ಕನ್ನಡ ಚಿತ್ರರಂಗದಲ್ಲಿ ಸದ್ಯ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಕೆಲವಾದರೂ ಸದಯ ಸಾಕಷ್ಟು ಸುದ್ದಿ ಮಾಡುತ್ತಿವೆ, ಜನರನ್ನು ಆಕರ್ಷಿಸುತ್ತಿವೆ ಎಂಬುದೇ ಸಂತಸದ ಸುದ್ದಿ. ಅವುಗಳ ಪೈಕಿ, ಪೃಥ್ವಿ, ರಾಮ್, ಆಪ್ತರಕ್ಷಕ ಚಿತ್ರಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಆದರೆ ಆರ್ಥಿಕ ಕೊರತೆಯಿಂದಲೋ, ಅಥವಾ ಇನ್ಯಾವುದೋ ಸಮಸ್ಯೆ ಹೊತ್ತು ಹಲವು ಚಿತ್ರಗಳು ವರ್ಷಗಳು ಕಳೆದರೂ ಬಿಡುಗಡೆಯ ಭಾಗ್ಯ ಮಾತ್ರ ಕಂಡಿಲ್ಲ.
ಭೀಬೂಸ್ ಬ್ಯಾಂಗ್ ಬ್ಯಾಂಗ್, ಕಿಚ್ಚ ಹುಚ್ಚ, ತೀರ್ಥ, ಜೊತೆಗಾರ ಬಿಡುಗಡೆ ಆಗದೇ ಡಬ್ಬದಲ್ಲೇ ಉಳಿದಿರುವ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲಾ ಅತಿರಥ ಮಹಾರಥ ನಾಯಕ ನಾಯಕಿಯರನ್ನು ಒಳಗೊಂಡಿರುವ ಚಿತ್ರಗಳು ಎಂಬುದೇ ಇಂಟರೆಸ್ಟಿಂಗ್ ವಿಚಾರ. ಇಂಥವರ ಚಿತ್ರಗಳೇ ಈಗ ಬಿಡುಗಡೆ ಕಾಣದೆ ಪಡಿಪಾಟಲು ಪಟ್ಟರೆ, ಹೊಸಬರ ಪಾಡೇನು ಅನ್ನುತ್ತಿದ್ದಾರೆ ಗಾಂಧಿನಗರದ ಜನ.
ಇನ್ನೊಂದು ವಿಪರ್ಯಾಸ ಅಂದರೆ ಬಿಡುಗಡೆ ಆಗಬೇಕಿದ್ದು ಡಬ್ಬದಲ್ಲೇ ಉಳಿದಿರುವ ಚಿತ್ರಗಳಲ್ಲಿ ರಮ್ಯಾ ಅಭಿನಯದ 3 ಚಿತ್ರಗಳು ಇವೆ. ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಜೊತೆಗಾರ ಹಾಗೂ ಕಿಚ್ಚ ಹುಚ್ಚ ಚಿತ್ರಗಳಲ್ಲಿ ರಮ್ಯಾ ನಾಯಕಿ. ಒಟ್ಟಾರೆ ರಮ್ಯಾ ಅದೃಷ್ಟವೇ ಚೆನ್ನಾಗಿಲ್ಲವೋ, ಅಭಿಮಾನಿಗಳಿಗೆ ಆಕೆಯ ಚಿತ್ರ ನೋಡುವ ಅವಕಾಶ ಇಲ್ಲವೋ ಗೊತ್ತಿಲ್ಲ. ಕಿಚ್ಚ ಹುಚ್ಚ ಹಾಗೂ ತೀರ್ಥ ಚಿತ್ರದಲ್ಲಿ ನಾಯಕನಾಗಿ ಸುದೀಪ್ ಇದ್ದರೆ, ಭೀಮೂಸ್ ಬ್ಯಾಂಗ್‌ನಲ್ಲಿ ಉಪೇಂದ್ರ ಇದ್ದಾರೆ. ಜೊತೆಗಾರದಲ್ಲಿ ಪ್ರೇಮ್ ನಾಯಕ. ಒಟ್ಟಾರೆ ಹೇಗಾದರೂ ಚಿತ್ರ ಬಿಡುಗಡೆ ಆದರೆ ಸಾಕು ಅನ್ನುತ್ತಿದ್ದಾರೆ ಸ್ಯಾಂಡಲ್‌ವುಡ್ ಜನ.
WD
ಇವಕ್ಕೆಲ್ಲಾ ಕಾರಣ ಹುಡುಕಿ ಹೊರಡುವವರಿಗೆ ನಾನಾ ಆಘಾತಕಾರಿ ವಿಷಯ ಬೆಳಕಿಗೆ ಬರುತ್ತದೆ. ಕೆಲವರು ಬಜೆಟ್ ಕೊರತೆ ಅನ್ನುತ್ತಾರೆ, ಇನ್ನು ಕೆಲವರು ಚಿತ್ರ ಮಂದಿರ ಸಿಗುತ್ತಿಲ್ಲ ಅನ್ನುತ್ತಾರೆ ಮತ್ತೆ ಕೆಲವರು ಚಿತ್ರ ಮುಗಿದಿಲ್ಲ. ಶೂಟಿಂಗ್ ಬಾಕಿ ಇದೆ ಅಂತ ಹೇಳುತ್ತಾರೆ. ದೊಡ್ಡವರಿಗೇ ಈ ರೀತಿಯಾದರೆ, ಚಿಕ್ಕವರ ಪಾಡೇನು ಹೇಳಿ?
ಇನ್ನೂ ಒಂದು ವಿಚಾರ ಇಲ್ಲಿದೆ. ಈವರೆಗೆ ಅಂದುಕೊಂಡದ್ದಕ್ಕಿಂತ ಸಾಕಷ್ಟು ತಡವಾಗಿ ಬಿಡುಗಡೆಯಾದ ಚಿತ್ರಗಳೂ ಗೆದ್ದ ಉದಾಹರಣೆ ತುಂಬಾ ಕಡಿಮೆ. ಇದ್ಕಕೆ ತಾಜಾ ಉದಾಹರಣೆ ಅದರೆ, ಅಂದು ತುಂಬ ತಡವಾಗಿ ರಿಲೀಸ್ ಮಾಡಿದ ಪ್ರೇಮ್ ಅಭಿನಯದ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಎಷ್ಟೇ ಪ್ರಚಾರ ಪಡೆದರೂ, ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಹಾಗಾಗಿಯೋ ಏನೋ, ಸೋಲುವ ಭೀತಿಯಲ್ಲಿ ಚಿತ್ರ ಯಾಕೋ ಬಿಡುಗಡೆಗೆ ಬರುತ್ತಿಲ್ಲ ಅನಿಸುತ್ತೆ.