ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿನ್ನೈತಾಂಡಿ ವರುವಾಯ ಕನ್ನಡಕ್ಕೆ: ರಮ್ಯಾ ದಿಗಂತ್ ಜೋಡಿ! (Vinnaithaandi Varuvaya | Kannada Cinema | Ramya | Diganth | Goutham Vasudeva Menon)
ಸುದ್ದಿ/ಗಾಸಿಪ್
Bookmark and Share Feedback Print
 
PR
ರಮ್ಯಾ ಹಾಗೂ ದಿಗಂತ್ ಮತ್ತೆ ಒಂದಾಗಲಿದ್ದಾರೆ. ಈ ಹಿಂದೆ ಮೀರಾ ಮಾಧವ ರಾಘವ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ರಮ್ಯಾ, ದಿಗಂತ್ ಎರಡನೇ ಬಾರಿಗೆ ಮತ್ತೆ ಜೊತೆಯಾಗಿ ಬಣ್ಣ ಹಚ್ಚಲಿದ್ದಾರೆ. ತಮಿಳಿನಲ್ಲಿ ಈಗಾಗಲೇ ಶತಕ ಬಾರಿಸಿರುವ ವಿನ್ನೈತಾಂಡಿ ವರುವಾಯ ಚಿತ್ರದ ರಿಮೇಕ್‌ಗೆ ರಮ್ಯಾ ಹಾಗೂ ದಿಗಂತ್ ಜೋಡಿಯಾಗಲಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ, ತಮಿಳಿನ ಈ ವಿನ್ನೈತಾಂಡಿ ವರುವಾಯ ಚಿತ್ರವನ್ನು ಭಾರೀ ಹಣ ಕೊಟ್ಟು ರಿಮೇಕ್ ಹಕ್ಕನ್ನು ಪಡೆಯುವ ಮೂಲಕ ಯಾರೂ ಕನ್ನಡಕ್ಕೆ ಕರೆತರುತ್ತಿಲ್ಲ. ಸ್ವತಃ, ವಿನ್ನೈತಾಂಡಿ ಚಿತ್ರದ ನಿರ್ದೇಶಕ ಗೌತಮ್ ವಾಸುದೇವ ಮೆನನ್ ಅವರೇ ಇದೀಗ ತಮ್ಮದೇ ಚಿತ್ರ ವಿನ್ನೈತಾಂಡಿ ವರುವಾಯವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತೀರ್ಮಾನಿಸಿದ್ದಾರೆ. ಆದರೆ ನಿರ್ದೇಶನವನ್ನೂ ಅವರೇ ಹೊತ್ತಿದ್ದಾರಾ ಎಂಬುದಿನ್ನೂ ಬಹಿರಂಗವಾಗಿಲ್ಲ.

ತಮಿಳಿನಲ್ಲಿ ತ್ರಿಶಾ ಹಾಗೂ ಸಿಂಬು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ರಿಮೇಕ್ ಕನ್ನಡ ಅವತರಣಿಕೆಯಲ್ಲಿ ದಿಗಂತ್ ಹಾಗೂ ರಮ್ಯಾ ನಟಿಸಲಿದ್ದಾರೆ ಎಂಬ ಗುಲ್ಲು ಹಬ್ಬಿದೆ. ರಮ್ಯಾ ಈಗಾಗಲೇ ಗೌತಮ್ ನಿರ್ದೇಶನದ ವಾರಣಂ ಆಯಿರಂ ಚಿತ್ರದಲ್ಲಿ ನಟಿಸಿರುವುದರಿಂದ ರಮ್ಯಾ ನಟನೆ ಬಗ್ಗೆ ಗೌತಮ್‌ಗೆ ಮೆಚ್ಚುಗೆಯಿದೆ. ಹಾಗಾಗಿ ನಾಯಕಿಯಾಗಿ ರಮ್ಯಾರನ್ನೇ ಆಯ್ಕೆ ಮಾಡಲಿದ್ದಾರೆ. ಆದರೆ ದಿಗಂತ್ ಜೊತೆಗೆ ಕೆಲಸ ಮಾಡಿದ ಅನುಭವ ಗೌತಮ್‌ಗೆ ಇಲ್ಲ. ಆದರೂ, ದಿಗಂತ್ ಅಭಿನಯದ ಹಲವು ಚಿತ್ರಗಳು ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದು, ಹಾಗೂ ದಿಗಂತ್ ಮುದ್ದು ಮುಖ ಗೌತಮ್ ಅವರನ್ನು ಮೋಡಿ ಮಾಡಿದೆ ಎನ್ನಲಾಗಿದೆ.

ಗೌತಮ್ ದಿಗಂತ್ ಅವರ ಫೋಟೋಗಳು ಹಾಗೂ ಹಾಡುಗಳನ್ನು ನೋಡಿರುವುದರಿಂದ ನಾಯಕನಾಗಿ ದಿಗಂತ್ ಆಯ್ಕೆ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಉಳಿದ ತಾರಾಗಣದ ವಿವರಗಳು ಇನ್ನೂ ಅಂತಿಮವಾಗಿಲ್ಲ. ಚಿತ್ರದ ಶೀರ್ಷಿಕೆಯೂ ಇನ್ನೂ ಅಂತಿಮಗೊಂಡಿಲ್ಲ.

ಈಗಾಗಲೇ ಹಲವಾರು ಭಾಷೆಗಳಲ್ಲಿ ವಿನ್ನೈತಾಂಡಿ ವರುವಾಯ ಚಿತ್ರವನ್ನು ರಿಮೇಕ್ ಮಾಡಲು ಆಫರ್ ಬಂದರೂ ನಾನು ಕನ್ನಡದಲ್ಲಿ ಈ ಚಿತ್ರ ನಿರ್ಮಿಸಲು ನಿರ್ಧರಿಸಿದ್ದೇನೆ. ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ತೊಡಗಲು ಹೊರಟಿರುವುದು ನನಗೆ ಖುಷಿಯಾಗಿದೆ ಎಂದು ಗೌತಮ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿನ್ನೈತಾಂಡಿ ವರುವಾಯ, ರಮ್ಯಾ, ದಿಗಂತ್, ಕನ್ನಡ ಸಿನೆಮಾ, ಗೌತಮ್ ವಾಸುದೇವ ಮೆನನ್