ನಟಿ ಮೇಘನಾ ನಿಮಗೆಲ್ಲಾ ಗೊತ್ತಿರಲೇ ಬೇಕು. ಎನ್ಆರ್ಐ ಹುಡುಗಿ. ಇದೇ ಕಾರಣಕ್ಕೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅವರಿಗೆ ಇಂಥದ್ದೇ ರೋಲ್ ಸಿಕ್ಕಿದ್ದವು. ಈಗೊಂದು ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಹೌದು ಅತ್ಯಂತ ಮಾಡ್ ಹುಡುಗಿ, ತುಂಡು ಲಂಗದ ಚೆಲುವೆ, ವಿದೇಶದಿಂದ ಬಂದ ಹುಡುಗಿ ಈ ರೀತಿ ಸಾಲು ಸಾಲು ಮಾಡ್ ಅಭಿನಯಕ್ಕೆ ಮೀಸಲಾಗಿದ್ದ ನಟಿಗೆ ಡೆಡ್ಲಿ ಸೋಮ-2ರಲ್ಲಿ ಒಂದು ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಹಳ್ಳಿ ಹುಡುಗಿಯಾಗಿ ಇವರು ಕಾಣಿಸಿಕೊಳ್ಳಲಿದ್ದಾರಂತೆ.
ಮಣ ಭಾರದ ಬಟ್ಟೆ, ಆಭರಣ, ಮೇಕಪ್ ಹೊತ್ತು ನಿಜಕ್ಕೂ ಬೇಸರ ಆಗಿತ್ತು. ನಾನು ವಿದೇಶದಲ್ಲಿ ಬದುಕಿದ್ದ ಕಾರಣ ಅಲ್ಲಿಗೆ ಹೋಲುವ ಪಾತ್ರವನ್ನೇ ನೀಡಲಾಗುತ್ತಿತ್ತು. ನನಗೂ ಏಕತಾನತೆಯಿಂದ ಬೇಸರ ಬಂದಿತ್ತು. ಸಾಮಾನ್ಯವಾಗಿ ವಿದೇಶದಲ್ಲಿ ನನ್ನ ಬದುಕು ಹೇಗಿತ್ತೋ ಹಾಗೆಯೇ ಇರುವ ಪಾತ್ರ ಸಿಕ್ಕವು. ಅದರಲ್ಲಿ ಒಂದು ವಿಶೇಷತೆ ಇರಲಿಲ್ಲ. ಆದರೆ ಈಗ ಹಳ್ಳಿ ಹುಡುಗಿ ಪಾತ್ರ ನೀಡಲಾಗಿದೆ. ಹಗುರವಾದ ಲಂಗ ದಾವಣಿ ತೊಟ್ಟು ಓಡಾಡುವ ಲವಲವಿಕೆಯ ಹುಡುಗಿ ಪಾತ್ರ ನನ್ನದು ಎನ್ನುತ್ತಾರೆ.
ಕೇವಲ ಹುಬ್ಬು, ಕಣ್ಣಿಗೆ ಒಂದಿಷ್ಟು ಬಣ್ಣ ಬಳಿದಿದ್ದು ಬಿಟ್ಟರೆ ಬೇರೆ ಮೇಕಲ್ ಇಲ್ಲ. ಸರಳ ಪಾತ್ರ ಉತ್ತಮ ಜೀವಂತಿಕೆ ನೀಡುವ ಅವಕಾಶ ಇದೆ. ಅದನ್ನು ಬಳಸಿಕೊಳ್ಳುವಲ್ಲಿ ನಾನು ಸಫಲನಾಗಿದ್ದೇನೆ. ಚಿತ್ರ ತಂಡಕ್ಕೆ ನನ್ನ ಅಭಿನಂದನೆ. ನನ್ನ ಪ್ರತಿಭೆಯನ್ನು ಬೇರೆ ರೀತಿ ಅನಾವರಣಗೊಳಿಸಲು ಹೊರಟಿದ್ದಾರೆ. ಇದಕ್ಕಾಗಿ ಚಿರಋಣಿ ಎನ್ನುತ್ತಾರೆ.
ವೆಂಕಟ ಇನ್ನ ಸಂಕಟ ಚಿತ್ರದಲ್ಲಿ ಕಂಡ ಮೇಘನಾ ಬೇರೆ, ಈ ಚಿತ್ರದ ಮೇಘನಾ ಬೇರೆ ಅನ್ನಿಸಿದರೆ ಅದಕ್ಕೆ ನೀವು ಯಾರನ್ನೂ ಆಕ್ಷೇಪಿಸುವಂತಿಲ್ಲ ಬಿಡಿ.