ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈ ವಾರ ತೆರೆಗಪ್ಪಳಿಸಲಿದೆ ಕಾಮಿಡಿ ಚಿತ್ರ ಐತಲಕ್ಕಡಿ (Aithalakadi | Comedy | Bullet Prakash | Rangayana Raghu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಒಬ್ಬಿಬ್ಬರು ಹಿರಿಯ ನಟರನ್ನು ಒಂದೆಡೆ ಸೇರಿಸುವುದು ಕಷ್ಟ. ಸೇರಿಸಿದವರ ಪಾಡು ಏನು ಎಂಬುದು ಎಲ್ಲರೂ ಕಂಡಿದ್ದಾರೆ. ಆದರೆ ನಟರಿಗಿಂತ ಹೆಚ್ಚು ಜನಪ್ರಿಯವಾಗಿರುವ ಹಾಸ್ಯನಟರನ್ನು ಒಂದೆಡೆ ಸೇರಿಸುವುದು, ಅದೂ 108 ಮಂದಿಯನ್ನು ಒಟ್ಟು ಗೂಡಿಸುವುದೇ ಸವಾಲಿನ ಸಂಗತಿ. ಅದನ್ನು ಮಾಡಿ ಗೆದ್ದಿದ್ದಾರೆ ನಮ್ಮ ಬುಲೆಟ್ ಪ್ರಕಾಶ್.

ಹೌದು, ಈ ಶುಕ್ರವಾರ ತೆರೆಕಾಣುವ ಐತಲಕ್ಕಡಿ ಚಿತ್ರದಲ್ಲಿ ಕನ್ನಡದ ಐವರು ಪ್ರಮುಖ ಯುವ ನಟರ ಜತೆ ಒಟ್ಟು 108 ಕಲಾವಿದರು ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಇಮೇಜ್ ನೀಡಲಾಗಿದೆಯಂತೆ. ವಿಶೇಷವೆಂದರೆ, ಯಾರೊಬ್ಬರೂ ಹತ್ತು ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲವಂತೆ. ಆದರೆ ಯಾವ ಪಾತ್ರವನ್ನೂ ಕಡೆಗಣಿಸದೇ, ಚಿತ್ರ ಮುಗಿಯುವವರೆಗೂ, ಮುಗಿದ ನಂತರವೂ ಆಗಾಗ ನೆನಪಾಗುವ ರೀತಿ ನಿರ್ವಹಿಸಲಾಗಿದೆಯಂತೆ.

ಪ್ರತಿ ಪಾತ್ರಕ್ಕೂ ಅದರದ್ದೇ ಆದ ಜೀವ ತುಂಬಿದ್ದು, ಹಾಸ್ಯ ನಟರೆಲ್ಲಾ ಹೊಟ್ಟೆ ಹುಣ್ಣಾಗಿಸಲಿದ್ದಾರೆ. ಚಿತ್ರದ ನಾಯಕರಾದ ರಂಗಾಯಣ ರಘು ಹಾಗೂ ಬುಲೆಟ್ ಪ್ರಕಾಶ್ ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಲು ಹೊರಟಿದ್ದಾರೆ. ಚಿತ್ರ ಯಶಸ್ವಿಯಾದರೆ, ಹೊಸದೊಂದು ಶಕೆ ಆರಂಭವಾಗುವಲ್ಲಿ ಸಂಶಯವಿಲ್ಲ.

ಚಿತ್ರದಲ್ಲಿ ವಿಜಯ್ ಇದ್ದಾರೆ. ಅವರು ಬಂದಾಗ ಫೈಟ್ ಇರುತ್ತೆ. ನಮ್ಮ ರಸಿಕರ ರಾಜ ರವಿಚಂದ್ರನ್ ಬಂದು ನಾಯಕಿ ನೀತು ಅವರೊಂದಿಗೆ ಒಂದು ಡ್ಯುಯೆಟ್ ಹಾಡಿ ಹೋಗುತ್ತಾರೆ.

ಜೆ.ಜೆ. ಕೃಷ್ಣ ಕಥೆ ರಚಿಸಿಕೊಟ್ಟಿದ್ದಾರೆ. ಇತ್ತೀಚೆಗೆ ನಾಯಕನಾಗಿ ಭಡ್ತಿ ಪಡೆದಿರುವ ನಿರ್ದೇಶಕ ನಾಗಶೇಖರ್, ತಬಲಾ ನಾಣಿಯ ಅಭಿನಯವೂ ಇದೆ. ಹಾಸ್ಯ ಪಾತ್ರದ ಜೊತೆ ಸಂಗೀತ ನಿರ್ದೇಶನ ನೀಡುವ ಕಾರ್ಯ ಸಾಧು ಕೋಕಿಲಾರಿಂದ ಆಗಿದೆ. ಗಿರಿಜಾ ಲೋಕೇಶ್ ಅವರಿಗೆ ವಿಭಿನ್ನ ಪಾತ್ರ ನೀಡಲಾಗಿದೆಯಂತೆ. ಹಾಡೊಂದರಲ್ಲಿ ಇತ್ತೀಚೆಗೆ ಬಿಡುಗಡೆಯಾದ ಹೊಸ ಚಿತ್ರಗಳ ಯುವ ನಾಯಕರು ಬರುತ್ತಾರಂತೆ. ಇವರ ಸಂಖ್ಯೆ ಬರೋಬ್ಬರಿ 23. ಒಟ್ಟಾರೆ ಹಾಸ್ಯ ಚಿತ್ರಗಳ ಪಟ್ಟಿಯಲ್ಲಿ ಬಹು ನಿರೀಕ್ಷೆ ಇರಿಸಿಕೊಂಡಿರುವ ಚಿತ್ರ ಇದು. ಗೆಲ್ಲಲಿ ಅಂತ ಆಶಿಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐತಲಕ್ಕಡಿ, ಕಾಮಿಡಿ ಚಿತ್ರ, ಬುಲೆಟ್ ಪ್ರಕಾಶ್, ರಂಗಾಯಣ ರಘು, ವಿಜಯ್, ನೀತು, ರವಿಚಂದ್ರನ್