ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಗನ ಜೊತೆಗೆ ನಟಿಸಲಿರುವ ಜಗ್ಗೇಶ್ (Jaggesh | Gururaj | Kannada Cinema | Lift Kodla | Komal)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನವರಸ ನಾಯಕ ಜಗ್ಗೇಶ್ ರಾಜಕೀಯ ಹಾಗೂ ಚಿತ್ರರಂಗ ಎರಡನ್ನೂ ಸಮಾನವಾಗಿ ಕೊಂಡೊಯ್ಯುತ್ತಿದ್ದಾರೆ. ರಾಜಕೀಯ ಒಂದೆಡೆಯಾದರೆ, ಬಿಡುವಿನಲ್ಲಿ ಚಿತ್ರರಂಗ ಅಂತ ಒಂದಾದ ಮೇಲೆ ಒಂದು ದೋಣಿಯಂತೆ ಎರಡೂ ದೋಣಿಯಲ್ಲೂ ಸಂಚರಿಸುತ್ತಿದ್ದಾರೆ.

ಇವರ ಜೀವನದ ಮಹತ್ವಾಕಾಂಕ್ಷೆಯ ದಿನ ಹತ್ತಿರವಾಗುತ್ತಿದೆಯಂತೆ. ಮಗನೊಟ್ಟಿಗೆ ಸೇರಿ ಚಿತ್ರದಲ್ಲಿ ನಟಿಸುವ ಮೂಲಕ ಮಗನಿಗೊಂದು ಉತ್ತಮ ಬ್ರೇಕ್ ನೀಡುವುದು ಇವರ ಅಭಿಲಾಶೆಯಂತೆ. ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡುತ್ತಿದ್ದಾರೆ. ಇವರ ಹಾಗೂ ಮಗನ ಕಾಂಬಿನೇಷನ್ ಚಿತ್ರ ನಿರ್ಮಿಸಲು 10ಕ್ಕೂ ಹೆಚ್ಚು ನಿರ್ಮಾಪಕರು ಕಾದು ಕುಳಿತಿದ್ದಾರಂತೆ. ಅದಕ್ಕೆ ಸ್ವಂತ ಬ್ಯಾನರ್ ಅಡಿ ಚಿತ್ರ ತರುವುದಿಲ್ಲ ಅನ್ನುತ್ತಾರೆ ಜಗ್ಗೇಶ್.

ನಾನು ನಟನಷ್ಟೇ. ಚಿತ್ರದಲ್ಲಿ ನಾನಂದುಕೊಂಡಂತೆ ಶೇ.50ರಷ್ಟು ಅಭಿನಯಿಸುತ್ತೇನೆ. ಇದರಿಂದ ನಾನೂ ಒಬ್ಬ ನಿರ್ದೇಶಕ. ನನಗೆ ಬೇಕನ್ನಿಸಿದ್ದನ್ನು ನಿರ್ದೇಶಕರಿಗೆ ಹೇಳಿ ಒಪ್ಪಿಸುತ್ತೇನೆ. ಇದರಿಂದ ಸದ್ಯಕ್ಕೆ ಪೂರ್ಣ ಪ್ರಮಾಣದ ನಿರ್ದೇಶಕನಾಗುವ ಆಸೆ ಇಲ್ಲ. ಸದ್ಯಕ್ಕೆ ಉತ್ತಮವಾಗಿ ಅಭಿನಯಿಸಿದರೆ ಸಾಕು. ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಮಾಡಿದರೆ ಸಾಕಾಗುತ್ತದೆ. ಇಂದು ಮಾಡಬೇಕಾದವರು ತಮ್ಮ ಕೆಲಸ ಮಾಡುತ್ತಿಲ್ಲ. ಅದರಿಂದಲೇ ಕನ್ನಡ ಚಿತ್ರರಂಗ ಸೋಲುತ್ತಿದೆ ಎನ್ನುತ್ತಾರೆ.

ಜನ ಟಿವಿ ನೋಡುತ್ತಾ ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇದರಿಂದ ಕನ್ನಡ ಚಿತ್ರಗಳು ಸೋಲುತ್ತಿವೆ. ಒಂದು ಬದಲಾವಣೆ ಗಾಳಿ ಬೀಸಲೇ ಬೇಕಿದೆ.

ತಮ್ಮ ಕೋಮಲ್ ಬಗ್ಗೆ ಕೇಳಿದರೆ ಆತ ನನ್ನ ಮಗನಿದ್ದಂತೆ. ತುಂಬಾ ಒಳ್ಳೆಯ ರೀತಿ ಬೆಳೆದಿದ್ದಾನೆ. ಕಷ್ಟಪಟ್ಟು ಹಂತ ಹಂತವಾಗಿ ಈ ಮಟ್ಟ ತಲುಪಿದ್ದಾನೆ. ಶ್ರಮಕ್ಕೆ ಬೆಲೆ ಇದೆ ಅನ್ನುವುದು ಆತನನ್ನು ನೋಡಿದಾಗ ಅರಿವಾಗುತ್ತದೆ ಎನ್ನುತ್ತಾರೆ. ಸದ್ಯ ತಮ್ಮ ಲಿಫ್ಟ್ ಕೊಡ್ಲಾ ಚಿತ್ರದಲ್ಲಿ ಬ್ಯುಸಿ ಆಗಿರುವ ಜಗ್ಗಣ್ಣ, ಹತ್ತು ಹಲವು ಚಿತ್ರಗಳಿಗೆ ಸಹಿ ಹಾಕಿಕೊಂಡಿದ್ದು, ಅದರ ಚಿಂತೆಯಲ್ಲೇ ಮುಳುಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಗ್ಗೇಶ್, ಗುರುರಾಜ್, ಕನ್ನಡ ಸಿನಿಮಾ, ಲಿಫ್ಟ್ ಕೊಡ್ಲಾ, ಕೋಮಲ್