ಕನ್ನಡ ಚಿತ್ರರಂಗದಲ್ಲಿ ಸದಾ ಚೈತನ್ಯ ಚಿಲುಮೆಯಂತಿರುವ ಕ್ರೇಜಿಸ್ಟಾರ್ ವೀರಾಸ್ವಾಮಿ ರವಿಚಂದ್ರನ್ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿಕೊಂಡಿದ್ದಾರೆ. ಸುಮಾರು 40 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿರುವ ಕನಸಿನರಾಜ ರವಿ ರಾಜಾಜಿನಗರದ ತಮ್ಮ ಸ್ವಗೃಹದಲ್ಲಿ ತಾಯಿ, ಪತ್ನಿ, ಮಕ್ಕಳೊಂದಿಗೆ ಸೇರಿ ಕೇಕ್ ಕತ್ತರಿಸುವ ಮೂಲಕ 50ನೆ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗಿನಿಂದಲೇ ಅವರ ಅಭಿಮಾನಿಗಳು ಮನೆ ಮುಂದೆ ಕಾದಿದ್ದು ರವಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸುವುದರ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.
MOKSHA
ಇದೇ 29ರ ಶನಿವಾರ 59ರ ಸಂಭ್ರಮಕ್ಕೆ ಕಾಲಿಟ್ಟ ರೆಬಲ್ ಸ್ಟಾರ್ ಅಂಬರೀಷ್ ಸಹ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ತಮ್ಮ ಮನೆಯಲ್ಲಿ ಪತ್ನಿ ಸುಮಲತಾ ಅವರೊಂದಿಗೆ ಆಚರಿಸಿಕೊಂಡರು. ಕೇಕ್ ಕತ್ತರಿಸಿ ಪತ್ನಿ ಜೊತೆ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ ಅವರು ನಂತರ ಪತ್ರಕರ್ತರೊಂದಿಗೆ ಎರಡು ಮಾತುಗಳನ್ನು ಆಡಿದರು. ನಾನು ಅಂದಿನಿಂದಲೂ ಇಂದಿನವರೆಗೂ ನೇರವಾಗಿ ಮಾತನಾಡುವವನು, ಹಿಂದೆ ಒಂದು ಮುಂದೆ ಒಂದು ಎಂವ ಮನೋಭಾವ ನನ್ನಲ್ಲಿಲ್ಲ. ಅಂತಹ ಯೋಚನೆಯೂ ಮಾಡುವವನಲ್ಲ ಎಂದರು. ಆದರೆ, ಈ ಸಂದರ್ಭದಲ್ಲಿ ನನ್ನ ಗೆಳೆಯ ವಿಷ್ಣುವರ್ಧನ್ ಇಲ್ಲದಿರುವುದು ನನ್ನನ್ನು ತೀವ್ರ ನೋವಿಗೀಡು ಮಾಡಿದೆ ಎಂದು ಆತ್ಮೀಯ ಗೆಳೆಯನನ್ನು ನೆನೆಯಲು ಮರೆಯಲಿಲ್ಲ.