ಪುನೀತ್ ರಾಜ್‌ಕುಮಾರ್‌ಗಾಗಿ ಕುರಿ ಬಲಿ ಕೊಟ್ಟ ಅಭಿಮಾನಿಗಳು!
MOKSHA
ಇದೆಂಥಾ ದುರ್ಗತಿ ನೋಡಿ. ಏನೂ ಮಾಡದ ಮುಗ್ಧ ಕುರಿಗೆ ಇಂಥಾ ಶಿಕ್ಷೆ ಯಾಕೋ ಗೊತ್ತಿಲ್ಲ. ಒಟ್ಟಾರೆ ಇದನ್ನು ಅಭಿಮಾನದ ಅತಿರೇಕವೆನ್ನೋಣವೋ ತಿಳಿಯದು. ಆದರೆ ಒಟ್ಟಾರೆ ಕುರಿ ಮಾತ್ರ ಪ್ರಾಣ ಕಳೆದುಕೊಂಡಿದೆ.
ಕುರಿ ಸುದ್ದಿಗೂ ಸಿನಿಮಾಕ್ಕೂ ಏನು ಸಂಬಂಧ ಎನ್ನಬೇಡಿ. ವಿಷಯ ಇಷ್ಟೇ. ನೆಚ್ಚಿನ ನಟ ಪುನಿತ್ ರಾಜಕುಮಾರ್‌ಗೆ ಅಭಿಮಾನಿ ಯುವಕರ ಗುಂಪೊಂದು ಕುರಿ ಬಲಿ ನೀಡಿ ಶುಕ್ರವಾರ ಅಂದಾಭಿಮಾನ ಪ್ರದರ್ಶಿಸಿತು.
ಪುನಿತ್ ನಟನೆಯ ಚಿತ್ರ 'ಪೃಥ್ವಿ' ಪ್ರದರ್ಶನಗೊಳ್ಳುತ್ತಿರುವ ಪಟ್ಟಣದ ಅಪರ್ಣಾ ಚಿತ್ರಮಂದಿರದಲ್ಲಿ ನೂರಾರು ಜನರ ಕಣ್ಣ ಮುಂದೆ ಯುವಕರ ಅಟ್ಟಹಾಸಕ್ಕೆ ಕುರಿ ಪ್ರಾಣಬಿಟ್ಟಿತು. ತಾಲೂಕಿನ ಯರಮಲದೊಡ್ಡಿಯ 20 ಯುವಕರ ಗುಂಪು ಪೃಥ್ವಿ ಚಿತ್ರದ ಪೋಸ್ಟರ್ ಇದ್ದ ಸ್ಟಾರ್ ಜತೆಗೆ ಕುರಿ ಹಿಡಿದುಕೊಂಡು ತಪ್ಪಡಿ ಬಾರಿಸುತ್ತ ಚಿತ್ರಮಂದಿರದ ಆವರಣದೊಳಗೆ ಪ್ರವೇಶಿಸಿತು.
ಬೆಳಗಿನ ಪ್ರದರ್ಶನದ ಕೆಲ ನಿಮಿಷ ಮುನ್ನ ಜೋರಾಗಿ ತಪ್ಪಡಿ ಬಾರಿಸಿ ಕೇಕೆ ಹಾಕಿದ ಯುವಕರು ಕುರಿ ಕುತ್ತಿಗೆ ಕೊಯ್ದರು. ಪುನಿತ್ ಪೋಸ್ಟರುಗಳಿಗೆ ರಕ್ತ ಸಿಂಪಡಿಸಿದರು. ನಂತರ ಊರಿಗೆ ತೆರಳಿ ಕುರಿ ಮಾಂಸದ ಊಟ ಚಪ್ಪರಿಸಿದರು! ಸುತ್ತಲೂ ಸೇರಿದ್ದ ಜನರಿಗೆ ಇದೊಂದು ಅನೀರೀಕ್ಷಿತ ಆಘಾತವಾಗಿತ್ತು. ಸದ್ದು ಮಡುತ್ತಲೇ ಬಂದ ಅಭಿಮಾನಿಗಳು ಮಾಡಿದ ಕಾರ್ಯ ಜನರ ಸದ್ದಡಗಿಸಿ ಬಿಟ್ಟಿತ್ತು. ಆದರೆ ಜನರೆಲ್ಲರೂ ಅಲ್ಲೇ ಏನೂ ಮಾಡದಂತವರಾಗಿ ಸ್ತಂಭೀಭೂತರಾದರು.
ಚಿತ್ರನಟರೊಬ್ಬರ ಅಭಿಮಾನಿಗಳಾಗಿ ಅವರ ಹೆಸರು ಉಳಿಸುವ ಕಾರ್ಯ ಮಾಡದೆ, ಈ ರೀತಿ ಕಳೆದದ್ದು ಮಾತ್ರ ವಿಪರ್ಯಸ. ಆದರೆ, ಅನ್ಯಾಯವಾಗಿ ಪ್ರಾಣ ಕಳೆದುಕೊಂಡ ಕುರಿಗೆ ಯಾವ ತಪ್ಪು ಮಾಡಿದ್ದಕ್ಕಾಗಿ ಈ ಶಿಕ್ಷೆ?