ನಮ್ಮ ಮಿಮಿಕ್ರಿ ದಯಾನಂದ್ ಕೈಗೆ ಕಾಮಿ ಸ್ವಾಮಿ ಸಿಕ್ಕಿ ಬಿದ್ದಿದ್ದಾರೆ. ಹೌದು, ಕಾಮಿ ಸ್ವಾಮಿ ಹೆಸರಿನ ಹೊಸ ವೀಡಿಯೊ ಆಲ್ಬಂನ್ನು ಮಿಮಿಕ್ರಿ ದಯಾನಂದ್ ಹೊರತಂದಿದ್ದಾರೆ.
ಕೆಲ ಸ್ವಾಮಿಗಳಿಂದಾಗಿ ಇಂದು ಸಾಮೀಜಿಗಳ ವಲಯದಲ್ಲಿ ಯಾರಿಗೂ ಗೌರವ ಇಲ್ಲದಂತೆ ಅಗಿದೆ. ಪ್ರತಿಯೊಂದು ಮಠಾಧೀಶರನ್ನೂ ಜನ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಇದರಿಂದ ಸ್ವಾಮಿ ನಿಷ್ಠೆ ಬಗ್ಗೆ ಪಾಠ ಹೇಳಲು ದಯಾನಂದ್ ಈ ವೀಡಿಯೊ ಸಿಡಿ ಮಾಡಿದ್ದಾರಂತೆ.
ಹೀಗಾಗಿ ಇದರಲ್ಲಿ ಅವರು ಯಾರಿಗೂ ಬೈದಿಲ್ಲ. 1 ಗಂಟೆ 10 ನಿಮಿಷದ ಈ ಸಿಡಿಯಲ್ಲಿ ಹಾಸ್ಯಕ್ಕೇನು ಕೊರತೆ ಇಲ್ಲವಂತೆ. ಇದರಲ್ಲಿನ ಒಂದು ವಿಶಿಷ್ಟ ಪಾತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯ ಸಹ ಅಭಿನಯಿಸಿದ್ದಾರಂತೆ. ತಮಗೆ ಬೇಕಾದ ಬಟ್ಟೆಯನ್ನು ಸಹ ಅವರೇ ಸಿದ್ಧಪಡಿಸಿಕೊಂಡಿದ್ದಾರಂತೆ.
ಆನಂದ್ ಆಡಿಯೋ ಇದನ್ನು ಹೊರತಂದಿದೆ. ಬಿಡುಗಡೆಯೂ ಇತ್ತೀಚೆಗೆ ಆಗಿದೆ. ವಿಶೇಷ ಅಂದರೆ ಅಮೆರಿಕಾದಿಂದ ಈಗಾಗಲೇ 500 ಸಿಡಿಗಳಿಗೆ ಬೇಡಿಕೆ ಬಂದಿದೆಯಂತೆ. ಮನರಂಜನೆಗೆ ಇದರಿಂದ ಮೋಸವಾಗದು ಅನ್ನುತ್ತಾರೆ ದಯಾನಂದ್.
ಒಟ್ಟಾರೆ ಈ ಹಿಂದೆ ಆನಂದ್ ಆಡಿಯೋ ಮೂಲಕ 'ದಯಾನಂದ್ ಧಮಾಕಾ' ಹೊರತಂದು ಯಶಸ್ಸು ಕಂಡಿತ್ತು. ಇದೀಗ ಮತ್ತೊಂದು ಯತ್ನಕ್ಕೆ ಕೈ ಹಾಕಿದೆ. ಇಲ್ಲೂ ಯಶಸ್ಸು ಖಂಡಿತ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಆಲ್ ದಿ ಬೆಸ್ಟ್ ದಯಾನಂದ್.