ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿಕ್ಕಸಿಕ್ಕವರೆಲ್ಲ ಸಿನಿಮಾಕ್ಕೆ ಬರಬೇಡ್ರೀ: ರಂಗಾಯಣ ರಘು (Rangayana Raghu | Bullet Prakash | Kannada Cinema | Aithalakadi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗದಲ್ಲಿ ಅಭಿನಯ ಬಾರದ ಹೊಸ ಹುಡುಗರು, ಚಿತ್ರ ನಟರ ಮಕ್ಕಳ ಆಗಮನ ಭರಾಟೆ ಕೊಂಚ ಕಡಿಮೆ ಆಗಿದೆ. ಇದು ನಮ್ಮ ರಂಗಾಯಣ ರಘು ಅವರಿಗೆ ಕೊಂಚ ನೆಮ್ಮದಿ ತಂದಿದೆಯಂತೆ. ಏಕೆಂದರೆ ದುನಿಯಾ ವಿಜಯ್ ಹಾಗೂ ಮುಂಗಾರು ಮಳೆ ಗಣೇಶ್ ಆಗಮನವಾಗಿ ಗೆಲುವು ಸಾಧಿಸಿದ್ದನ್ನೇ ಆಧಾರವಾಗಿ ಇಟ್ಟುಕೊಂಡು ಸಾಕಷ್ಟು ಹೊಸ ಹುಡುಗರು ನಟರಾಗಲು ಮುಂದಾದರು. ಹಲವರು ನೆಲ ಕಚ್ಚಿದ್ದಾರೆ. ಕೆಲವರು ಕೊನೆಯ ಹಂತದ ಪ್ರಯತ್ನದಲ್ಲಿದ್ದಾರೆ. ಸಿಕ್ಕ ಸಿಕ್ಕವರೆಲ್ಲಾ ಚಿತ್ರರಂಗಕ್ಕೆ ಬರಲು ಯತ್ನಿಸಿದರೆ ಅದರಿಂದ ಒಳ್ಳೆಯದು ಆಗದು ಎನ್ನುತ್ತಾರೆ ಮಾರ್ಮಿಕವಾಗಿ ಈ ರಂಗಾಯಣ ರಘು.

ಅದೇನೇ ಇರಲಿ, ಈಗ ಬುಲೆಟ್ ಪ್ರಕಾಶ್ ಹಾಗೂ ರಂಗಾಯಣ ರಘು ಕಾಂಬಿನೇಷನ್‌ಗೆ ಜನ ಓಕೆ ಹೇಳಿದ್ದಾರೆ. ಐತಲಕ್ಕಡಿ ಪರವಾಗಿಲ್ಲ ಅಂತ ಓಡುತ್ತಿದೆ. ಇದೊಂದು ಹಾಸ್ಯ ಚಿತ್ರವನ್ನು ತಮ್ಮ ಮನಸ್ಸಿಗೆ ಬಂದಂತೆ ಅಭಿನಯಿಸಿದ್ದೇವೆ. ಅಭಿನಯ ಸ್ವಾತಂತ್ರ್ಯ ನಮಗಿಲ್ಲಿ ಸಿಕ್ಕಿದೆ ಎಂದು ಹೇಳುವ ಮೂಲಕ ರಘು ಹೊಸದೊಂದು ಮಗ್ಗುಲಿನ ಪರಿಚಯ ಮಾಡಿದ್ದಾರೆ.

ನಾವು ನಾವೇ ಮಾಡಿಕೊಂಡ ಚಿತ್ರ ಆಗಿದ್ದರಿಂದ ಯಾವುದೇ ನಿಯಮ, ನಿರ್ಬಂಧ ಇರಲಿಲ್ಲ. ಸಾಕಷ್ಟು ಸಾರಿ ನಾಟಕದ ಸನ್ನಿವೇಶದಂತೆ, ಸಮಯಕ್ಕೆ ಸಿಕ್ಕ ಮಾತುಗಳನ್ನೇ ಹೊಂದಿಸಿ ಸ್ಕ್ತ್ರಿಪ್ಟ್ ನಿಯಮ ಮೀರಿಯೂ ಹೋಗಿದ್ದೇವೆ. ಇದರಿಂದಲೇ ಚಿತ್ರವೀಡೀ ನ್ಯಾಚುರಲ್ ಆಗಿ ಬಂದಿದೆ ಎನ್ನುತ್ತಾರೆ ರಘು.

ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಇವರಿಗೆ ದಿನಗಳ ಬಗ್ಗೆ ಅಷ್ಟು ಅರಿವಿರಲಿಲ್ಲ. ಆಟೊ ಶಂಕರ್ ಚಿತ್ರದಲ್ಲಿ ಶಿಲ್ಪಾಶೆಟ್ಟಿಗೆ ಅಸಿಸ್ಟೆಂಟ್ ಆಗಿದ್ದ ಇವರು ಚಿತ್ರ ತಂಡಕ್ಕೆ ನೀಡಿದ ಡೇಟ್ 45 ದಿನಗಳಂತೆ. ಅಸಲಿ ಈ ಚಿತ್ರದ ನಾಯಕಿ ಶಿಲ್ಪಾ ಅವರು ನೀಡಿದ್ದು 35 ದಿನ ಮಾತ್ರ. ಆದರೆ ಇದೀಗ ಅವರೂ ಬುದ್ದಿವಂತರಾಗಿದ್ದಾರೆ. ಐತಲಕ್ಕಡಿ ಚಿತ್ರದುದ್ದಕ್ಕೂ ಇದ್ದರೂ, ನೀಡಿದ್ದ ಡೇಟ್ಸ್ ಮಾತ್ರ 15 ದಿನಗಳು.

ಇತ್ತೀಚೆಗೆ 9 ಗಂಟೆ ಕುಳಿತು ಮಲೆಗಳಲ್ಲಿ ಮದುಮಗಳು ನಾಟಕ ನೋಡಿದ ಇವರು ಇನ್ನೊಮ್ಮೆ ನಾಟಕ ಮಾಡುವ ಕ್ರೇಜ್ ಹುಟ್ಟಿಸಿಕೊಂಡಿದ್ದಾರೆ. ನಾಟಕ ನೋಡಿ ಜನರು ಪಟ್ಟ ಖುಶಿ ಇದಕ್ಕೆ ಕಾರಣ. ಅಂದು ಜನರ ಭಾವನೆ ಕಂಡು ನಾನು ಥ್ರಿಲ್ ಆದೆ. ನಿಜಕ್ಕೂ ಚಿತ್ರಕ್ಕಿಂತ ನಾಟಕರಂಗದಲ್ಲಿ ಜೀವವಿದೆಯೇನೋ ಅನ್ನಿಸುತ್ತದೆ ಎಂದಿದ್ದಾರೆ. ಎಷ್ಟಾದರೂ, ರಂಗಭೂಮಿಯಿಂದಲೇ ಜೀವ ಪಡೆದ ನಟರಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಂಗಾಯಣ ರಘು, ಬುಲೆಟ್ ಪ್ರಕಾಶ್, ಕನ್ನಡ ಸಿನಿಮಾ, ಮಲೆಗಳಲ್ಲಿ ಮದುಮಗಳು, ಐತಲಕ್ಕಡಿ