ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಖಿತಾ ಕೈಗೆ ದಕ್ಕಿದ ಪ್ರೇಮ ಚಂದ್ರಮ (Nikhitha | Prema Chandrama | Prem | Vamshi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
'ಪ್ರೇಮ ಚಂದ್ರಮ.. ಕೈಗೆ ಸಿಗುವುದೇ.. ಹೇಳೆ ತಂಗಾಳಿ..' ಸುಶ್ರಾವ್ಯವಾಗಿ ಹಾಡುತ್ತಿರುವ ಕಂಠ ಯಾವುದು ಅಂತ ಹುಡುಕಿ ಹೋದರೆ, ಕಂಡದ್ದು ನಟಿ ನಿಖಿತಾರನ್ನು.

ಇದೇನು ನಟಿ ಗಾಯಕಿಯಾಗ ಹೊರಟರೇ ಅಂತ ನೋಡಿದರೆ, ನಿಮ್ಮ ಊಹೆ ಸುಳ್ಳು. ಏಕೆಂದರೆ ಈಗ ಈಕೆ ಪ್ರೇಮ ಚಂದ್ರಮ ಚಿತ್ರದ ನಾಯಕಿ. ಈಗಾಗಲೇ ವಂಶಿ, ದುಬೈ ಬಾಬು, ಬಾಸ್ ಮತ್ತಿತರ ಕೆಲ ಚಿತ್ರಗಳಲ್ಲಿ ನಟಿಸಿದ ನಿಖಿತಾ ಈಗ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ದರ್ಶನ್ ತೂಗುದೀಪ್ ಅಭಿನಯದ ಅರ್ಜುನ್ ಚಿತ್ರ ನಿರ್ದೇಶಿಸಿರುವ ಶಾಹುರಾಜ್ ಶಿಂಧೆ ಈ ಚಿತ್ರಕ್ಕೆ ನಿರ್ದೇಶಕರು. ನೆನಪಿರಲಿ ಚಿತ್ರ ಖ್ಯಾತಿಯ ನಾಯಕ ಪ್ರೇಮ್ ಈ ಚಿತ್ರದ ನಾಯಕರು. ಹಾಗೆ ಸುಮ್ಮನೆ ಚಿತ್ರದ ಕಿರಣ್ ಕೂಡ ಇದಕ್ಕೆ ಸಾಥ್ ನೀಡುತ್ತಿದ್ದಾರೆ.

ಗಣೇಶ್ ವಿ.ವಿ., ಜಿ. ಕೃಷ್ಣಪ್ಪ, ಜಗದೀಶ್ ಹಾಗೂ ಸುನೀಲ್ ಕುಮಾರ್ ಶಿಂಧೆ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಇದುವರೆಗೂ ಸಾಹಸ ಸಿನಿಮಾಗೆ ಮೊರೆ ಹೋಗಿದ್ದ ಶಿಂಧೆ ಇದೀಗ ಜನರ ಮೇಲೆ ಪ್ರೀತಿಯ ಬಲೆ ಬೀಸಲು ಮುಂದಾಗಿದ್ದಾರೆ.

ಚೆಲ್ಲಾಟ, ತುಂಟಾಟದಲ್ಲಿಯೇ ಮುಳುಗಿರುವ ಪಾತ್ರದಲ್ಲಿ ಈ ಚಿತ್ರದಲ್ಲಿ ನಿಖಿತಾ ಅಭಿನಯಿಸಲಿದ್ದಾರೆ. ಶ್ರೀನಾಥ್, ಉಮಾಶ್ರೀ, ಸುಮಿತ್ರಾ ಮತ್ತಿತರ ದೊಡ್ಡ ತಾರಾ ಬಳಗವೇ ಚಿತ್ರಕ್ಕಿದೆ. ಜೂ. 19ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಖಿತಾ, ಪ್ರೇಮ ಚಂದ್ರಮ, ಪ್ರೇಮ್, ವಂಶಿ