ದೊಡ್ಡ ಸೆಟ್ ಹಾಕುವ ವಿಷಯದಲ್ಲಿ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಬಿಟ್ಟರೆ ಬೇರೊಬ್ಬ ಉತ್ತಮ ವ್ಯಕ್ತಿ ಕಾಣಸಿಗಲಾರ. ತಮ್ಮದೇ ಆದ ಕಲ್ಪನೆಯಿಂದ ಹೆಜ್ಜೆಗಳಿಗೆ ಹೊಸ ಹೊಳಪು ಕೊಡುವ ಕಾರ್ಯವನ್ನು ಇವರು ಮಾಡುತ್ತಾ ಬಂದಿದ್ದಾರೆ.
ಇದೀಗ ಇವರು ಕನ್ನಡದ 'ಕಾರ್ತಿಕ್' ಸಿನಿಮಾಗೂ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಇವರು ಇಂದು ಬಾಲಿವುಡ್‌ನಲ್ಲಿ ಅತ್ಯಂತ ಬ್ಯುಸಿ ವ್ಯಕ್ತಿ. ಸಾಕಷ್ಟು ಜವಾಬ್ದಾರಿಯುತ ಕೆಲಸವನ್ನು ಹೆಗಲಿಗೆ ಹೊತ್ತಿರುವ ಚಿನ್ನಿ, ಮಾತಿಗೆ ಸಿಗುವುದೇ ವಿರಳ.
ಅಂದಹಾಗೇ ಚಿನ್ನಿ ಹಾಗೂ ರೇಖಾ ಪ್ರಕಾಶ್ ದಂಪತಿಗೆ ಕನ್ನಡದ ಮೇಲೆ ಅದೇನೋ ಅವಿನಾಭಾವ ಸಂಬಂಧ. ಇಲ್ಲಿಯ ನೆಲದಲ್ಲಿ ಕೆಲಸ ಮಾಡುವುದೇ ಒಂದು ಹೆಮ್ಮೆ. ಅದು ಅವರಾಡುವ ಪ್ರತಿ ಮಾತಲ್ಲೂ ವ್ಯಕ್ತವಾಗುತ್ತದೆ. ನಿಮಗೆ ಗೊತ್ತಿರಬೇಕು-ಒಂದು ಕಾಲದ ಟ್ರೆಂಡ್ ಸೆಟ್ಟರ್ ಪ್ರೇಮಲೋಕ ಚಿತ್ರದಲ್ಲಿರುವ ಹತ್ತೂ ಹಾಡುಗಳ ನೃತ್ಯ ಸಿಂಚನ ಇದೇ ಚಿನ್ನಿ ಅವರದ್ದು!
ನಿತ್ಯ ಬದಲಾಗುವ ಸನ್ನಿವೇಶಗಳ ನಡುವೆ ಕನ್ನಡ ಚಿತ್ರ ನಿರ್ಮಾಪಕರೂ ಶ್ರೀಮಂತ ಚಿತ್ರ ನಿರ್ಮಿಸುತ್ತಿದ್ದಾರೆ. ಇದಕ್ಕೆ ತಕ್ಕ ಉದಾಹರಣೆಯೂ ಸಿಗುತ್ತಿದೆ. ಹೀಗಿರುವಾಗ ನಮ್ಮವ ಹಾಗೂ ನಮ್ಮವರ ಮೇಲೆ ಅಭಿಮಾನವಿರುವ ಚಿನ್ನಿ ಪ್ರಕಾಶ್‌ರನ್ನು ಕರೆಸಿ ಅದ್ಧೂರಿ ಸೆಟ್ ಹಾಕಿಸುವ ಕಾರ್ಯವನ್ನೂ ನಮ್ಮವರು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ಬೆಳೆಯುತ್ತಿದೆ, ಬೆಳಗುತ್ತಿದೆ ಅನ್ನಲು ಇಷ್ಟು ಸಾಕು.
ಆಲ್ ದಿ ಬೆಸ್ಟ್ ಆಲ್ ಆಫ್ ಯು...