ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಐದೊಂದ್ಲಾ ಐದು: ಮತ್ತೆ ಬರಲಿದೆ ದೇವರಾಜ್ ಶ್ರುತಿ ಜೋಡಿ (Shruthi | Devaraj | Aidondla Aidu | Kannada Cinema)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಿತ್ರ ವಿಚಿತ್ರ ಹೆಸರಿನ ಚಲನಚಿತ್ರಗಳು ರಾಜ್ಯದಲ್ಲಿ ಸುದ್ದಿ ಮಾಡುತ್ತಿವೆ. ಉತ್ತಮ ಕಥೆ, ನಿರ್ದೇಶನ, ಛಾಯಾಗ್ರಹಣ, ನಟನೆ ಇದ್ದರೆ ಚಿತ್ರ ಗೆಲ್ಲುತ್ತವೆ ಎಂಬ ನಂಬಿಕೆ ಹಲವರದ್ದು. ಕೆಲವರಿಗೆ ವಿಚಿತ್ರ ಹೆಸರಿನಿಂದಲೂ ಚಿತ್ರ ಗೆಲ್ಲಬಹುದು ಅನ್ನುವ ನಂಬಿಕೆ ಇರುವುದೇ ಇಂಥಾ ಚಿತ್ರ ವಿಚಿತ್ರ ಹೆಸರಿನ ಚಿತ್ರಗಳ ಹುಟ್ಟಿಗೆ ಕಾರಣವಾಗಿದೆ!

ಇದಕ್ಕೆ ಹೊಸ ಸೇರ್ಪಡೆ 'ಐದೊಂದ್ಲಾ ಐದು'. ಚಿತ್ರದ ನಾಯಕ ದೇವರಾಜ್. ಈ ಚಿತ್ರದಲ್ಲಿ ಐದು ಕಥೆಗಳು ಲೀನವಾಗಿದೆಯಂತೆ. ಅದಕ್ಕಾಗಿಯೇ ಈ ವಿಚಿತ್ರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ ಅನ್ನಲಾಗುತ್ತಿದೆ. ಮೂರು ನದಿ ಸೇರಿದರೆ ತ್ರಿವೇಣಿ ಸಂಗಮ ಆಗುತ್ತೆ. ಅದೇ ರೀತಿ ಐದು ಕಥೆ ಸೇರಿಸಿದರೆ ಒಂದು ಸಿನಿಮಾ ಆಗುತ್ತದೆ ಎನ್ನುವ ಲಾಜಿಕ್ ಇಲ್ಲಿ ಮಾಡಲಾಗಿದೆ.
MOKSHA


ಹಿಂದೆ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಹೆಸರಿನ ಚಿತ್ರ ಮಾಡಿದ್ದರು. ಅಲ್ಲಿ ಮೂರು ಕಥೆಗಳು ಸೇರಿಕೊಂಡಿದ್ದವು. ಇದೀಗ ಮೂಡಿ ಬರುತ್ತಿರುವ ಈ ಚಿತ್ರ ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿದೆ. ಒಂದು ವಿಭಿನ್ನ ಚಿತ್ರವನ್ನು ಸಿದ್ಧಪಡಿಸಿದ್ದೇವೆ ಎನ್ನುತ್ತಾರೆ ಚಿತ್ರ ತಂಡದವರು. ಒಟ್ಟಾರೆ ಹಿಂದಿ, ಇಂಗ್ಲೀಷಿನಲ್ಲಿ ಈ ಮಾದರಿಯ ಚಿತ್ರ ಸಾಕಷ್ಟು ಬಂದಿವೆ. ಕನ್ನಡಕ್ಕೆ ಮಾತ್ರ ಹೊಸ ಯತ್ನ ಅನ್ನಹುದು.

ದೇವರಾಜ್‌ಗೆ ಜೋಡಿಯಾಗಿ ಶ್ರುತಿ ಇದ್ದಾರೆ. ಚಿತ್ರ ಬದುಕಿನ ಎರಡನೇ ಇನಿಂಗ್ಸಿನಲ್ಲಿ ಶ್ರುತಿ ಒಪ್ಪಿದ ಐದನೇ ಚಿತ್ರವಿದು. ನಿರ್ದೇಶನವನ್ನು ಕೆ.ವಿ.ಪ್ರಕಾಶ್ ಮಾಡಲಿದ್ದಾರೆ. ಜಯಪ್ರಕಾಶ್ ಕೂಳೂರು ಅವರ ಜನಪ್ರಿಯ ಹದಿನೆಂಟು ಕತೆಗಳಲ್ಲಿ ಐದನ್ನು ಅವರು ಆಯ್ದುಕೊಂಡಿದ್ದಾರೆ. ತಾರಾಗಣದಲ್ಲಿ ಸಿಹಿಕಹಿ ಚಂದ್ರು, ಪದ್ಮಪ್ರಿಯಾ, ನಿತ್ಯಾ ಮೊದಲಾದವರಿದ್ದಾರೆ. ನಟ ಅನಿರುದ್ದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ, ದೇವರಾಜ್, ಐದೊಂದ್ಲಾ ಐದು, ಕನ್ನಡ ಸಿನೆಮಾ