ಶಶಾಂಕ್ ತಮ್ಮ ಚಿತ್ರದಿಂದ ಮಾತ್ರವಲ್ಲ, ವಿವಾದದಿಂದಲೂ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಇವರ ಮೊಗ್ಗಿನ ಮನಸ್ಸು ಸೆನ್ಸಾರ್ ಆಗುವವರೆಗೂ ವಿವಾದ ಸೃಷ್ಟಿಸುತ್ತಲೇ ಇತ್ತು. ಈಗ ಅವರು ಮತ್ತೆ ಸುದ್ದಿಯಗಿದ್ದಾರೆ.
ಅಂದು ಮೊಗ್ಗು 'ಎ' ಪ್ರಮಾಣಪತ್ರ ಪಡೆದು ಗಲಾಟೆ ಸೃಷ್ಟಿಸಿದ ಕಥೆ, ಅದನ್ನು ಇ. ಕೃಷ್ಣಪ್ಪ ಎದುರಿಸಿದ ಬಗೆ ಎಲ್ಲವೂ ಗೊತ್ತು. ಅಂದು ಆ ವಿವಾದದ ನಂತರ ಅಷ್ಟಾಗಿ ಕಾಣಿಸಿಕೊಳ್ಳದ ಶಶಾಂಕ್ ಇದೀಗ ಅದೇ ರಾಧಿಕಾ ಪಂಡಿತ್ ಹಾಗೂ ಅಜಯ್ ತಾರಾಗಣದಲ್ಲಿ 'ಕೃಷ್ಣನ್ ಲವ್ ಸ್ಟೌರಿ' ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇದೀಗ ಇಲ್ಲೊಂದು ಸಣ್ಣ ಕಿರಿಕ್ ಆಗಿದೆ. ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೌರಿ' ಸದ್ಯ ಸಣ್ಣದೊಂದು ವಿವಾದದ ಅಲೆ ಎಬ್ಬಿಸಿದೆ.
MOKSHA
ಕೆಲದಿನದಿಂದ ವಾಹಿನಿಗಳಲ್ಲಿ ಚಿತ್ರದ ಕುರಿತ ತುಣುಕುಗಳು ಪ್ರಸಾರವಾಗುತ್ತಿದೆ. ನಿರ್ದೇಶಕರು ಅಲ್ಲಿ ಒಂದು ಸಾಲು ಬಳಸಿದ್ದಾರೆ. 'ಒಂದು ಉತ್ತಮ ಚಿತ್ರ ಮೂಡಿಬರಲು ಒಬ್ಬ ಉತ್ತಮ ನಿರ್ದೇಶಕನಿಂದ ಮಾತ್ರ ಸಾಧ್ಯ!'
ಹೌದು. ಈ ಸಾಲೇ ಈಗ ವಿವಾದಕ್ಕೆ ಕಾರಣವಾಗಿದೆ. ಇದರಿಂದ ನಿರ್ದೇಶಕರು ಏನನ್ನೂ ಹೇಳದೇ ಸುಮ್ಮನಿದ್ದರೂ, ನಿರ್ಮಾಪಕರು ಮಾತ್ರ ಕೆರಳಿದ್ದಾರೆ. 'ಇದು ಉದ್ದಟತನದ ಪರಮಾವಧಿ' ಎಂದು ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ನಿರ್ಮಾಪಕರೆಲ್ಲ ಸೇರಿ ಒಂದು ಕ್ರಮ ಕೈಗೊಳ್ಳಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಹೀಗಂತಲ್ಲಾ ಅಂತ ಶಶಾಂಕ್‌ಗೆ ಕೇಳಿದ್ರೆ, 'ಇಲ್ಲಿ ಯಾವುದೇ ಪೂರ್ವಗ್ರಹ ಇಲ್ಲ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶದಿಂದ ನಾವು ಹಾಗೆ ಮಾಡಿಲ್ಲ. ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಪ್ರೇಕ್ಷಕರು ಯೋಗರಾಜ್ ಭಟ್ ಸಿನಿಮಾ ಎಂದು ಥಿಯೇಟರಿಗೆ ಬರುತ್ತಾರೆ. ಸೂರಿ ಸಿನಿಮಾ ಬರುತ್ತಿದೆ ಎಂದು ಕಾಯುತ್ತಿದ್ದಾರೆ. ಆ ಅರ್ಥದಲ್ಲಿ ಒಂದು ಕ್ವಾಲಿಟಿ ಸಿನಿಮಾ ಮೂಡಿಬರಲು ಒಬ್ಬ ಸಮರ್ಥ ನಿರ್ದೇಶಕನ ಅಗತ್ಯವಿದೆ ಎಂದು ಹೇಳಿದ್ದೇನೆ...' ಎಂದಿದ್ದಾರೆ.
ಒಟ್ಟಾರೆ ಶಶಾಂಕ್ ನೀಡಿರುವ ವಿವರ ನಿರ್ಮಾಪಕರನ್ನು ಅರ್ಥ ಮಾಡಿಸುತ್ತಾ ಗೊತ್ತಿಲ್ಲ. ಒಟ್ಟಾರೆ ವಿವಾದ ಇನ್ನಷ್ಟು ಕಾವು ಪಡೆಯುತ್ತಾ ಅನ್ನುವುದನ್ನು ಕಾದು ನಡಬೇಕಿದೆ.