ಲೂಸ್ ಮಾದ ಎಂದೇ ಖ್ಯಾತಿ ಹೊಂದಿರುವ ಯೋಗೀಶ್‌ಗೆ ಅಂತೂ ಇಂತೂ ತನ್ನ ಕನಸಿನ ಕನ್ಯೆ ಅರ್ಥಾತ್ ಜೊತೆ ಅಭಿನಯಿಸುವ ಅವಕಾಶ ಬಂದೇ ಬಿಟ್ಟಿದೆ.
ಕೇವಲ 21ರ ಹರೆಯದ ಯೋಗಿ ರಮ್ಯಾಳ ಬಹುದೊಡ್ಡ ಫ್ಯಾನ್ ಅಂತೆ. ಹಿಂದೆ ತಾನು ತೆಗೆದುಕೊಂಡ ಹಾಯಾಬೂಸ ಬೈಕ್ ಮೇಲೆ ಮೊದಲು ಕೂಡಿಸಿದ್ದೂ ಕೂಡಾ ರಮ್ಯಾರನ್ನೇ ಅನ್ನೋದು ವಿಶೇಷ. ಹಾಗಾಗಿ ರಮ್ಯಾ ಜೊತೆಗೆ ತೆರೆಯಲ್ಲೂ ಹೆಜ್ಜೆ ಹಾಕಬೇಕೆಂಬ ಬಯಕೆ ಲೂಸ್‌ಗೆ ಬಹಳ ಹಿಂದಿನಿಂದಲೂ ಇತ್ತೂ. ಆದರೆ ರಮ್ಯಾ ಹಾಗೂ ಲೂಸ್ ಮಾದನ ಜೋಡಿ ಚೆನ್ನಾಗಿ ಕಾಣೋಲ್ಲ ಎಂದು ಹಲವರು ಬೇಡ ಅಂದಿದ್ದು ಲೂಸ್ ಪಾಲಿನ ದೊಡ್ಡ ಬೇಸರದ ಸಂಗತಿಯಾಗಿತ್ತು. ಆದರೂ ಈ ನಡುವೆ ಪುಂಡ ಹಾಗೂ ಸಿದ್ಧಲಿಂಗು ಚಿತ್ರದಲ್ಲಿ ಜೋಡಿಯಾಗುವ ಅವಕಾಶ ಇದ್ದಾಗ್ಯೂ ಅದು ಡೇಟ್ಸ್ ಸಮಸ್ಯೆಯಿಂದ ಕೈತಪ್ಪಿ ಹೋಗಿತ್ತು.
ಇದೀಗ ಕೊನೆಗೂ ಲೂಸ್‌ನ ಹರಕೆ ಫಲಿಸಿದೆ. ಇನ್ನೂ ಹೆಸರಿಡದ ಚಿತ್ರಕ್ಕೆ ಯೋಗೀಶ್ ಹಾಗೂ ರಮ್ಯಾ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ರಮ್ಯಾ ಚಿತ್ರ ನಟಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರೆ, ಯೋಗೀಶ್ ನಟಿಯ ಅಭಿಮಾನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಥೇಟ್ ರಿಯಲ್ ಲೈಫ್ ಥರಾನೇ! ಈ ಚಿತ್ರದ ನಿರ್ದೇಶನದ ಹೊಣೆಯನ್ನು ಪ್ರಕಾಶ್ ಹೊತ್ತಿದ್ದಾರೆ. ಅವರು ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದೆ.
MOKSHA
ರಮ್ಯಾ ಜೊತೆ ಅಭಿನಯಿಸೋದಕ್ಕೆ ಯೋಗೀಶ್‌ಗಂತೂ ಆಸ್ಕರ್ ಸಿಕ್ಕಷ್ಟು ಖುಷಿಯಾಗಿ ಬಿಟ್ಟಿದೆ. ಎಲ್ಲಾದರೂ ಶೂಟಿಂಗ್‌ಗಾಗಿ ಹೋದರೆ ಅಭಿಮಾನಿಗಳು ಕೇಳುತ್ತಿದ್ದರು, ರಮ್ಯಾ ಜೊತೆ ಯಾವಾಗ ಅಭಿನಯಿಸುತ್ತೀರಾ ಎಂದು. ಈಗ ಅವಕಾಶ ಒದಗಿಬಂದಿದ್ದು ನನಗೆ ಸಂತಸ ತಂದಿದೆ ಎನ್ನುತ್ತಾರೆ ಯೋಗೀಶ್.
ಇನ್ನೊಂದು ಇಂಟರೆಸ್ಟಿಂಗ್ ವಿಚಾರವಿದೆ. ಯೋಗೀ ತನ್ನ ಮನೆಯ ತನ್ನ ರೂಮಿನ ತುಂಬ ರಮ್ಯಾರ ಫೋಟೋವನ್ನೇ ಅಂಟಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಈ ಚಿತ್ರದಲ್ಲೂ ಕೂಡಾ ರಮ್ಯಾರ ಅಭಿಮಾನಿ ಪಾತ್ರ ಮಾಡುತ್ತಿರುವ ಲೂಸ್ ಸದಾ ಮನೆಯ ತನ್ನ ರೂಮಿನ ತುಂಬಾ ರಮ್ಯಾ ಚಿತ್ರಗಳನ್ನು ಅಂಟಿಸಿಕೊಂಡಿರುವ ಪಡ್ಡೆ ಹುಡುಗನ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರಂತೆ!