎಸ್. ಮಹೇಂದರ್ ಕೊನೆಗೂ ಕೌಟುಂಬಿಕ ಸಮಸ್ಯೆಯಿಂದ ಆಚೆ ಬಂದಿದ್ದಾರೆ. ಅಲ್ಲದೇ ಚಿತ್ರ ಬದುಕಿನ ಎರಡನೇ ಇನಿಂಗ್ಸ್ ಉತ್ತಮವಾಗಿ ಆರಂಭಿಸಿದ್ದಾರೆ.


ನಿರ್ದೇಶಕರಾಗಿ ಉತ್ತಮ ಹೆಸರು ಮಾಡಿರುವ ಇವರು ಈಗ 'ಕಾಲ್ಗೆಜ್ಜೆ' ಚಿತ್ರದಲ್ಲಿ ಸ್ನೇಹಪೂರ್ವಕವಾಗಿ ನಟಿಸುತ್ತಿದ್ದಾರಂತೆ. ಇವರ ಶಿಷ್ಯರಾದ ನಿರ್ದೇಶಕ ಎ. ಬಂಗಾರು ಒತ್ತಾಯಪೂರ್ವಕವಾಗಿ ಕರೆದು ಅಭಿನಯಿಸುವಂತೆ ಮಾಡಿದ್ದಾರೆ.

ಮಹೇಂದರ್‌ಗೆ ಬಂಗಾರು ಅವರ ಕೆಲಸ ಅಂದರೆ ಬಹಳ ಇಷ್ಟವಂತೆ. ಚಿತ್ರ ನಗರಿಯಲ್ಲಿ ಸಾಮಾನ್ಯವಾಗಿ ತಮ್ಮ ಶಿಷ್ಯರ ಬಗ್ಗೆ ಗುರು ಒಳ್ಳೆ ಮಾತನ್ನು ಆಡುವುದು ಬಹಳ ಕಡಿಮೆ. ಆದರೆ ಮಹೇಂದರ್ ಹಾಗಲ್ಲ. ಹೃದಯವಂತ.

ಇದೀಗ ಶಿಷ್ಯ ಬಂಗಾರುಗೆ ಮಾರ್ಗದರ್ಶನ ನೀಡುತ್ತಿರುವುದಲ್ಲದೇ, ಚಿತ್ರದಲ್ಲಿ ಮಹತ್ವದ ತಿರುವು ಕೊಡುವ ಪಾತ್ರವೊಂದನ್ನು ಮಾಡುವ ಮೂಲಕ ಮತ್ತೊಮ್ಮೆ ದೊಡ್ಡ ವ್ಯಕ್ತಿಯಾಗಿದ್ದಾರೆ.

ಇನ್ನೊಂದೆಡೆ ಅವರ ನಿರ್ದೇಶನದ, ನಟ ವಿಜಯ್ ಅಭಿನಯದ 'ವೀರಬಾಹು' ಸಿದ್ಧವಾಗುತ್ತಿದೆ. ಅದರ ತಯಾರಿಯ ನಡುವೆಯೂ ಅವರು ಹತ್ತಾರು ಶಿಷ್ಯಸ್ನೇಹಿ ಕಾರ್ಯ ಮಾಡುತ್ತಲೇ ಇದ್ದಾರೆ. ತಮಗಿಂತ ತಮ್ಮ ಶಿಷ್ಯರ ಬಗ್ಗೆ ಇವರಿಗೆ ಒಲವು ಜಾಸ್ತಿ.

ಇವರ ಇನ್ನೊಂದು ಚಿತ್ರ 'ಹಾಡುಗಾರ'. ಈ ಚಿತ್ರಕ್ಕೆ ಶಿವಣ್ಣ ನಾಯಕನಾಗುವ ಸಾಧ್ಯತೆ ಹೆಚ್ಚಾಗಿದೆ. ಇದರ ನಿರ್ಮಾಣ ರಮೇಶ್ ಯಾದವ್ ಮೂವೀಸ್ ಅವರದ್ದು.

ಪತ್ನಿಯಿಂದ ಸಿಕ್ಕ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಎಸ್. ಮಹೇಂದರ್‌ಗೆ ಶುಭಾಶಯ ಹೇಳೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಹೇಂದರ್, ಶ್ರುತಿ, ಕಾಲ್ಗೆಜ್ಜೆ, ಕನ್ನಡ ಸಿನಿಮಾ, ವೀರ ಬಾಹು