ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಟ ರವಿ ಕಾಳೆ ಸದ್ಯದಲ್ಲೇ ಚಿತ್ರರಂಗ್ಕಕೆ ಗುಡ್ ಬೈ! (Ravi Kale | Agriculture | Mylari)
ಸುದ್ದಿ/ಗಾಸಿಪ್
Bookmark and Share Feedback Print
 
'ನಾನು ಇನ್ನು ಮೂರು ವರ್ಷ ಮಾತ್ರ ಪರದೆ ಎದುರು ಕಾಣಿಸಿಕೊಳ್ಳುತ್ತೇನೆ. ನಂತರ ಬಯಸಿದರೂ ಇಲ್ಲಿ ಉಳಿಯುವುದಿಲ್ಲ.'

ಹೌದು. ಹೀಗಂತ ಹೇಳಿದವರು ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ರವಿ ಕಾಳೆ. ಇವರ ಮಾತಿನಿಂದ ಅನೇಕರು ಅಚ್ಚರಿಗೊಂಡದ್ದು ನಿಜ. ಪೊಲೀಸ್ ಅಧಿಕಾರಿ ಪಾತ್ರಕ್ಕೆ, ಖಳನಟನ ಅಭಿನಯಕ್ಕೆ, ಗಂಭೀರ ಪಾತ್ರಕ್ಕೆ ಹೇಳಿ ಮಾಡಿಸಿದ ಮುಖ, ಪ್ರಬುದ್ಧ ಅಭಿನಯ ಹೊಂದಿರುವ ನಟ ಮುಂದಿನ ಮೂರು ವರ್ಷದ ನಂತರ ಕಾಣಿಸುವುದಿಲ್ಲ ಎಂದು ಊಹಿಸಿಕೊಂಡರೂ ಒಂದು ಶೂನ್ಯ ಭಾವ ಕಾಡುತ್ತದೆ.

ಹಾಗಾದರೆ, ಅನ್ನ ನೀಡುತ್ತಿರುವ ಕನ್ನಡ ಚಿತ್ರರಂಗ ಬಿಟ್ಟು ಅವರು ಹೋಗುವುದಾದರೂ ಎಲ್ಲಿಗೆ ಎಂದರೆ, ಅವರು ಹೇಳುವ ತಕ್ಷಣದ ಉತ್ತರ ಕೃಷಿಯತ್ತ. ಹೌದು. ಅವರಿಗೆ ಇತ್ತೀಚೆಗೆ ಕೃಷಿಯತ್ತ ಒಲವು ಹೆಚ್ಚಾಗಿದೆಯಂತೆ. 'ನನಗೆ ಕೃಷಿಯತ್ತ ಆಸಕ್ತಿ ಹೆಚ್ಚುತ್ತಿದೆ. ಮೂರು ವರ್ಷದ ನಂತರ ಸಂಪೂರ್ಣ ಕೃಷಿಕನಾಗುವ ಆಸೆ ಹೊಂದಿದ್ದು, ನನ್ನ ಕೈಲಿರುವ ಚಿತ್ರವನ್ನೆಲ್ಲಾ ಪೂರೈಸಿ, ಹೊಸದನ್ನು ಒಪ್ಪಿಕೊಳ್ಳದೇ ನಿಧಾನವಾಗಿ ಚಿತ್ರರಂಗದಿಂದ ಹಿಂದೆ ಸರಿಯುತ್ತೇನೆ' ಎನ್ನುತ್ತಾರೆ.

ಪೊಲೀಸ್ ಯುನಿಫಾರಂ ಧರಿಸಿ ಮೈಲಾರಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಇವರು ಮಾತಿಗೆ ಸಿಕ್ಕ ಪತ್ರಕರ್ತರಿಗೆ ನೀಡಿದ ವಿವರಣೆ ಇದು. ಇವರು ಪೂನಾದಲ್ಲಿ ಈಗಾಗಲೇ 45 ಎಕರೆ ಕೃಷಿ ಜಮೀನು ಕೊಂಡುಕೊಂಡಿದ್ದಾರಂತೆ. ಮೊನ್ನೆ ಅಕ್ಷಯ ತೃತಿಯಾದಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅವರು, ಅಂದೇ ಈ 45 ಎಕರೆ ಜಮೀನಿನ ಉಳುಮೆ ಕೆಲಸವನ್ನೂ ಆರಂಭಿಸಿದ್ದಾರೆ.

ಈ ಜಮೀನಿನ ಸುತ್ತ ಒಂದಿಷ್ಟು ಮರಗಿಡ ಬೆಳೆಸಿ ಉತ್ತಮ ವಾತಾವರಣ ನಿರ್ಮಿಸುವುದು ಸಹ ನನ್ನ ಉದ್ದೇಶ. ಒಳ್ಳೆಯ ಗಾಳಿ ಸಿಕ್ಕರೆ ಅದಕ್ಕಿಂತ ಉತ್ತಮ ಬದುಕು ಇನ್ನೊಂದು ಇರಲಾರದು. ಪ್ರಕೃತಿ ನನಗೆ ಸಾಕಷ್ಟು ಕೊಡುಗೆ ನೀಡಿದೆ. ಅದಕ್ಕಾಗಿ ಒಂದಿಷ್ಟು ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎನ್ನುತ್ತಾರೆ.

ಹುಟ್ಟಿನಿಂದ ಬಡವರಾಗಿ ಬೆಳೆದರೂ ನಂತರ ಚಿತ್ರರಂಗದ ಮೂಲಕ ನೆಲೆ ಕಂಡುಕೊಂಡ ರವಿ ಈಗ ಮತ್ತೆ ತಮ್ಮ ಪೂರ್ವಜರ ವೃತ್ತಿಯತ್ತ ಆಸಕ್ತಿ ತೋರುತ್ತಿದ್ದಾರೆ. ದೇವರು ನನಗೆ ಸಾಕಷ್ಟು ಕೊಟ್ಟಿದ್ದಾನೆ. ತಾಯಿನಾಡಿಗಾಗಿ ಏನನ್ನಾದರೂ ಮಾಡಬೇಕು ಎನ್ನುವುದು ಅವರ ಹಂಬಲವಂತೆ. ಸದ್ಯ ಉತ್ತಮ ಪಾತ್ರಗಳು ಸಿಗುತ್ತಿದ್ದು, ಈ ಸಮಯದಲ್ಲೇ ಚಿತ್ರರಂಗ ಬಿಟ್ಟು ಹೋಗುತ್ತೇನೆ ಎಂದು ಆಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ ರವಿಕಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿ ಕಾಳೆ, ಕೃಷಿ, ಮೈಲಾರಿ, ಖಳ ನಟ