ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 50 ರೂಪಾಯಿಗೆ ಮಗಳನ್ನು ಮಾರಲಿರುವ ಶ್ರುತಿ! (Shruthi | Kannada Cinema | Vasudev Alur | Mahender)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಮಹೇಂದರ್ ಜೊತೆ ವಿಚ್ಛೇದನ ಪಡೆದ ಶ್ರುತಿಗೆ ಏನಾಗಿದೆ? ಅದೇನಾತ್ಯೋ ಗೊತ್ತಿಲ್ಲ, ಶ್ರುತಿ ತನ್ನ ಮುದ್ದು ಮಗಳನ್ನು 50 ರೂಪಾಯಿಗಾಗಿ ಮಾರುತ್ತಿದ್ದಾರಂತೆ!

ಶ್ರುತಿಗ್ಯಾಕೆ ಇಂಥ ದುರ್ಗತಿ ಬಂತಪ್ಪಾ ಎನ್ನತ್ತಾ ಬೈಯಬೇಡಿ. ಇದು ಸಿನಿಮಾ. ಶ್ರುತಿ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಚಿತ್ರದ ಹೆಸರು 'ನಮ್ ಕಲ್ಯಾಣಿ'. ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿಸಲಿರುವ ಶ್ರುತಿ, ತಮ್ಮ ಮಗಳನ್ನು 50 ರೂಪಾಯಿಗೆ ಮಾರುವ ಸನ್ನಿವೇಶವಿದೆಯಂತೆ. ಅಂಥಾ ಕಠೋರ ತಾಯಿ ಹೃದಯವಿರುವ ಪಾತ್ರದಲ್ಲಿ ಈ ಬಾರಿ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ.

ಶ್ರುತಿ ಈ ಪಾತ್ರ್ಕಕಾಗಿ ತಮ್ಮ ದೇಹ ತೂಕವನ್ನು ಇಳಿಸಿಕೊಂಡು ಕೊಂಚ ತೆಳ್ಳಗಾಗಿದ್ದಾರಂತೆ. ಮಗುವನ್ನು ಮಾರಿದ ಬಳಿಕ ತಾಯ್ತನದ ಮಹತಚ್ವ ಅರಿವಾಗುವ ಹೃದಯ ಮಿಡಿಯುವ ದೃಶ್ಯಗಳಲ್ಲಿ ಶ್ರುತಿ ಕಾಣಿಸಿಕೊಂಡು ಮಹಿಳೆಯರ ಕಣ್ಣು ಒದ್ದೆ ಮಾಡಲು ಹೊರಟಿದ್ದಾರೆ. ಆದರೆ ಈ ಬಾರಿಯ ಪಾತ್ರ ಮಾತ್ರ ಕೊಂಚ ನೆಗೆಟಿವ್ ಶೇಡ್‌ನದು.

ಎಂಟು ವರ್ಷಗಳ ಹಿಂದೆ ಮಲ್ಲೇಶ್ವರಂನ 18ನೇ ಕ್ರಾಸ್ ಬಳಿ ತಾಯಿಯೊಬ್ಬಳು ಬಿಟ್ಟು ಹೋದ ಮಗುವಿಗೆ ಇರುವೆಗಳು ಮುತ್ತಿರುವ ಕಣ್ಣಾರೆ ನೋಡಿದ ಅನುಭವವನ್ನೇ ಕಥೆಯನ್ನಾಗಿ ಸಿನೆಮಾ ಮಾಡಲು ಹೊರಟಿದ್ದಾರೆ ವಾಸುದೇವ ಆಲೂರು. ಕ್ಲಾಪ್ ಬಾಯ್ ಆಗಿ ಸಿನಿಮಾ ರಂಗಕ್ಕೆ ಬಂದ ವಾಸು ಆಲೂರು 200ಕ್ಕೂ ಹೆಚ್ಚು ಚಿತ್ರಕಥೆಗಳನ್ನು ಬರೆದಿದ್ದಾರೆ. ಇದೀಗ ನಮ್ ಕಲ್ಯಾಣಿ ಮೂಲಕ ಮತ್ತೆ ಬರುತ್ತಿದ್ದಾರೆ. ಅವರಿಗೆ ಹಾಗೂ ಶ್ರುತಿಗೆ ಶುಭವಾಗಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರುತಿ, ಮಹೇಂದರ್, ವಾಸುದೇವ ಆಲೂರು, ಕನ್ನಡ ಸಿನೆಮಾ