ಚೆಲುವಿನ ಚಿತ್ತಾರದ ಚೆಂದುಳ್ಳಿ, ಕನ್ನಡ ಚಿತ್ರರಂಗದ ಹದಿಹರೆಯದ ಬೆಡಗಿ ಅಮೂಲ್ಯ ನಿರ್ದೇಶಕ ರತ್ನಜರನ್ನು ಪ್ರೀತಿಸುತ್ತಿದ್ದಾರಾ? ಚುಂಬಿಸಿದ್ದಾರಾ? ಈ ಪ್ರಶ್ನೆಗೆ ಉತ್ತರ ಖಂಡಿತಾ ಗೊತ್ತಿಲ್ಲ. ಆದರೆ, ಅಮೂಲ್ಯ ಹಾಗೂ ರತ್ನಜರನ್ನೇ ಹೋಲುವ ಮುಖಗಳು ಪರಸ್ಪರ ಚುಂಬಿಸುವ ಫೋಟೋ ಈಗ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಮೊಬೈಲುಗಳಲ್ಲಿ ಹರಿದಾಡುತ್ತಿದೆ.
ಹೌದು. ಈ ಸುದ್ದಿಯೀಗ ಗಾಂಧಿನಗರದಲ್ಲಿ ಹಾಟ್ ಸುದ್ದಿಯ ಸದ್ಯ ಒಂದು ಫೋಟೋ ಬಿಡುಗಡೆಯಾಗಿದ್ದು, ಇದು ಮೊಬೈಲುಗಳಲ್ಲಿ ಹರಿದಾಡುತ್ತಿದೆ. ಫೋಟೋ ನೋಡಿದರೆ ಅಮೂಲ್ಯರಂತೆಯೇ ಕಾಣುತ್ತಿದ್ದು, ಚುಂಬನ ಸ್ವೀಕರಿಸುತ್ತಿರುವ ವ್ಯಕ್ತಿಯ ಮುಖ ಥೇಟ್ ರತ್ನಜರನ್ನೇ ಹೋಲುತ್ತಿದ್ದು ಅಧಿಕೃತವಾಗಿ ಈ ವ್ಯಕ್ತಿಗಳು ಯಾರು ಎಂಬ ವಿವರ ಫೋಟೋಗಳಲ್ಲಿ ಇಲ್ಲ. ಆದರೆ ಗಾಂಧಿನಗರದಲ್ಲೆಲ್ಲಾ, ಇದು ಅಮೂಲ್ಯ ಹಾಗೂ ರತ್ನಜ ಪರಸ್ಪರ ಚುಂಬಿಸುತ್ತಿರುವ ದೃಶ್ಯ ಎಂದೇ ಹೇಳಲಾಗುತ್ತಿದೆ.
PR
ಆದರೂ ಈ ಫೋಟೋ ನಿಜವಾದುದೇ ಅಥವಾ ಗ್ರಾಫಿಕ್ಸ್‌ಗಳಿಂದ ತಯಾರಿಸಿದ್ದೇ ಎಂಬ ಗುಮಾನಿಗಳೂ ಇದೀಗ ಹುಟ್ಟಿಕೊಳ್ಳುತ್ತಿದೆ. ಆದರೆ ಫೋಟೋದ ಕೆಳಗೆ ಫೋಟೋ ತೆಗೆದ ದಿನಾಂಕ ಮುದ್ರಿತವಾಗಿದೆ. 2009ರ ಸೆಪ್ಟೆಂಬರ್ 6 ರಾತ್ರಿ 9.20 ಗಂಟೆಗೆ ಈ ಚಿತ್ರ ತೆಗೆಯಲಾಗಿದೆ ಎಂದು ಫೋಟೋ ನೋಡಿದರೆ ಹೇಳಬಹುದು. ವಿಶೇಷವೆಂದರೆ 2009ರ ಸೆಪ್ಟೆಂಬರ್ ತಿಂಗಳಲ್ಲಿ ರತ್ನಜ ನಿರ್ದೇಶನದ ಪ್ರೇಮಿಸಂ ಚಿತ್ರದ ಶೂಟಿಂಗ್‌ನಲ್ಲಿ ಅಮೂಲ್ಯ ಭಾಗವಹಿಸಿದ್ದರು! ಬೆಳಗಾವಿಯಲ್ಲಿ ಈ ಸಂದರ್ಭ ಶೂಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ. ಜೊತೆಗೆ ಪ್ರೇಮಿಸಂ ಚಿತ್ರೀಕರಣ ಸಂದರ್ಭ ಅಮೂಲ್ಯ ಹಾಗೂ ರತ್ನಜ ನಡುವೆ ಪ್ರೇಮ ಅಂಕುರಿಸಿತ್ತು ಎಂಬ ಗಾಸಿಪ್ ಕೂಡಾ ಹರಡಿತ್ತು. ಆದರೆ ಇದರ ಬಗ್ಗೆ ಖಚಿತ ಮಾಹಿತಿಗಳಿಲ್ಲ.
ಆದರೆ ಈ ಫೋಟೋ ಅಸ್ಪಷ್ಟವಾಗಿರುವುದರಿಂದ ಇದು ಅಮೂಲ್ಯ- ರತ್ನಜರೇ ಅಥವಾ ಅವರನ್ನು ಹೋಲುವ ಬೇರೆ ವ್ಯಕ್ತಿಗಳೇ ಎಂಬುದು ತಿಳಿದು ಬಂದಿಲ್ಲ. ಜೊತೆಗೆ ಇಂಥದ್ದೇ ಇನ್ನೂ ವಿವಿಧ ಒಂಬತ್ತು ಫೋಟೋಗಳಿದ್ದು, ಇವೆಲ್ಲವೂ ಸದ್ಯದಲ್ಲೇ ಬಿಡುಗಡೆಯಾಗಲಿವೆ ಎಂಬ ವದಂತಿಯೂ ಹರಡುತ್ತಿದೆ.
MOKSHA
ರತ್ನಜಾಗೆ ಬ್ಲ್ಯಾಕ್‌ಮೇಲ್: ಆದರೆ ರತ್ನಜ ಅವರು ಈ ಸುದ್ದಿಯನ್ನು ಸಂಪೂರ್ಣ ತಳ್ಳಿಹಾಕಿದ್ದು, ಈ ಫೋಟೋದಲ್ಲಿರುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. ಜೊತೆಗೆ ಈ ಹಿಂದೆ 'ಇಂಥ ಫೋಟೋಗಳು ತಮ್ಮ ಬಳಿ ಇವೆ. ಹಣ ಕೊಟ್ಟರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲ್ಲ' ಎಂದು ಅನಾಮಧೇಯ ವ್ಯಕ್ತಿ ಈ ಹಿಂದೆ ತಮಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಆದರೆ ನಾನು ಅಂಥ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬ ಧೈರ್ಯ ನನಗಿದ್ದುದರಿಂದ ನಾನು ಅವರ ಮಾತಿಗೆ ಸೊಪ್ಪು ಹಾಕಿಲ್ಲ ಎಂದು ರತ್ನಜ ತಿಳಿಸಿದ್ದಾರೆ.
ನನ್ನ ಮಗಳಲ್ಲ-ಅಮೂಲ್ಯಾ ತಾಯಿ: ಅತ್ತ ಅಮೂಲ್ಯ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಳಿತಿದ್ದಾರೆ. ಅಮೂಲ್ಯರ ಅಮ್ಮ ವಿಜಯಲಕ್ಷ್ಮಿ ಹೇಳುವಂತೆ, ಈ ಫೋಟೋ ನೋಡಿ ನಮಗೆ ಶಾಕ್ ಆಗಿದೆ. ನಮ್ಮ ಮಗಳು ಇಂಥವಳಲ್ಲ. ಆಕೆ ಯಾವತ್ತೂ ಹೀಗೆ ವರ್ತಿಸಿಲ್ಲ ಎಂಬುದು ನನಗೆ ಅಮ್ಮನಾಗಿ ಗೊತ್ತಿದೆ. ಹೀಗೆ ಬೇಕಂತಲೇ ಯಾರೋ ಸೃಷ್ಟಿ ಮಾಡಿದ್ದಾರೆ. ಅವಳು ಚಿತ್ರರಂಗಕ್ಕೆ ಬಂದಂದಿನಿಂದಲೇ ನಾನು ಆಕೆಯ ಜೊತೆ ಪ್ರತಿ ನಿಮಿಷವೂ ಶೂಟಿಂಗಲ್ಲೂ ಇರ್ತಿದ್ದೆ. ಆಕೆ ಹೀಗೆ ಮಾಡಲು ಸಾಧ್ಯವೇ ಇಲ್ಲ. ನಮ್ಮದು ಸಂಪ್ರದಾಯಿಕ ಕುಟುಂಬ. ನಮ್ಮನ್ನು ಹಾಗೂ ರತ್ನಜಾರನ್ನು ತುಳಿಯುವ ಪ್ರಯತ್ನ ಇದು. ನಮಗೆ ಆಗದವರು ಯಾರೋ ಇಂಥ ಮಸಿ ಬಳಿಯುವ ಪ್ರಯತ್ನ ನಡೆಸಿದ್ದಾರೆ, ಇಂಥ ಪ್ರಕರಣ ನಡೆದಾಗ ನಮಗೆ ಇಂಥ ಕೆಟ್ಟ ಫೀಲ್ಡಿನಲ್ಲಿ ಇರಬೇಕಾ ಅಂತ ಅನಿಸುತ್ತೆ. ಅಮೂಲ್ಯ ಕೂಡಾ ತುಂಬಾ ಅಪ್‌ಸೆಟ್ ಆಗಿದ್ದಾರೆ. ಚಿತ್ರರಂಗದ ಸಹವಾಸವೇ ಬೇಡ ಅನಿಸುತ್ತೆ ಎಂದು ಬೇಸರಿಸಿಕೊಂಡರು.
ಇದೇ ವೇಳೆ ಅನಾಮಿಕ ವ್ಯಕ್ತಿ ಮಾಧ್ಯಮದ ವರದಿಗಾರರಿಗೂ ಕರೆ ಮಾಡಿ ನನ್ನ ಬಳಿ ಇಂಥದ್ದೇ ಇನ್ನೂ 10 ಫೋಟೋಗಳಿವೆ. ದುಡ್ಡು ಕೊಟ್ಟರೆ ನೀಡುತ್ತೇನೆ ಎಂದು ತಿಳಿಸುತ್ತಿದ್ದಾನೆ. ಹಾಗಾಗಿ ಇದು ಬ್ಲ್ಯಾಕ್‌ಮೇಲ್ ತಂತ್ರಗಾರಿಕೆಯೋ ಎಂಬ ಗುಮಾನಿ ಹೆಚ್ಚಿದೆ. ಹಾಗಾಗಿ ಇಂದು ಗ್ರಾಫಿಕ್ಸ್ ಕರಾಮತ್ತು ಎಂಬ ಸಂಶಯವೂ ಬಲವಾಗಿದೆ.