ರಾಜಕೀಯದ ಒತ್ತಡದ ನಡುವೆಯೂ ಇನ್ನಷ್ಟು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ ಎಂದು ನಟ ಜಗ್ಗೇಶ್ ಹೇಳಿಕೊಂಡಿದ್ದಾರೆ. ಹೌದು. ನಿಜಕ್ಕೂ ನಟ ಹಾಗೂ ರಾಜಕಾರಣಿಯಾಗಿ ಗೆದ್ದ ಏಕೈಕ ವ್ಯಕ್ತಿ ಇವರೇ ಇರಬೇಕು. ಎರಡೂ ಕಡೆ ಸಮಾನ ಪ್ರಾಶಸ್ತ್ಯ ನೀಡುವ ಮೂಲಕ ಇವರು ಜನಾನುರಾಗಿಗಳಾಗಿ ಎರಡು ಪ್ರಮುಖ ಕ್ಷೇತ್ರದಲ್ಲಿ ಮುಂದಡಿ ಇಡುತ್ತಿದ್ದಾರೆ.
ನಟನೆ ನನ್ನ ಒಂದು ಕಾಲಾದರೆ, ರಾಜಕೀಯ ಇನ್ನೊಂದು. ಒಂದಾದ ನಂತರ ಒಂದನ್ನು ಇರಿಸಿದರೆ, ಮುಂದೆ ಸಾಗಬಹುದು. ನಿಂತರೆ ಎರಡೂ ನಿಂತೇ ಇರುತ್ತವೆ. ಒಟ್ಟಿಗೆ ಹೆಜ್ಜೆ ಇಡಲು ಹೋದರೆ ಬೀಳಬೇಕಾಗುತ್ತದೆ. ಆದ್ದರಿಂದ ತಾವು ಎರಡೂ ಹೆಜ್ಜೆಯನ್ನೂ ನಯ, ನಾಜೂಕಾಗಿ ಇಡುತ್ತಿದ್ದೇನೆ ಅನ್ನುತ್ತಾರೆ.
ರಾಜಕೀಯ ಒಂದು ಕಡೆ ಇದ್ದೇ ಇರುತ್ತದೆ. ಅದರ ಜತೆಜತೆಯಲ್ಲೇ ಮಠ, ಎದ್ದೇಳು ಮಂಜುನಾಥ ಮತ್ತಿತರ ವಿಭಿನ್ನ ಗೆಟಪ್ಪಿನ ಚಿತ್ರಗಳಲ್ಲಿ ನಟಿಸಬೇಕು. ಜನ ನನ್ನಿಂದ ನಾನಾ ವಿಧದ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅದಕ್ಕೆ ನ್ಯಾಯ ಸಲ್ಲಿಸಬೇಕಾದ್ದು ಒಬ್ಬ ಕಲಾವಿದನ ಕರ್ತವ್ಯ. ನಾನು ರಾಜಕೀಯಕ್ಕೆ ಬರುವ ಮುನ್ನ ನಟನಾಗಿ ಗುರುತಿಸಿಕೊಂಡವನು ಎಂದು ಹೇಳಿಕೊಳ್ಳುತ್ತಾರೆ. ಇವೆಲ್ಲವುಗಳ ಜೊತೆಗೆ, ನಿಜವಾಗಿ ಹೇಳಬೇಕೆಂದರೆ ತನ್ನ ಸಿನಿಮಾಕ್ಕಿಂತಲೂ ತನ್ನ ಪುತ್ರ ಗುರುರಾಜ್‌ರನ್ನು ಚಿತ್ರರಂಗದಲ್ಲಿ ಕೂಲೂರಿಸಲು ಹರಸಾಹಸ ಪಡು್ತತಿರುವುದರಲ್ಲೇ ಜಗ್ಗೇಶ್ ಹೆಚ್ಚು ಬ್ಯುಸಿಯಾಗಿದ್ದಾರೆ ಎನ್ನಬಹುದೇನೋ!