ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೆಬೆಲ್ ಸ್ಟಾರ್, ಕ್ರೇಜಿ ಸ್ಟಾರ್‌ಗೆ ಹ್ಯಾಪಿ ಬರ್ತ್‌ಡೇ (Rebel Star | Ambarish | Crazy Star | Ravichandran | Birth Day | Kannada Cinema News)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಕನ್ನಡ ಚಿತ್ರರಂಗದ ಪಾಲಿಗೆ ಈ ತಿಂಗಳಾಂತ್ಯದ ಎರಡು ದಿನ ಅತ್ಯಂತ ಮಹತ್ವಪೂರ್ಣವಾದುದು. ಚಿತ್ರ ಅಭಿಮಾನಿಗಳಿಗಂತೂ, ಡಬಲ್ ಧಮಾಕಾ.

ಏಕೆಂದರೆ ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ಹಾಗೂ ಮೇರು ನಟರ ಜನ್ಮದಿನಗಳಿವು. ಇದನ್ನು ಅದೃಷ್ಟ ಅನ್ನುವುದೋ, ಕೋ ಇನ್ಸಿಡೆನ್ಸ್ ಎಂದು ಹೇಳುವುದೋ ಗೊತ್ತಿಲ್ಲ. ಶನಿವಾರ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಭಾನುವಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ಸಡಗರ.

ರೆಬೆಲ್ ಸ್ಟಾರ್ ಹೆಸರಿನಿಂದ ಕನ್ನಡ ಅಭಿಮಾನಿಗಳಿಗೆ ಪರಿಚಯವಾಗಿರುವ ಅಂಬರೀಶ್, ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿ ನಾಯಕರಾಗಿ ವೈಭವಿಸಿದವರು. ಈ ಮಂಡ್ಯದ ಗಂಡು ತಮ್ಮ ಬದುಕಿನಲ್ಲಿ ಕಂಡ ಏಳು ಬೀಳುಗಳು ಅನೇಕ.
MOKSHA
ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ ಪಯಣಿಸಿ ಯಶಸ್ವಿಯಾದ ಇವರು ಈಗ ರಾಜಕೀಯ ಹಿನ್ನಡೆಯ ಪರಿಣಾಮ ಚಿತ್ರ ಬದುಕಿನಲ್ಲಿ ಮುಂದುವರಿಯುವ ನಿರ್ಧಾರಕ್ಕೆ ಬಂದಿದ್ದಾರೆ.


ಕನ್ನಡ ಚಿತ್ರ ರಂಗದ ನಾಯಕರಲ್ಲಿ ಅತ್ಯಂತ ಹಿರಿಯ ನಾಯಕ ಇವರು. ಸದ್ಯ ಸುದೀಪ್ ಅವರ ವೀರ ಪರಂಪರೆಯಲ್ಲಿ ನಟಿಸುತ್ತಿದ್ದು, ಸಿಕ್ಕಾಪಟ್ಟೆ ಬ್ಯುಸಿ ಕೂಡ. ಅಂತ, ಕಲಿಯುಗ ಕರ್ಣ ಮುಂತಾದ ಚಿತ್ರಗಳ ಮೂಲಕ ಹೆಸರು ಮಾಡಿರುವ ಈ ನಟನಿಗೆ ಮೇ 29ರಂದು ಹುಟ್ಟು 59ನೇ ಹಬ್ಬದ ಸಡಗರ. ಅವರ ಬೆಂಗಳೂರು ನಿವಾಸದಲ್ಲಿ ಅಭಿಮಾನಿಗಳ ದಂಡೇ ನೆರೆದು ಶುಭಾಶಯ ಹೇಳುತ್ತಿದೆ. ಹ್ಯಾಪಿ ಬರ್ತ್‌ಡೇ ಅಂಬಿ ಸಾರ್.

ಮತ್ತೊಂದೆಡೆ, ಹೂ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿರುವ ನಟ ರವಿಚಂದ್ರನ್‌ಗೆ ಮೇ 30ರಂದು 49ನೇ ಹುಟ್ಟು ಹಬ್ಬದ ಸಂಭ್ರಮ. ಪ್ರೇಮಲೋಕದಿಂದ ಹೂವರೆಗೆ ಪಯಣಿಸಿರುವ ಇವರು ನಾಯಕರಾಗಿ ಅಭಿನಯಿಸಿದ ಅದೆಷ್ಟೋ ಸಿನಿಮಾಗಳು ಹೆಸರು ಮಾಡಿವೆ. ಬೇರೆ ಭಾಷೆಗಳ ಸುಂದರಿಯರನ್ನೆಲ್ಲಾ ಕನ್ನಡಕ್ಕೆ ಪರಿಚಯಿಸುತ್ತಾ, ಅತ್ಯಂತ ಅದ್ದೂರಿ ಚಿತ್ರಗಳ ನಿರ್ಮಿಸುತ್ತಾ ಗಮನ ಸೆಳೆದಿರುವ ರವಿಚಂದ್ರನ್ ಅವರಿಗೂ ನಮ್ಮಿಂದ, ನಿಮ್ಮಿಂದ ಶುಭಾಶಯಗಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೆಬೆಲ್ ಸ್ಟಾರ್, ಅಂಬರೀಶ್, ಕ್ರೇಜಿ ಸ್ಟಾರ್, ರವಿಚಂದ್ರನ್, ಕನ್ನಡ ಸಿನಿಮಾ, ಹುಟ್ಟುಹಬ್ಬ