ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿಂದೋಡಿ ವಿಜಯ ಕುಮಾರರ ಶಂಭೋ ಶಂಕರ (Chindodi | Theatre | Kannada Cinema | Shambho Shankara)
ಸುದ್ದಿ/ಗಾಸಿಪ್
Bookmark and Share Feedback Print
 
ರಂಗಭೂಮಿಯಲ್ಲಿ ಚಿಂದೋಡಿಗೆ ಒಂದು ಉನ್ನತ ಹೆಸರಿದೆ. ಆ ವಂಶದ ಕುಡಿ ಚಿಂದೋಡಿ ವಿಜಯ್ ಕುಮಾರ್ ಒಬ್ಬರು. ಕನ್ನಡ ಚಿತ್ರರಂಗದಲ್ಲಿ 11 ಚಿತ್ರ ಪೂರೈಸಿರುವ ಇವರು ಇಂದಿಗೂ ಇದರಿಂದ ಸಾಕಷ್ಟು ಕಲಿಯುತ್ತಲೇ ಇದ್ದಾರಂತೆ.

3ನೇ ವರ್ಷದಲ್ಲಿದ್ದಾಗಲೇ ಚಿತ್ರದಲ್ಲಿ ನಟಿಸಿ ಪುಟ್ಟಣ್ಣನವರಿಂದ ಭೇಷ್ ಅನ್ನಿಸಿಕೊಂಡಿದ್ದ ವಿಜಯ್ ಈಗಲೂ ಚಿತ್ರ ನಿರ್ಮಾಣ ಅಂದರೆ ಒಂದಿಷ್ಟು ಅಂಜುತ್ತಾರೆ, ಅಳುಕುತ್ತಾರೆ. ಇತ್ತೀಚೆಗೆ ಅವರ ಶಂಭೋಶಂಕರ ಚಿತ್ರದ ಚಿತ್ರೀಕರಣದಲ್ಲೂ ಅದೇ ಸ್ಥಿತಿ ಎದುರಾಯಿತು. ಇಬ್ಬರು ಹೆಂಡಿರ ನಡುವೆ ಸಿಕ್ಕಿ ನರಳುವ ಶಂಕರನ ಕುರಿತಾದ ಕಾಮಿಡಿ ಚಿತ್ರ ಇದು. ಹುಟ್ಟು ಹಾಸ್ಯ ಪ್ರತಿಭೆ ಆಗಿರುವ ವಿಜಯ್‌ಗೆ ಇದು ಅಷ್ಟೇನು ಸವಾಲಾಗಿ ಕಾಡದು. ಆದರೂ ಒಂದಿಷ್ಟು ತುಮುಲ, ಗೊಂದಲ ಹಾಗೂ ದುಗುಡ ಇವರಲ್ಲಿ ಎದ್ದು ಕಾಣುತ್ತಿತ್ತು.

ತಮ್ಮ 11 ಚಿತ್ರದಲ್ಲಿ 8 ಚಿತ್ರದವರೆಗೂ ತಾವೊಬ್ಬ ವಿದ್ಯಾರ್ಥಿಯಾಗಿಯೇ ಇದ್ದೆ. ಕ್ರೇಜಿ ಕುಟುಂಬದಲ್ಲಿ ರಮೇಶ್ ಒಂದು ವಿಭಿನ್ನ ಅವಕಾಶ ನೀಡಿದರು. ಸಿಕ್ಕಾಪಟ್ಟೆ ಮನರಂಜನಾತ್ಮಕ ಈ ಚಿತ್ರ ನನಗೆ ಬ್ರೇಕ್ ನೀಡಿತು ಎನ್ನುತ್ತಾರೆ. ಇವರ ಅಭಿನಯದ ಶಂಭೋಶಂಕರ ಜೂನ್ ಕೊನೆ ಅಥವಾ ಜುಲೈನಲ್ಲಿ ತೆರೆಕಾಣಲಿದೆ. ಆಲ್ ದಿ ಬೆಸ್ಟ್ ಅನ್ನೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿಂದೋಡಿ, ರಂಗಭೂಮಿ, ಕನ್ನಡ ಸಿನೆಮಾ, ಶಂಭೋ ಶಂಕರ